ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆ: ಹಿಂದೂ ಮುಖಂಡನ ವಿರುದ್ಧ ದೂರು

Published : Apr 08, 2022, 11:05 AM IST
ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆ: ಹಿಂದೂ ಮುಖಂಡನ ವಿರುದ್ಧ ದೂರು

ಸಾರಾಂಶ

ಸಾರ್ವಜನಿಕ ಭಾಷಣದ ವೇಳೆ ಅತ್ಯಾಚಾರದ ಬೆದರಿಕೆ  ಹಿಂದೂ ಮುಖಂಡನ ವಿರುದ್ಧ ಪ್ರಕರಣ ಬೆದರಿಕೆಯ ವಿಡಿಯೋ ವೈರಲ್

ಲಖನೌ:ಮಸೀದಿಯೊಂದರ ಹೊರಗೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಹಿಂದೂ ಮುಖಂಡರೊಬ್ಬರು ಪ್ರಚೋದನಕಾರಿ ಭಾಷಣ ಮಾಡಿದ್ದು ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ (Lucknow) ಸುಮಾರು 100 ಕಿಮೀ ದೂರದಲ್ಲಿರುವ ಸೀತಾಪುರ ಜಿಲ್ಲೆಯ ಮಸೀದಿಯೊಂದರ (mosque) ಮುಂದೆ ಈ ಘಟನೆ ನಡೆದಿದೆ. ಮೈಕ್‌ನಲ್ಲಿ ಭಾಷಣ ಮಾಡುತ್ತಾ ಹಿಂದೂ ಮುಖಂಡನೋರ್ವ ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ವಿಡಿಯೋ ರೆಕಾರ್ಡ್‌ ಆಗಿದ್ದು, ಉತ್ತರ ಪ್ರದೇಶ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೇಸರಿ ವಸ್ತ್ರಗಳನ್ನು ಧರಿಸಿರುವ, ಖೈರಾಬಾದ್ (Khairabad) ಎಂಬ ಸಣ್ಣ ಪಟ್ಟಣದ ಮಹಂತ್ (mahant) ಆಗಿರುವ ವ್ಯಕ್ತಿಯೊಬ್ಬರು, ಜೀಪಿನ ಒಳಗಿನಿಂದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಪೊಲೀಸರ ಮುಂದೆಯೇ ಈತ ಈ ರೀತಿ ಭಾಷಣ ಮಾಡಿದ್ದಾನೆ ಎನ್ನಲಾಗಿದೆ.  ಈತ ಮೈಕ್‌ನಲ್ಲಿ ಮಾತನಾಡುತ್ತಿದ್ದರೆ, ಈ ವೇಳೆ ಜನರು ಜೈ ಶ್ರೀ ರಾಮ್ ಎಂದು ಕೂಗುತ್ತಾ ಅವನನ್ನು ಹುರಿದುಂಬಿಸುತ್ತಿದ್ದರು, ಈ ವೇಳೆ ವ್ಯಕ್ತಿ  ಪ್ರಚೋದನಕಾರಿ ಹೇಳಿಕೆ ನೀಡಿದ್ದಾನೆ. ಇದೇ ವೇಳೆ ಈ ಮಹಂತ್‌ ತನ್ನನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದು, ಇದಕ್ಕಾಗಿ  28 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ ಎಂದು ಆರೋಪಿಸಿದ್ದಾನೆ.

ಈ ಪ್ರದೇಶದಲ್ಲಿ ಯಾವುದೇ ಹುಡುಗಿಗೆ ಮುಸ್ಲಿಮರು ಕಿರುಕುಳ ನೀಡಿದರೆ, ತಾನು ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಸಾರ್ವಜನಿಕವಾಗಿ ಅತ್ಯಾಚಾರ ಮಾಡುತ್ತೇನೆ ಎಂದು ಅವನು ಹೇಳುತ್ತಾನೆ. ಇದಕ್ಕೆ ಜನಸಂದಣಿಯಿಂದ ದೊಡ್ಡ ಹರ್ಷೋದ್ಘಾರ ಕೇಳಿ ಬರುತ್ತದೆ. ವೀಡಿಯೋವನ್ನು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಫ್ಯಾಕ್ಟ್‌ ಚೆಕ್‌ ಆಲ್ಟ್‌ನ್ಯೂಸ್‌ನ (fact-check website AltNews) ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ (Mohammed Zubair), ಈ ಘಟನೆ  ಏಪ್ರಿಲ್ 2 ರಂದು ನಡೆದಿದೆ. ಆದರೆ ಐದು ದಿನಗಳ ನಂತರವೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

Hijab Row: ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ, ಶಿಕ್ಷಕಿ ಮೇಲೆ FIR ದಾಖಲು

ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸೀತಾಪುರ ಪೊಲೀಸರು (Sitapur police), ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಸತ್ಯಗಳ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ವೀಡಿಯೊದಲ್ಲಿ ಜುಬೇರ್ ಅವರ ಪೋಸ್ಟ್ ಅನ್ನು ಅನುಸರಿಸಿ, ಹಲವಾರು ಟ್ವಿಟರ್ ಬಳಕೆದಾರರು ಧಾರ್ಮಿಕ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಕೆಲವರು ಈತ 'ಬಜರಂಗ ಮುನಿ' ಎಂದು ಗುರುತಿಸಿದ್ದಾರೆ. ಬಳಕೆದಾರರು ಈ ವಿಷಯದಲ್ಲಿ ಕಟ್ಟುನಿಟ್ಟಾದ ಕ್ರಮವನ್ನು ಕೋರಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಇದನ್ನು ಟ್ಯಾಗ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಮತ್ತೊಂದು ವಿವಾದ, ಕೊರೋನಾಗಿಂತಲೂ ವೇಗವಾಗಿ ಹರಡತೊಡಗಿದ ಕೋಮು ದ್ವೇಷ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!