ಭಾರತದಲ್ಲಿ ಮತಾಂತರ ಹುಟ್ಟಿದ್ದೇ ಬಾಲಿವುಡ್‌ನಿಂದ. ನನ್ನ ಧರ್ಮವೇ ಮೇಲು, ನನ್ನ ಧರ್ಮವನ್ನೇ ಅನುಸರಿಸುವಂತೆ ಮಾಡುವುದು ಮಹಾ ತಪ್ಪು.ಮದುವೆ, ಪ್ರೀತಿಗಾಗಿ ಧರ್ಮ ಬದಲಿಸುವ ಪರಿಪಾಠ ಯಾಕೆ?ಎಂದು ಐಎಎಸ್ ಅಧಿಕಾರಿ ನಿಯಾಝ್ ಖಾನ್ ಹೇಳಿದ್ದಾರೆ.
ಇಂದೋರ್(ಜೂ.10): ಭಾರತದಲ್ಲಿ ಮತಾಂತರ, ಲವ್ ಜಿಹಾದ್ ಭಾರಿ ಚರ್ಚೆಯಾಗುತ್ತಿದೆ. ಹಲೆವೆಡೆ ಇದೇ ವಿಚಾರ ಗಲಭೆಗೂ ಕಾರಣವಾಗುತ್ತಿದೆ. ಇದೀಗ ಇದೇ ಮತಾಂತರ, ಲವ್ ಜಿಹಾದ್ ಕುರಿತು ಮಧ್ಯಪ್ರದೇಶ ಐಎಎಸ್ ಕೇಡರ್ ಅಧಿಕಾರಿ ನಿಯಾಝ್ ಖಾನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಮತಾಂತರ ಭಾರಿ ಪ್ರಮಾಣದಲ್ಲಿ ಆರಂಭವಾಗಿದ್ದೇ ಬಾಲಿವುಡ್‌ನಿಂದ ಎಂದು ನಿಯಾಝ್ ಖಾನ್ ಹೇಳಿದ್ದಾರೆ. ಇದೇ ವೇಳೆ ಲವ್ ಜಿಹಾದ್, ಗೋ ರಕ್ಷಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆಯ
ಶೇಕಡಾ 100 ರಷ್ಟು ಭಾರತದ ಮತಾಂತರದಲ್ಲಿ ಬಾಲಿವುಡ್ ಪಾಲು ದೊಡ್ಡದಿದೆ ಎಂದು ನಿಯಾಝ್ ಖಾನ್ ಹೇಳಿದ್ದಾರೆ. ನಮ್ಮ ದೇಶದಲ್ಲಿ ಬಾಲಿವುಡ್ ಮಾದರಿಯಾಗಿದೆ. ನಟ ನಟಿಯರನ್ನು ದೇವರಂತೆ, ತಮ್ಮ ರೋಲ್ ಮಾಡೆಲ್ ರೀತಿ ಕಾಣುತ್ತಾರೆ. ಬಾಲಿವುಡ್ ನೋಡಿ ಹೆಚ್ಚಿನವರು ಪ್ರೇರಪಿತರಾಗುತ್ತಾರೆ. ಸ್ಪೂರ್ತಿ ಪಡೆಯುತ್ತಾರೆ. ಆದರೆ ಬಾಲಿವುಡ್ ಮಂದಿ ಹಾಲಿವುಡ್ ಸಿನಿಮಾ ವಸ್ತುಗಳನ್ನು ತೋರಿಸುತ್ತಾರೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಮಾಡುತ್ತಾರೆ. ಇಲ್ಲಿನ ಆಚಾರ ವಿಚಾರ ತಪ್ಪು, ಮೂಡನಂಬಿಕೆ, ಇಲ್ಲಿನ ಪರಂಪಂರೆ ತಪ್ಪು ಎಂದು ತೋರಿಸುತ್ತಾರೆ. ಅಶ್ಲೀಲತೆ, ಅಸಭ್ಯತೆಯೇ ಸಾಮಾನ್ಯ ರೀತಿಯಲ್ಲಿ ತೋರಿಸುತ್ತಾರೆ. ಇದರಿಂದ ಯುವ ಸಮೂಹ ತಪ್ಪು ದಾರಿಯಲ್ಲಿ ನಡೆಯುತ್ತಿದೆ ಎಂದು ನಿಯಾಝ್ ಖಾನ್ ಹೇಳಿದ್ದಾರೆ.
ಹಿಂದೂ ಹೆಸರಲ್ಲಿ ಲವ್, ಬಲವಂತವಾಗಿ ಮತಾಂತರಗೊಳಿಸಿ ಅಪ್ಪನ ಜೊತೆ ಸೆಕ್ಸ್‌ಗೆ ಒತ್ತಾಯಿಸಿದ ಅಬೀದ್!
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಎಲ್ಲಾ ಧರ್ಮಗಳಿಗೆ ಸಮಾನ ಸ್ಥಾನ ನೀಡಲಾಗಿದೆ. ಆದರೆ ನಮ್ಮ ಧರ್ಮವೇ ಮೇಲು, ನಾವೇ ಸರಿ. ಇತರ ಧರ್ಮ, ದೇವರು ಅನುಸರಿಸುವುದು, ಮೂರ್ತಿ ಪೂಜೆ ಮಾಡುವುದು ಸರಿಯಲ್ಲ ಅನ್ನೋದು ತಪ್ಪು. ಬಲವಂತವಾಗಿ, ಮತಾಂತರ ಮಾಡುವುದು, ಷಡ್ಯಂತ್ರದ ಮೂಲಕ ಮತಾಂತರ ಮಾಡುವುದು, ಧರ್ಮವನ್ನು ಪ್ರತಿಪಾಧನೆ ಮಾಡಿ ಅಮಾಯಕರನ್ನು ಬಲೆಗೆ ಬೀಳಿಸುವುದು ಮಹಾ ತಪ್ಪು ಎಂದು ನಿಯಾಝ್ ಖಾನ್ ಹೇಳಿದ್ದಾರೆ.
ಮದುವೆ, ಪ್ರೀತಿ ವಿಚಾರದಲ್ಲಿ ಮತಾಂತರ ಯಾಕೆ? ಮದುವೆಯಾಗಲು ಮತಾಂತರ, ಮದುವೆಯಾದ ಬಳಿಕ ಮತಾಂತರ ಮಾಡುವುದು ಯಾಕೆ? ಪ್ರತಿಯೊಬ್ಬರು ಅವರವರ ಧರ್ಮ ಅನುಸರಿಸಲು ಬಿಡಬೇಕು ಎಂದು ರಿಯಾಝ್ ಖಾನ್ ಹೇಳಿದ್ದಾರೆ. ಇದೇ ವೇಳೆ ಮುಸ್ಲಿಮರು ಗೋ ರಕ್ಷಕರಾಗಬೇಕು. ಗೋ ಹತ್ಯೆ ಮಾಡಬಾರದು ಎಂದಿದ್ದಾರೆ. ಗೋವನ್ನು ಪವಿತ್ರ ಎಂದು ದೇವರ ಸ್ಥಾನದಲ್ಲಿ ಪೂಜಿಸುವ ದೇಶದಲ್ಲಿ ಗೋ ಹತ್ಯೆ ಮಾಡುವುದೇ ತಪ್ಪು. ಮುಸ್ಲಿಮರು ಸ್ವಯಂಪ್ರೇರಿತರಾಗಿ ಸಸ್ಯಾಹಾರಿಗಳಾದರೆ ಒಳೀತು ಎಂದು ನಿಯಾಝ್ ಖಾನ್ ಹೇಳಿದ್ದಾರೆ.
ಬ್ರಾಹ್ಮಣರು ಯಾವತ್ತೂ ಸತ್ಯ ಹಾಗೂ ನ್ಯಾಯ ಮಾರ್ಗದಲ್ಲಿ ನಡೆಯುತ್ತಾರೆ. 3000 ವರ್ಷಗಳಿಂದ ಬ್ರಾಹ್ಮಣರು ಈ ದೇಶಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಸಂತ, ಸನ್ಯಾಸಿಗಳ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಜನ ಸೇರುತ್ತಾರೆ. ಈಗಲೂ ಪೂಜಾ ಕಾರ್ಯಕ್ರಮಗಳಲ್ಲಿ ಬ್ರಾಹ್ಮಣರು ಮಾರ್ಗದರ್ಶನ ನೀಡುತ್ತಾರೆ. ಹೀಗಾಗಿ ಮುಸ್ಲಿಮರು ಬ್ರಾಹ್ಮಣರ ಜೊತೆ ಉತ್ತಮ ಸಂಬಂಧ ಇಟ್ಟಕೊಳ್ಳಬೇಕು. ಪೂಜ್ಯ ಭಾವನೆ ಬರಬೇಕು. ಇದರಿಂದ ದೇಶದ ಎಲ್ಲಾ ಭಾಗದಲ್ಲಿ ಶಾಂತಿ ಸ್ಥಾಪನೆ ಸುಲಭವಾಗಲಿದೆ ಎಂದಿದ್ದಾರೆ.
ಮತ್ತೊಂದು ಲವ್ ಜಿಹಾದ್ ಕೇಸ್: ಗರ್ಭಿಣಿಗೆ ಮತಾಂತರಕ್ಕೆ ಒತ್ತಾಯಿಸಿ ವಿಷ ಹಾಕಿ ಕೊಂದ ಪಾಪಿಗಳು!
ನಾನು ಹಿಂದೂ ಧರ್ಮದಿಂದ ಪ್ರೇರಿತಗೊಂಡಿಲ್ಲ. ನನ್ನ ಮಾತುಗಳಿಗೆ ರಾಜಕೀಯ ಬಣ್ಣ ಹಚ್ಚುವ ಪ್ರಯತ್ನವೂ ಮಾಡಬೇಡಿ. ನಾನು ಮುಸ್ಲಿಮನಾಗಿಯೇ ಇರುತ್ತೇನೆ. ಆದರೆ ಇತರ ಧರ್ಮವನ್ನು ಗೌರವದಿಂದ ನೋಡುತ್ತೇನೆ. ನನ್ನ ರೋಲ್ ಮಾಡೆಲ್ ಒಂದು ಮೊಹಮ್ಮದ್ ಸಾಬ್ ಮತ್ತೊಂದು ಚಾಣಾಕ್ಯ ಎಂದು ನಿಯಾಝ್ ಖಾನ್ ಹೇಳಿದ್ದಾರೆ.