ಬಿಎಂಸಿ ಚುನಾವಣೆಯಲ್ಲಿ ಗೆಲುವು: ರಾಜ್‌ಠಾಕ್ರೆ, ಉದ್ಧವ್ ಠಾಕ್ರೆಗೆ ರಸಮಲೈ ಕಳುಹಿಸಿದ ಬಿಜೆಪಿಯ ಬಗ್ಗಾ

Published : Jan 16, 2026, 04:10 PM IST
BJP's Tajinder Bagga Sends Ras Malai To Uddhav, Aaditya & Raj

ಸಾರಾಂಶ

ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವೂ ಗೆಲುವು ಸಾಧಿಸಿದ ಹಿನ್ನೆಲೆ ಬಿಜೆಪಿ ನಾಯಕ ತೇಜಿಂದರ್ ಬಗ್ಗಾ ಅವರು ವಿರೋಧಿ ಬಣವಾದ ಶಿವಸೇನೆಯ ಉದ್ಧವ್‌ ಠಾಕ್ರೆ, ರಾಜ್ ಠಾಕ್ರೆ ಹಾಗೂ ಆದಿತ್ಯ ಠಾಕ್ರೆ ಅವರಿಗೆ ಸಿಹಿತಿನಿಸಾದ ರಸಮಲೈ ಅನ್ನು ಕಳುಹಿಸಿಕೊಟ್ಟಿದ್ದಾರೆ.

ಮಹಾರಾಷ್ಟ್ರದ 29 ಪುರಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವೂ ಗೆಲುವು ಸಾಧಿಸಿದ ಹಿನ್ನೆಲೆ ಬಿಜೆಪಿ ನಾಯಕ ತೇಜಿಂದರ್ ಬಗ್ಗಾ ಅವರು ವಿರೋಧಿ ಬಣವಾದ ಶಿವಸೇನೆಯ ಉದ್ಧವ್‌ ಠಾಕ್ರೆ, ರಾಜ್ ಠಾಕ್ರೆ ಹಾಗೂ ಆದಿತ್ಯ ಠಾಕ್ರೆ ಅವರಿಗೆ ಸಿಹಿತಿನಿಸಾದ ರಸಮಲೈ ಅನ್ನು ಕಳುಹಿಸಿಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ತೇಜಿಂದರ್ ಬಗ್ಗಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಯಾವಾಗಲೂ ಇರುತ್ತವೆ, ಆದರೆ ಠಾಕ್ರೆಗಳು ನಮ್ಮ ಶತ್ರುಗಳಲ್ಲ. ಉದ್ಧವ್ ಸಾಹೇಬ್ ಠಾಕ್ರೆ, ರಾಜ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆಗಾಗಿ ಮಾತೋಶ್ರೀಗೆ 3 ರಸ ಮಲೈಗಳನ್ನು ನಾನು ಆರ್ಡರ್ ಮಾಡಿದ್ದೇನೆ. ನೀವು ಅದನ್ನು ಆನಂದಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಬರೆದು ಅವರು ಅವರು ಎಕ್ಸ್‌ನಲ್ಲಿ ಆನ್‌ಲೈನ್ ಆರ್ಡರ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.

ಪ್ರಸ್ತುತ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವೂ ಬೃಹನ್ಮುಂಬೈ ಮುನ್ಸಿಪಾಲ್ ಕಾರ್ಪೋರೇಷನ್ ಚುನಾವಣೆಯಲ್ಲಿ 227 ಸೀಟುಗಳಲ್ಲಿ 125 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ಮಹಾಯುತಿ ಮೈತ್ರಿಕೂಟದಲ್ಲಿ ಈಗಾಗಲೇ ಸಂಭ್ರಮಾಚರಣೆ ಶುರುವಾಗಿದ್ದು, ಇದರ ಭಾಗವಾಗಿ ಈಗ ಬೊಜೆಪಿ ನಾಯಕ ತೇಜಿಂದರ್ ಬಗ್ಗಾ ಅವರು ಶಿವಸೇನೆ ಉದ್ಧವ್ ಠಾಕ್ರೆ ಬಣದ ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಹಾಗೂ ಆದಿತ್ಯ ಠಾಕ್ರೆ ಅವರಿಗೆ ರಸಮಲೈ ಆರ್ಡರ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಚುನಾವಣಾ ಪ್ರಚಾರದ ಸಮಯದಲ್ಲಿ ರಾಜ್ ಠಾಕ್ರೆ ಅವರು ಬಿಜಪಿ ನಾಯಕ ಅಣ್ಣಾಮಲೈ ಅವರನ್ನು ರಸಮಲೈಗೆ ಹೋಲಿಕೆ ಮಾಡಿದ್ದರು. ಇದಕ್ಕೆ ಬಿಜೆಪಿ ವ್ಯಾಪಕ ವಿರೋಧ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಕೇರಳದಿಂದ ಓದಲು ಬಂದು ಇಲ್ಲಿ ಬೇರೆಯದೇ ಕಾರುಬಾರು: ಕಾರಿನ ಬೆಲೆಗಿಂತಲೂ ದುಬಾರಿ ದಂಡ ವಿಧಿಸಿದ ಪೊಲೀಸರು

ಮುಂಬೈನ ಪಶ್ಚಿಮ ಉಪನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ವೇಳೆ ಮಾತನಾಡಿದ್ದ ಅಣ್ಣಾಮಲೈ ಅವರು ಬಾಂಬೆ ಈಗ ಮಹಾರಾಷ್ಟ್ರದ ನಗರವಲ್ಲ, ಅದೊಂದು ಅಂತಾರಾಷ್ಟ್ರೀಯ ನಗರ ಎಂದು ಹೇಳಿದ್ದರು. ಇದಕ್ಕೆ ದಾದರ್‌ನ ಛತ್ರಪತಿ ಶಿವಾಜಿ ಪಾರ್ಕ್‌ನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ ಅವರು ಅಣ್ಣಾಮಲೈ ವಿರುದ್ಧ ತೀಕ್ಷ್ಣವಾದ ರಾಜಕೀಯ ದಾಳಿ ನಡೆಸಿದರು. ಅವರು ಮುಂಬೈನ ಗುರುತನ್ನು ಪ್ರಶ್ನಿಸುತ್ತಿದ್ದಾರೆ ಮತ್ತು ನಗರವನ್ನು ಮಹಾರಾಷ್ಟ್ರದಿಂದ ಬೇರ್ಪಡಿಸುವ ದೊಡ್ಡ ಪಿತೂರಿಯನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿದ ಠಾಕ್ರೆ ಅವರನನ್ನು 'ರಸ್ಮಲೈ'ಗೆ ಹೋಲಿಸಿ ಅಣಕವಾಡಿದ್ದರು.

ಇದನ್ನೂ ಓದಿ: ಅಲಿಬಾಗ್‌ನಲ್ಲಿ ಮತ್ತೊಂದು ದುಬಾರಿ ಆಸ್ತಿ ಖರೀದಿಸಿದ ವಿರುಷ್ಕಾ: ಸ್ಟಾಂಪ್ ಡ್ಯೂಟಿಯೇ 2.27 ಕೋಟಿ: ಆಸ್ತಿ ಮೊತ್ತವೆಷ್ಟು?

ಮಹಾರಾಷ್ಟ್ರದಲ್ಲಿ ನಿನ್ನೆ ಬಿಎಂಸಿಯೂ ಸೇರಿದಂತೆ ಒಟ್ಟು 29 ಪುರಸಭೆಗಳಿಗೆ ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಬಿಜೆಪಿ-ಶಿವಸೇನೆ (ಶಿಂಧೆ ಬಣ) ನೇತೃತ್ವದ ಮಹಾಯುತಿ ಮೈತ್ರಿಕೂಟದಲ್ಲಿ ಸಂಭ್ರಮಾಚರಣೆ ಜೋರಾಗಿದೆ. 893 ವಾರ್ಡ್‌ಗಳಲ್ಲಿ ಒಟ್ಟು 15,931 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಮಹಾರಾಷ್ಟ್ರ ಮುನ್ಸಿಪಲ್‌ ಕಾರ್ಪೋರೇಷನ್‌ನ ಒಟ್ಟು 2869 ವಾರ್ಡ್‌ಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಇದಲ್ಲಿ 2801 ಕ್ಷೇತ್ರಗಳ ಫಲಿತಾಂಶ ಇಂದು ಹೊರಬೀಳಲಿದೆ. 68 ಕ್ಷೇತ್ರಗಳಲ್ಲಿ ಈಗಾಗಲೇ ಅವಿರೋಧ ಆಯ್ಕೆಯಾಗಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Maharashtra Municipal Corporation Results: ಬಿಎಂಸಿಯಲ್ಲಿ ಬಹುಮತದ ಗಡಿ ದಾಟಿದ ಮಹಾಯುತಿ, ಠಾಕ್ರೆ ಸರ್ಕಾರ್‌ ಅಧಿಕಾರ ಅಂತ್ಯ!
ಅಳಿಯನಿಗೆ ರಾಜ ಮರ್ಯಾದೆ: 158 ಬಗೆಯ ಭಕ್ಷ್ಯ ಸಿದ್ಧಪಡಿಸಿ ಬಡಿಸಿದ ಆಂಧ್ರದ ಕುಟುಂಬ