ರಾಮ ಮಂದಿರ ಪ್ರಾಣಪ್ರತಿಷ್ಠೆ ರಜೆ ಪ್ರಶ್ನಿಸಿದವರಿಗೆ ಮುಖಭಂಗ, ಅರ್ಜಿ ತಿರಸ್ಕರಿಸಿದ ಹೈಕೋರ್ಟ್!

By Suvarna News  |  First Published Jan 21, 2024, 8:12 PM IST

ರಾಮ ಮಂದಿರ ಪ್ರಾಣಪ್ರತಿಷ್ಠಿ ಹಿನ್ನಲೆಯಲ್ಲಿ ಹಲವು ರಾಜ್ಯಗಳು ರಜೆ ಘೋಷಿಸಿದೆ. ಇನ್ನು ಆಸ್ಪತ್ರೆ ಸೇರಿದಂತೆ ಕೆಲ ಸಂಸ್ಥೆಗಳು ರಜೆ ಘೋಷಿಸಿದೆ. ಇದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಹಾಗೂ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಕೆಯಾಗಿತ್ತು. ರಜಾದಿನವಾದ ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಎರಡೂ ಅರ್ಜಿಯನ್ನು ತಿರಸ್ಕರಿಸಿದೆ.
 


ಮುಂಬೈ(ಜ.21) ಆಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಇಡೀ ದೇಶವೆ ಸಂಭ್ರಮದಲ್ಲಿ ಮುಳುಗಿದೆ. ಹಲವು ರಾಜ್ಯಗಳು ಪ್ರಾಣಪ್ರತಿಷ್ಠೆಗೆ ರಜೆ ಘೋಷಿಸಿದೆ. ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಿಸಿದೆ. ಆದರೆ ಪ್ರಾಣಪ್ರತಿಷ್ಠೆ ದಿನ ರಜೆ ಘೋಷಿಸಿದ ನಿರ್ಧಾರವನ್ನು ಕೆಲವರು ಪ್ರಶ್ನಿಸಿದ್ದರು. ಮಹಾರಾಷ್ಟ್ರದಲ್ಲಿ ಕಾನೂನು ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರೆ, ತಮಿಳುನಾಡಿನಲ್ಲಿ ಜವಾಹರಲಾಲ್ ವೈದ್ಯಕೀಯ ಶಿಕ್ಷಣ ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆ ಈ ನಿರ್ಧಾರವನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ಈ ಎರಡೂ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿ, ಸರ್ಕಾರದ ನಿರ್ಧಾರಕ್ಕೆ ತಡೆ ನೀಡುವುದಿಲ್ಲ ಎಂದಿದೆ.

ಮುಂಬೈನ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಹಾಗೂ ಗುಜರಾತ್‌ನ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಪ್ರಶ್ನಸಿ ಬಾಂಬೈ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿತ್ತು. ಇತ್ತ ಪಾಂಡಿಚೆರಿಯ ಜವಾಹರಲಾಲ್ ವೈದ್ಯಕೀಯ ಶಿಕ್ಷಣ ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆ ವಿದ್ಯಾರ್ಥಿಗಳು ಪಾಂಡಿಚೇರಿ ಸರ್ಕಾರ ನಿರ್ಧಾರ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ರಜಾ ದಿನವಾದ ಇಂದು ಎರಡೂ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಸಿತ್ತು.

Tap to resize

Latest Videos

ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಕರೆ, ಮೂರೇ ದಿನದಲ್ಲಿ ಆರೋಪಿ ಇಂತೇಖಾಬ್ ಅಲಂ ಅರೆಸ್ಟ್!

ಬಾಂಬೈ ಹೈಕೋರ್ಟ್‌ನಲ್ಲಿ ಜಸ್ಟೀಸ್ ಜಿಎಸ್ ಕುಲಕರ್ಣಿ ಹಾಗೂ ನೀಲಾ ಗೋಖಲೆ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ರಜಾ ದಿನ ಘೋಷಿಸುವ ಅಧಿಕಾರ ಸರ್ಕಾರಕ್ಕಿದೆ. ಈ ಅರ್ಜಿಗಳು ಸದುದ್ದೇಶದಿಂದ ಸಲ್ಲಿಸಲಾಗಿಲ್ಲ. ರಾಜಕೀಯ ಪ್ರೇರಿತವಾಗಿ ಸಲ್ಲಿಕೆಯಾಗಿರುವಂತಿದೆ. ಚುನಾಯಿತ ಸರ್ಕಾರದ ಕಾರ್ಯವ್ಯಾಪ್ತಿಯ ಪ್ರಶ್ನಿಸುವ ಈ ಅರ್ಜಿಯಲ್ಲಿ 1968 ಕೇಂದ್ರ ಅಧಿಸೂಚನೆಯನ್ನು ಉಲ್ಲೇಖಿಸಿಲ್ಲ. ಈ ರೀತಿಯ ಅರ್ಜಿಗಳನ್ನು ಮುಂದುವರಿಸದಂತೆ ಬಾಂಬೆ ಹೈಕೋರ್ಟ್ ಖಡಕ್ ಸೂಚನೆ ನೀಡಿತು.

ಮದ್ರಾಸ್ ಹೈಕೋರ್ಟ್‌ನಲ್ಲಿ ಜಸ್ಟೀಸ್ ಎಸ್‌ವಿ ಗಂಗಾಪುರ್ ವಾಲಾ ಹಾಗೂ ಭರತ್ ಚಕ್ರವರ್ತಿ ಅರ್ಜಿ ವಿಚಾರಣೆ ನಡೆಸಿದರು. ಈ ವೇಳೆ ಅರ್ಜಿಯಲ್ಲಿ ಪ್ರಸ್ತಾಪಿಸುರವ ಕಳವಳಕ್ಕೆ ಆಧಾರವಿಲ್ಲ.  ಜವಾಹರಲಾಲ್ ವೈದ್ಯಕೀಯ ಶಿಕ್ಷಣ ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆಯ ತುರ್ತು ವಿಭಾಗ ಸೇವೆ ಎಂದಿನಂತೆ ಇರಲಿದೆ ಎಂದಿದೆ. ತುರ್ತು ಅಗತ್ಯದ ಎಲ್ಲಾ ಸೇವೆಗಳ ಲಭ್ಯವಿರುವುದರಿಂದ ರಜೆ ನಿರ್ಧಾರವನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. 

ಬಿಜೆಪಿ ವಿರುದ್ಧ ಹೋರಾಡಿ, ಶ್ರೀರಾಮನ ವಿರುದ್ಧವಲ್ಲ, ತಮ್ಮ ನಾಯಕರಿಗೆ ಕಾಂಗ್ರೆಸ್ ಮುಖಂಡನ ಸಲಹೆ!

click me!