ಚಪ್ಪಲಿಯ ಒಳಗೆ ಬ್ಲ್ಯೂಟೂತ್‌ ಯಂತ್ರ ಇಟ್ಟು ಪರೀಕ್ಷೆಯಲ್ಲಿ ಅಕ್ರಮ!

By Suvarna News  |  First Published Sep 27, 2021, 8:45 AM IST

* ರಾಜ​ಸ್ಥಾನ ಶಿಕ್ಷಕ ನೇಮಕ ಪರೀ​ಕ್ಷೆ​ಯಲ್ಲಿ ಪತ್ತೆ

* ಚಪ್ಪಲಿಯ ಒಳಗೆ ಬ್ಲ್ಯೂಟೂತ್‌ ಯಂತ್ರ ಇಟ್ಟು ಮೋಸ

* ಹೊರಗಿರುವ ವ್ಯಕ್ತಿಗಳಿಂದ ಪರೀಕ್ಷೆ ಬರೆಯಲು ಸಹಾಯ


ಜೈಪುರ(ಸೆ.27): ರಾಜಸ್ಥಾನ ಶಿಕ್ಷಕರ ನೇಮಕಾತಿ ಪರೀಕ್ಷೆಯ(REET) ವೇಳೆ ಅಭ್ಯರ್ಥಿಗಳು ಚಪ್ಪಲಿಯ ಒಳಗಡೆ ಬ್ಲ್ಯೂಟೂತ್‌(Bluetooth) ಯಂತ್ರ ಹಾಗೂ ಮೊಬೈಲ್‌ ಅನ್ನು ಅಡಗಿಸಿಟ್ಟು ಚೀಟಿಂಗ್‌ ಮಾಡುತ್ತಿದ್ದ ದಂಧೆಯೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಐವರು ಅಭ್ಯರ್ಥಿಗಳನ್ನು ಬಂಧಿಸಲಾಗಿದೆ.

ಪರೀಕ್ಷೆಯ ಬರೆಯುವ ಅಭ್ಯರ್ಥಿಗಳ ಚಪ್ಪಲಿಯ ಒಳಗಡೆ ಫೋನ್‌ ಹಾಗೂ ಬ್ಲ್ಯೂಟೂತ್‌ ಅನ್ನು ಅಳವಡಿಸಿರಲಾಗುತ್ತದೆ. ಚಿಕ್ಕದಾದ ಇಯರ್‌ ಬಡ್‌ಗಳ ಮೂಲಕ ಅಭ್ಯರ್ಥಿಗಳು ಬ್ಲ್ಯೂಟೂತ್‌ನೊಂದಿಗೆ ಸಂಪರ್ಕ ಹೊಂದಿರುತ್ತಾರೆ.

Tap to resize

Latest Videos

undefined

ಪರೀಕ್ಷಾ ಕೊಠಡಿಯ ಹೊರಗಡೆ ಇದ್ದ ವ್ಯಕ್ತಿಗಳು ಅಭ್ಯರ್ಥಿಗಳಿಗೆ ಉತ್ತರವನ್ನು ಹೇಳಿಕೊಡುತ್ತಿದ್ದರು. ಅಜ್ಮೇರ್‌ನಲ್ಲಿ(Ajmer) ಈ ರೀತಿಯಾಗಿ ಚೀಟಿಂಗ್‌ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿರಿಂದ ದಂಧೆ ಬೆಳಕಿಗೆ ಬಂದಿದೆ.

ಬಿಕಾನೇರ್‌ ಐವರು ಅಭ್ಯರ್ಥಿಗಳು ಬ್ಲ್ಯೂಟೂತ್‌ ಇದ್ದ ಚಪ್ಪಲಿ ಧರಿಸಿ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ ಮುನ್ನವೇ ಅವರನ್ನು ತಡೆಯಲಾಗಿದೆ. ಅಲ್ಲದೇ ದಂಧೆಯಲ್ಲಿ ಭಾಗಿಯಾದ ಇತರ ಏಳು ಮಂದಿಯನ್ನು ಕೂಡ ಬಂಧಿಸಲಾಗಿದೆ. ಚೀಟಿಂಗ್‌ಗೆ ಬಳಕೆ ಆಗುತ್ತಿದ್ದ ಚಪ್ಪಲಿಗಳನ್ನು 2 ರಿಂದ 6 ಲಕ್ಷ ರು.ವರೆಗೂ ಮಾರಾಟ ಮಾಡಲಾಗುತ್ತಿತ್ತು.

ಚಿಂಟಿಂಗ್‌ ದಂಧೆಯ ಕುರಿತು ಸಮಗ್ರ ತನಿಖೆ ಕೈಗೊಳ್ಳಲಾಗಿದ್ದು, ಇನ್ನಷ್ಟುಸಂಗತಿಗಳು ಬಯಲಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

click me!