ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಅಸಾರಾಂ ಬಾಪು ಆಶ್ರಮದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಪತ್ತೆ!

By Suvarna NewsFirst Published Apr 8, 2022, 11:57 AM IST
Highlights

* ಅಸಾರಾಂ ಬಾಪು ಆಶ್ರಮದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಶವ ಪತ್ತೆ

* ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ

* ಕಾರಿನಿಂದ ವಾಸನೆ ಬಂದ ನಂತರ ಗೊತ್ತಾಯಿತು ವಾಸ್ತವತೆ

ಲಕ್ನೋ(ಏ.08): ಉತ್ತರ ಪ್ರದೇಶದ ಗೊಂಡಾದಲ್ಲಿ ಮೃತದೇಹ ಪತ್ತೆಯಾದ ಬಳಿಕ ಭಾರೀ ಸಂಚಲನ ಮೂಡಿಸಿದೆ. ಆಸಾರಾಂ ಬಾಪು ಆಶ್ರಮದೊಳಗೆ ನಿಲ್ಲಿಸಿದ್ದ ಕಾರಿನಿಂದ ಶವ ಪತ್ತೆಯಾಗಿದೆ. ಶವ ಪತ್ತೆಯಾದ ಬಾಲಕಿ ಕಳೆದ 4 ದಿನಗಳಿಂದ ನಾಪತ್ತೆಯಾಗಿದ್ದಳು. ಕಾರಿನಿಂದ ಮೃತದೇಹ ಪತ್ತೆಯಾಗಿರುವ ಈ ಆಶ್ರಮವನ್ನು ಬೆಮೌರ್ ಗ್ರಾಮದ ಬಳಿ ಇದೆ ಎಂದು ಹೇಳಲಾಗುತ್ತಿದೆ. ಅದೇ ವೇಳೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಆಶ್ರಮದ ನೌಕರರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಕೊಲೆಯ ನಂತರ ಮೃತದೇಹವನ್ನು ಮರೆಮಾಚಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸ್ಥಳಕ್ಕಾಗಮಿಸಿದ ವಿಧಿವಿಜ್ಞಾನ ತಂಡವೂ ಆಶ್ರಮ ಹಾಗೂ ವಾಹನದ ತನಿಖೆಯಲ್ಲಿ ತೊಡಗಿದೆ.

ಜೋಧ್‌ಪುರ ಜೈಲಿನದ್ದ ಅಸಾರಾಂ ಬಾಪೂಗೆ ಕೊರೋನಾ, ಆಸ್ಪತ್ರೆಗೆ ದಾಖಲು!

4 ದಿನಗಳಿಂದ ಹುಡುಗಿ ಕಾಣೆಯಾಗಿದ್ದಳು

ಸಿಕ್ಕಿರುವ ಮಾಹಿತಿ ಪ್ರಕಾರ ಬಾಲಕಿ ಕಳೆದ ನಾಲ್ಕು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದಳು. ಅಸಾರಾಂ ಬಾಪು ಅವರ ಆಶ್ರಮದಲ್ಲಿ ಹಲವು ದಿನಗಳಿಂದ ನಿಲ್ಲಿಸಲಾಗಿದ್ದ ಕಾರೊಂದರಿಂದ ಅವರ ಮೃತದೇಹ ಪತ್ತೆಯಾಗಿದೆ. ಕಾರಿನಲ್ಲಿ ದುರ್ವಾಸನೆ ಬರಲಾರಂಭಿಸಿದಾಗ ಮೃತದೇಹ ಪತ್ತೆಯಾಗಿದೆ. ಇದಾದ ಬಳಿಕವೇ ಆಶ್ರಮದ ಸಿಬ್ಬಂದಿ ಕಾರನ್ನು ತೆರೆದು ನೋಡಿದ್ದಾರೆ. ಕಾರು ತೆರೆದು ನೋಡಿದ ನಂತರ ಎಲ್ಲರೂ ದಿಗ್ಭ್ರಮೆಗೊಂಡರು. ಆದರ ಒಳಗಿನಿಂದ ಮೃತದೇಹ ಪತ್ತೆಯಾಗಿದೆ. ಹೀಗಿರುವಾಗಲೇ ಶವ ಪತ್ತೆಯಾದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳ ಹಾಗೂ ಆಶ್ರಮವನ್ನು ಸೀಲ್ ಮಾಡಿದ್ದಾರೆ. ಮೇಲ್ನೋಟಕ್ಕೆ ಮೃತದೇಹವನ್ನು ಬಚ್ಚಿಟ್ಟಿರುವ ಪ್ರಕರಣ ಕಂಡುಬರುತ್ತಿದೆ ಎಂದು ಪ್ರಕರಣದ ತನಿಖೆಯಲ್ಲಿ ತೊಡಗಿರುವ ಪೊಲೀಸರು ತಿಳಿಸಿದ್ದಾರೆ.

ರೇಪ್‌ ಕೇಸಲ್ಲಿ ಆಸಾರಂನ ಪುತ್ರ ನಾರಾಯಣ್‌ ಸಾಯಿ ದೋಷಿ

ಕಾರಿನಿಂದ ವಾಸನೆ ಬಂದ ನಂತರ ಗೊತ್ತಾಯಿತು

ನಗರ ಕೊತ್ವಾಲಿ ಪ್ರದೇಶದ ಬಿಮೌರ್ ಗ್ರಾಮದಿಂದ ಈ ಸಂಪೂರ್ಣ ವಿಷಯ ಮುನ್ನೆಲೆಗೆ ಬಂದಿದೆ. ಹಲವು ದಿನಗಳಿಂದ ಒಂದೇ ಕಡೆ ನಿಲ್ಲಿಸಿದ್ದ ವಾಹನ ದುರ್ವಾಸನೆ ಬೀರಲು ಆರಂಭಿಸಿದಾಗ ಜನರಲ್ಲಿ ಅನುಮಾನ ಮೂಡಿದೆ. ಇದಾದ ಬಳಿಕ ಆಶ್ರಮದ ಕಾವಲುಗಾರ ಕಾರನ್ನು ತೆರೆದು ನೋಡಿದ್ದಾನೆ. ಕಾರಿನೊಳಗಿಂದ ಶವ ಪತ್ತೆಯಾದ ನಂತರ, ತಕ್ಷಣ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ವಶಕ್ಕೆ ಪಡೆದು ಗುರುತು ಹಿಡಿಯಲು ಯತ್ನಿಸಿದ್ದಾರೆ. ನಂತರ ನಾಲ್ಕು ದಿನಗಳಿಂದ ಬಾಲಕಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಇದೇ ವೇಳೆ ಈ ಘಟನೆ ಬೆಳಕಿಗೆ ಬಂದ ನಂತರ ಸುತ್ತಮುತ್ತಲ ಪ್ರದೇಶದಲ್ಲಿ ಕೋಲಾಹಲ ಉಂಟಾಗಿದೆ.

ರೇಪ್ ಕೇಸ್: ತಂದೆ ಆಯ್ತು ಈಗ ಮಗನಿಗೂ ಜೀವಾವಧಿ ಶಿಕ್ಷೆ

ಸ್ವಯಂ ಘೋಷಿತ ದೇವಮಾನವ ಅಸಾರಾಮ್​ ಬಾಪು ಪುತ್ರ, ನಾರಾಯಣ ಸಾಯಿ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ಯದಾನೆ. 

ಕಳೆದ ಶುಕ್ರವಾರ ನಾರಾಯಣ ಸಾಯಿ ಅಪರಾಧಿ ಎಂದು ತೀರ್ಪು ನೀಡಿದ್ದ ಗುಜರಾತ್‌ನ ಸೂರತ್ ಕೋರ್ಟ್ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರುಪಾಯಿ ದಂಡ ವಿಧಿಸಿದೆ. 2013ರಲ್ಲಿ ನಾರಾಯಣ ಸಾಯಿ ಹಾಗೂ ಅಸಾರಾಮ್​ ಬಾಪು ಸೂರತ್​​ನಲ್ಲಿ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರವೆಸಗಿರೋ ಆರೋಪ ಕೇಳಿಬಂದಿತ್ತು. ನಾರಾಯಣ ಸಾಯಿ ಕಿರಿಯಳ ಮೇಲೆ ಅತ್ಯಾಚಾರವೆಸಗಿದ್ರೆ, ಅಸರಾಂ ಬಾಪು ಹಿರಿಯ ಸಹೋದರಿಯ ಮೇಲೆ ಅತ್ಯಾಚಾರ ಮಾಡಿದ್ದ ಎಂದು ಆರೋಪಿಸಲಾಗಿತ್ತು. 

click me!