ಉದ್ಯೋಗಿಗೆ ಬಾಸ್‌ ಕಳುಹಿಸಿದ ಮೇಲ್‌ ಇಂಟರ್‌ನೆಟ್‌ನಲ್ಲಿ ವೈರಲ್‌... ಅಂಥದ್ದೇನಿದ್ಯೋ?

By Suvarna NewsFirst Published Jan 19, 2022, 11:52 PM IST
Highlights
  • ಉದ್ಯೋಗಿಗೆ ಪತ್ರ ಬರೆದ ಬಾಸ್‌
  • ಬಾಸ್‌ನಿಂದ ಕಾಲ್‌ ಮೀ ಮೈಲ್‌
  • ಬಾಸ್‌ ಹೀಗಿದ್ರೆ ಚೆಂದ ಎಂದ ನೆಟ್ಟಿಗರು

ಕೆಲಸದ ಸ್ಥಳದಲ್ಲಿ ಬಾಸ್‌ಗಳು ಮೇಲ್‌ ಮಾಡ್ತಾರೆ ಅಂದ್ರೆ ಏನೋ ಮಹತ್ವದ ವಿಷಯ ಇರುತ್ತೇ ಅನ್ನೋದೇ ಎಲ್ಲರ ಯೋಚನೆ. ಆದರೆ ಇಲ್ಲೊಬ್ಬರು ನೀವು ಫ್ರಿ ಇದ್ದಾಗ ನನಗೆ ಕರೆ ಮಾಡಿ ಎಂದು ಉದ್ಯೋಗಿಗೆ ಮೇಲ್‌ ಮಾಡಿದ್ದು, ಈ ಮೇಲ್‌ ಈಗ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಬಾಸ್‌ ಹೀಗಿದ್ದರೆ ಚೆಂದ ಎಂದು ನೆಟ್ಟಿಗರು ಹಾಡಿ ಹೊಗಳಿದ್ದಾರೆ. 

ಟಿಕ್‌ಟಾಕ್‌ (TikTok) ಬಳಕೆದಾರಿಯಾಗಿರುವ ಯುವತಿ ಜೆಸ್ಸಿ ಎಂಬಾಕೆಗೆ ಆಕೆಯ ಬಾಸ್‌ ಕಳುಹಿಸಿದ ಇ-ಮೇಲ್‌ ಅನ್ನು ಆಕೆ ವಿಡಿಯೋ ಮಾಡಿದ್ದಾಳೆ. ವಿಡಿಯೋದಲ್ಲಿ ಆಕೆ, ಆತಂಕವೇ ಅದೂ ನನಗೆ ಎಂದಿಗೂ ಸಾಧ್ಯವಿಲ್ಲ. ಇದೊಂದು ಸಾಮಾನ್ಯ ಇ-ಮೇಲ್ ಪ್ರತಿಯೊಬ್ಬ ಬಾಸ್‌ ತನ್ನ ಉದ್ಯೋಗಿಗಳಿಗೆ ಕಳುಹಿಸಬೇಕಾದಂತಹ ಸಾಮಾನ್ಯ ಇ-ಮೇಲ್‌ ಎಂದು ತನ್ನ ಬಾಸ್‌ ತನಗೆ ಕಳುಹಿಸಿದ ಇ-ಮೇಲ್‌ನ ಸ್ಕ್ರೀನ್‌ಶಾಟ್‌ (screenshot) ಜೊತೆ ವಿಡಿಯೋ ಮಾಡಿದ್ದಾಳೆ.  ಇನ್ನು ಈಕೆಯ ಮೇಲಾಧಿಕಾರಿ ಈಕೆಗೆ ನೀವು ಸಮಯವಿದ್ದಾಗ ಕರೆ ಮಾಡಿ ಎಂದು ಮೇಲ್ ಮಾಡಿದ್ದರು.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಹೋದ್ಯೋಗಿ ಪತ್ನಿಗೆ ಉದ್ಯೋಗದ ಭರವಸೆ ನೀಡಿದ Zomato

ಆದರೆ ಸಾಮಾನ್ಯವಾಗಿ ಮೇಲಾಧಿಕಾರಿ ಮೇಲ್‌ ಬಂದಿದೆ ಎಂದಾಗ ಏನಾಗಿರಬಹುದು ಎಂದು ಚಿಂತೆಗೆ ಒಳಗಾಗುತ್ತಾರೆ. ಅಲ್ಲದೇ ಈ ವೇಳೆ ತಲೆಯಲ್ಲಿ ಹೊಳೆಯುವ ಮೊದಲ ಪ್ರಶ್ನೆ ಬಹುಶಃ ನನ್ನನ್ನು ಕೆಲಸದಿಂದ ತೆಗೆಯಬಹುದೋ ಏನೋ? ಅಥವಾ ನಾನೇನೋ ತಪ್ಪು ಮಾಡಿರಬಹುದೋ ಏನೋ ಎಂಬುದು. ಆದರೆ ಜೆಸ್ಸಿಯ ಮ್ಯಾನೇಜರ್‌ ಆಕೆಗೆ ಚಿಂತೆ ಮಾಡುವಂತಹದ್ದು ಏನು ಇಲ್ಲ. ಏನು ತಪ್ಪು ಆಗಿಲ್ಲ. ನೀವು ಹೇಗಿದ್ದೀರಾ ಎಂದು ತಿಳಿದುಕೊಳ್ಳುವ ಸಲುವಾಗಿಯಷ್ಟೇ ಈ ಸಂದೇಶ ಕಳುಹಿಸಲಾಗಿದೆ ಎಂದು ಹೇಳುತ್ತಾರೆ. 

ಜೆಸ್ಸಿಗೆ ಆಕೆಯ ಬಾಸ್‌(Boss) ಕಳುಹಿಸಿದ ಮೇಲ್ ಹೀಗಿದೆ. ನಿಮಗೆ ಸಮಯವಾದಾಗ ಕರೆ ಮಾಡಿ, ತೊಂದರೆಯಾಗುವಂತದ್ದು ಏನಿಲ್ಲ. ನಾವೇನು ಮಾತನಾಡಿಲ್ಲ. ನಾನು ನಿಮ್ಮ ರಜಾದಿನಗಳು ಹೇಗಿವೆ ಎಂದು ಕೇಳಲು ಬಯಸಿದೆ. ಇದರ ಹೊರತಾಗಿ ಬೇರೇನೂ ಇಲ್ಲ ಎಂದು ಮೇಲ್ ಮಾಡಿದ್ದರು. ಮ್ಯಾನೇಜರ್‌ ತನಗೆ ಕಳುಹಿಸಿದ ಮೇಲ್‌ ಅನ್ನು  ಜೆಸ್ಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, 6 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಮೇಲಾಧಿಕಾರಿಯ ಸರಳ ಹಾಗೂ ಪರಿಣಾಮಕಾರಿ ನಡೆಯನ್ನು ಶ್ಲಾಘಿಸಿದ್ದಾರೆ.

ಕಚೇರಿಗೆ ಬರುವ ಉದ್ಯೋಗಿಗಳಿಗೆ ವಾರಕ್ಕೊಮ್ಮೆ ಕೋವಿಡ್ 19 ಟೆಸ್ಟ್‌ ಕಡ್ಡಾಯ: ಗೂಗಲ್

ಅಲ್ಲದೇ ಇದಕ್ಕೆ ಬೆಸ್ಟ್‌ ಬಾಸ್‌ ಪ್ರಶಸ್ತಿ ಈ ಬಾಸ್‌ಗೆ ಸಲ್ಲಬೇಕು ಎಂದು ಲಿಂಕ್ಡಿನ್‌(LinkedIn) ಅಧಿಕೃತ ಟಿಕ್‌ಟಾಕ್‌ ಖಾತೆಯಲ್ಲಿ ಬರೆಯಲಾಗಿದೆ. ಇನ್ನು ಬಳಕೆದಾರರೊಬ್ಬರು ಇದೊಂದು ಸರಿಯಾದ ಮೇಲ್‌ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನನ್ನ ಬಾಸ್‌ ಮೀಟಿಂಗ್‌ ಮನವಿಯನ್ನು ಕ್ವಿಕ್‌ ಚಾಟ್‌ನಲ್ಲಿ ಹಾಕುತ್ತಾರೆ. ನನಗೆ ಇದರಿಂದ ಭಯವಿಲ್ಲ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ನಾನೂ ಕೂಡ ನನ್ನ ಉದ್ಯೋಗಿಗಳಿಗೆ ಹೀಗೆ ಮಾಡುವೆ ಎಂದಿದ್ದಾರೆ. 

click me!