
ನವದೆಹಲಿ (ಫೆ.17): ಭಾರತೀಯ ರೈಲ್ವೆಯು ಕಾಯ್ದಿರಿಸುವ ಟಿಕೆಟ್ ಸ್ವರೂಪದಲ್ಲಿ ಕಠಿಣ ನಿಯಮಗಳನ್ನು ಪರಿಚಯಿಸಿದೆ. ಇನ್ನು ಮುಂದೆ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ತಮಗೆ ನಿಗದಿಯಾದ ನಿಲ್ದಾಣದಲ್ಲಿ ರೈಲು ಏರದಿದ್ದರೆ ಟಿಕೆಟ್ ರದ್ದಾಗಲಿದೆ.
ರೈಲ್ವೆಯು, ಟಿಕೆಟ್ ಪರೀಕ್ಷಕರಿಗೆ ಹೊಸ ಎಚ್‌ಎಚ್‌ಟಿ ಟ್ಯಾಬ್ಲೆಟ್‌ಗಳನ್ನು (ಹ್ಯಾಂಡ್ ಹೆಲ್ಡ್ ಟರ್ಮಿನಲ್ಸ್) ನೀಡಿದೆ. ಒಂದು ವೇಳೆ ಕಾಯ್ದಿರಿಸಿದ ಪ್ರಯಾಣಿಕರು ನಿಗದಿತ ನಿಲ್ದಾಣದಲ್ಲಿ ರೈಲು ಏರದಿದ್ದರೆ ಅದು ತಕ್ಷಣ ಈ ಎಚ್‌ಎಚ್‌ಟಿಗಳಲ್ಲಿ ದಾಖಲಾಗುತ್ತದೆ.
ಬಳಿಕ ಕಾಯುವಿಕೆ ಪಟ್ಟಿಯಲ್ಲಿನ ಪ್ರಯಾಣಿಕರಿಗೆ ದಾಖಲಾದ ಆಸನ ನೀಡಲಾಗುತ್ತದೆ. ಆಸನ ಬೇರೊಬ್ಬರಿಗೆ ನೀಡಿದ ಬಗ್ಗೆ ಮೂಲ ಪ್ರಯಾಣಿಕರಿಗೆ ಸಂದೇಶವೂ ರವಾನೆಯಾಗಲಿದೆ. ಇದಕ್ಕೂ ಮೊದಲು ನಿಗದಿತ ನಿಲ್ದಾಣದಲ್ಲಿ ಕಾಯ್ದಿರಿಸಿದ ಪ್ರಯಾಣಿಕರು ಏರದಿದ್ದರೆ ಟಿಟಿಇ ಆ ಆಸನವನ್ನು ಬೇರೆಯವರಿಗೆ ನೀಡದೆ ಮುಂದಿನ 2 ನಿಲ್ದಾಣಗಳ ವರೆಗೆ ಖಾಲಿ ಬಿಡುತ್ತಿದ್ದರು.
Board at your booked station or lose your seat Indian Railways new strict No Show rule
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ