ರಾಮ ಮಂದಿರ ಪ್ರಾಣಪ್ರತಿಷ್ಠೆ ದಿನ ಭಗವಾನ್ ಶ್ರೀರಾಮನ ಮಂದಿರವನ್ನು ಸ್ಫೋಟಿಸುವುದಾಗಿ ಪೊಲೀಸರಿಗೆ ಬೆದರಿಕೆ ಕರೆ ಮಾಡಿದ್ದ ಆರೋಪಿ ಇಂತೇಖಾಬ್ ಅಲಂನನ್ನು ಪೊಲೀಸರು ಬಂಧಿಸಿದ್ದಾರೆ. ಉಗ್ರ ದಾವುದ್ ಇಬ್ರಾಹಿಂ ಆಪ್ತ ಚೋಟಾ ಶಕೀಲ್ ಗ್ಯಾಂಗ್‌ನ ಸದಸ್ಯ ಎಂದು ಬೆದರಿಕೆ ಹಾಕಿದ್ದ.
ಪಾಟ್ನಾ(ಜ.21) ಆಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ನಾಳೆ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯಲಿದೆ. ತಯಾರಿಗಳು ಪೂರ್ಣಗೊಂಡಿದೆ, ರಾಮ ಮಂದಿರ, ಆಯೋಧ್ಯೆ ಸಂಪೂರ್ಣ ಅಲಂಕಾರಗೊಂಡಿದೆ. ಪ್ರಧಾನಿ ಮೋದಿ ಸೇರಿ ದೇಶ ವಿದೇಶದ ಗಣ್ಯರು ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಗರಿಷ್ಠ ಭದ್ರತೆ ನೀಡಲಾಗಿದೆ. ಇದರ ನಡುವೆ ತಾನು ಚೋಟಾ ಶಕೀಲ್ ಗ್ಯಾಂಗ್ ಸದಸ್ಯ ಎಂದು ಬಿಹಾರ ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ, ಜನವರಿ 22ರಂದು ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ತಕ್ಷಣವೇ ಅಲರ್ಟ್ ಆದ ಪೊಲೀಸರು ಆರೋಪಿ ಇಂತೇಖಾಬ್ ಅಲಂನನ್ನು ಬಂಧಿಸಿದ್ದಾರೆ.
21 ವರ್ಷದ ಇಂತೇಖಾಬ್ ಅಲಂ ಬಲುವಾ ಕಲಿಯಾಗಂಜ್ ಮೂಲದವನಾಗಿದ್ದು, ಜನವರಿ 19 ರಂದು ಬಿಹಾರ ಪೊಲೀಸರಿಗೆ ಕರೆ ಮಾಡಿದ್ದಾನೆ. 112ಕ್ಕೆ ಕರೆ ಮಾಡಿ ತಾನು ಚೋಟಾ ಶಕೀಲ್ ಗ್ಯಾಂಗ್ ವ್ಯಕ್ತಿ. ರಾಮ ಮಂದಿರ ಪ್ರಾಣಪ್ರತಿಷ್ಠೆ ದಿನ ಅಂದರೆ ಜನವರಿ 22ರಂದು ಆಯೋಧ್ಯೆ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಪೊಲೀಸರಿಗೆ ತಡೆಯಲು ಸಾಧ್ಯವಾದರೆ ತಡೆಯಿರಿ ಎಂದು ಸವಾಲು ಹಾಕಿದ್ದಾನೆ.
ಶಾಲೆಯಲ್ಲಿ ಪ್ರಾಣಪ್ರತಿಷ್ಠೆ ಸಂಭ್ರಮಕ್ಕೆ ಬ್ರೇಕ್, ತಮಿಳುನಾಡು ಸರ್ಕಾರದ ವಿರುದ್ಧ ಅಣ್ಣಾಮಲೈ ಗರಂ!
ಕರೆ ಬಂದ ನಂಬರ್ ಟ್ರೇಸ್ ಮಾಡಿದ ಪೊಲೀಸರು ಮೂರೇ ದಿನದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ತಂದೆಯ ಹೆಸರಿನಲ್ಲಿರುವ ಸಿಮ್ ಮೂಲಕ ಆರೋಪಿ ಇಂತೇಖಾಬ್ ಅಲಂ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಸೂಕ್ಷ್ಮ ವಿಚಾರವಾಗಿರುವ ಕಾರಣ ಪ್ರಕರಣ ದಾಖಲಿಸಲಾಗಿದೆ. ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಆರೋಪಿ ಇಂತೇಖಾಬ್ ಅಲಂ ಮಾನಸಿಕವಾಗಿ ಸ್ಥಿರವಾಗಿಲ್ಲ ಅನ್ನೋ ವಾದಗಳು ಕುಟುಂಬದಿಂದ ಕೇಳಿಬಂದಿದೆ. ಇತ್ತ ಈತನ ವಿರುದ್ಧ ಇತರ ಯಾವುದೇ ಪ್ರಕರಣಗಳಿಲ್ಲ. ಆದರೆ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಬಿಜೆಪಿ ವಿರುದ್ಧ ಹೋರಾಡಿ, ಶ್ರೀರಾಮನ ವಿರುದ್ಧವಲ್ಲ, ತಮ್ಮ ನಾಯಕರಿಗೆ ಕಾಂಗ್ರೆಸ್ ಮುಖಂಡನ ಸಲಹೆ!
ಆಯೋಧ್ಯೆ ರಾಮ ಮಂದಿರಕ್ಕೆ ಬೆದರಿಕೆ ಹೆಚ್ಚಿರುವುದರಿಂದ ಜೊತೆಗೆ ಗಣ್ಯರು ಸುರಕ್ಷತೆ ದೃಷ್ಟಿಯಿಂದ ಭಯೋತ್ಪಾದನಾ ನಿಗ್ರಹ ದಳ ಈಗಾಗಲೆ ಆಯೋಧ್ಯೆಯಲ್ಲಿ ನಿಯೋಜನೆಗೊಂಡಿದೆ. ಉತ್ತರ ಪ್ರದೇಶ ಪೊಲೀಸ್ ಸೇರಿದಂತೆ ಭದ್ರತಾ ಪಡೆಗಳು ಗರಿಷ್ಠ ಮಟ್ಟದ ಸುರಕ್ಷತೆ ನೀಡಲಿದೆ.