ಕಾಂಗ್ರೆಸ್ ಹೋರಾಟ ಬಿಜೆಪಿ ವಿರುದ್ದ ಇರಲಿ, ಆದರೆ ಶ್ರೀರಾಮನ ವಿರುದ್ಧ ಅಲ್ಲ ಎಂದು ಕಾಂಗ್ರೆಸ್ ನಾಯಕ ಸಲಹೆ ನೀಡಿದ್ದಾರೆ. ಇದೇ ವೇಳೆ ಶ್ರೀರಾಮ ಮಂದಿರ ನಿರ್ಮಾಣದ ಸಂಪೂರ್ಣ ಕ್ರೆಡಿಟ್ ಪ್ರಧಾನಿ ಮೋದಿಗೆ ನೀಡಿದ್ದಾರೆ. ಬೇರೆ ಯಾರೇ ಪ್ರಧಾನಿ ಆಗಿದ್ದರೆ, ಕೋರ್ಟ್ ತೀರ್ಪು ಬರುತ್ತಿರಲಿಲ್ಲ, ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರಲಿಲ್ಲ ಎಂದಿದ್ದಾರೆ.
ನವದೆಹಲಿ(ಜ.21) ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿ. ಜ.22ರಿಂದ ಪ್ರಧಾನಿ ನರೇಂದ್ರ ಮೋದಿ ಭವ್ಯ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿಸಲಿದ್ದಾರೆ. ಪ್ರಾಣಪ್ರತಿಷ್ಠೆಯನ್ನು ಕಾಂಗ್ರೆಸ್ ಹಾಗೂ ಕೆಲ ವಿಪಕ್ಷಗಳು ಬಹಿಷ್ಕರಿಸಿದೆ. ಇತ್ತ ಬಿಜೆಪಿ ಮಂದಿರ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ. ಕಾಂಗ್ರೆಸ್ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ತಮ್ಮದೇ ಪಕ್ಷದ ನಾಯಕ ಪ್ರಮೋದ್ ಆಚಾರ್ಯಕೃಷ್ಣಂ ಕಾಂಗ್ರೆಸ್ ವಿರುದ್ಧ ಗರಂ ಆಗಿದ್ದಾರೆ. ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರ ಹೋರಾಟ ಬಿಜೆಪಿ ವಿರುದ್ಧ ಇರಲಿ, ಆದರೆ ಭಗವಾನ್ ಶ್ರೀರಾಮನ ವಿರುದ್ಧ ಅಲ್ಲ ಎಂದು ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಪ್ರಾಣಪ್ರತಿಷ್ಠೆ ಬಹಿಷ್ಕಾರ ನಿರ್ಧಾರವನ್ನು ಸಮರ್ಥಿಸುವ ಭರದಲ್ಲಿ ಶ್ರೀರಾಮನಿಗೆ, ಈ ದೇಶದ ಜನರ ಭಾವನೆಗೆ ಅಪಮಾನ ಮಾಡಬೇಡಿ. ಇಲ್ಲಸಲ್ಲದ ಮಾತಗಳನ್ನಾಡಬೇಡಿ. ಭವ್ಯ ಮಂದಿರ ನಿರ್ಮಾಣವಾಗಿ ಪ್ರಾಣಪ್ರತಿಷ್ಠೆ ನಡೆಯುತ್ತಿದೆ. ರಾಮ ಭಕ್ತರು ಈ ದಿನಕ್ಕಾಗಿ ಕಾದಿದ್ದರು. ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ಶ್ರೀರಾಮನ ಎಳೆದು ತರಬೇಡಿ. ಶ್ರೀರಾಮನ ವಿರೋಧಿಸಬೇಡಿ ಎಂದು ಆಚಾರ್ಯ ಪ್ರಮೋದ್ ಸಲಹೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠೆ ನೇರಪ್ರಸಾರ ಬ್ಯಾನ್, ನಿರ್ಮಲಾ ಗಂಭೀರ ಆರೋಪ!
ಕಾಂಗ್ರೆಸ್ ರಾಮ ಮಂದಿರ ಪ್ರಾಣಪ್ರತಿಷ್ಠೆ ಆಹ್ವಾನ ತಿರಸ್ಕರಿಸುವುದು ಬೇಸರವಾಗಿದೆ ಎಂದು ಪ್ರಮೋದ್ ಆಚಾರ್ಯ ಹೇಳಿದ್ದಾರೆ. ಕಾಂಗ್ರೆಸ್ ಈ ನಿರ್ಧಾರ ಸರಿಯಲ್ಲ. ಚರ್ಚ್ ಪಾದ್ರಿ, ಮುಸ್ಲಿಂ ಸೇರಿದಂತೆ ಯಾರೂ ಕೂಡ ರಾಮಮಂದಿರ ಪ್ರಾಣಪ್ರತಿಷ್ಠೆ ಆಹ್ವಾನ ತಿರಸ್ಕರಿಸುವುದಿಲ್ಲ. ಶ್ರೀರಾಮ ಈ ದೇಶದ ಆತ್ಮ, ಭಗವಾನ್ ರಾಮನಿಲ್ಲದ ಭಾರತ ಕಲ್ಪಿಸಿಕೊಳ್ಳಲು ಅಸಾಧ್ಯ. ಆಹ್ವಾನ ತಿರಸ್ಕರಿಸುವುದು ಎಂದರೆ ಭಾರತದ ಸಂಸ್ಕೃತಿ, ಪರಂಪರೆ, ಆಸ್ಮಿತೆಗೆ ಮಾಡಿದ ಅವಮಾನ. ಭಾರತದ ನಾಗರೀಕತೆಗೆ ಮಾಡಿದ ಸಾವಲು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳಲ್ಲಿ ಒಂದು ಮನವಿ ಮಾಡುತ್ತೇನೆ. ನೀವು ಬಿಜೆಪಿ ವಿರುದ್ಧ ಹೋರಾಡಿ, ಪ್ರತಿಭಟನೆ ಮಾಡಿ, ಆದರೆ ಶ್ರೀರಾಮನ ವಿರುದ್ಧವಲ್ಲ. ಬಿಜೆಪಿ ವಿರುದ್ಧ ಹೋರಾಡಿ ಆದರೆ ಸನಾತನ ಧರ್ಮದ ವಿರುದ್ಧವಲ್ಲ. ಬಿಜೆಪಿ ವಿರುದ್ಧ ಹೋರಾಡಿ ಆದರೆ ಭಾರತದ ವಿರುದ್ಧವಲ್ಲ ಎಂದು ಪ್ರಮೋದ್ ಆಚಾರ್ಯ ಕೃಷ್ಣಂ ಕಿವಿ ಮಾತು ಹೇಳಿದ್ದಾರೆ.
ಪ್ರಧಾನಿ ಜಾಗದಲ್ಲಿ ನರೇಂದ್ರ ಮೋದಿ ಹೊರತುಪಡಿಸಿ ಇನ್ಯಾರೋ ಇದ್ದರೆ ಸುಪ್ರೀಂ ಕೋರ್ಟ್ ಇಷ್ಟು ಬೇಗ ತೀರ್ಪು ನೀಡಲು ಸಾಧ್ಯವಾಗುತ್ತಿರಲಿಲ್ಲ. ಇತರ ಸಮುದಾಯಕ್ಕೆ ನೋವಾಗುತ್ತದೆ ಎಂದು ರಾಮ ಮಂದಿರ ನಿರ್ಮಾಣವೂ ಆಗುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯಿಂದಲೇ ರಾಮ ಮಂದಿರ ನಿರ್ಮಾಣವಾಗಿದೆ. ಹೀಗಾಗಿ ಇದರ ಸಂಪೂರ್ಣ ಶ್ರೇಯಸ್ಸು ಮೋದಿಗೆ ಸಲ್ಲಲಿದೆ ಎಂದು ಪ್ರಮೋದ್ ಆಚಾರ್ಯ ಹೇಳಿದ್ದಾರೆ.
Ram Mandir: ಏನು ಹೇಳುತ್ತಿದೆ ತುಳಸಿದಾಸರ ಅಯೋಧ್ಯೆಯ ಇತಿಹಾಸ? ಅದೊಂದು ವರದಿಗಾಗಿ ವರ್ಷಗಟ್ಟಲೆ
