ವೈದ್ಯರ ಮೇಲೆ ದಾಳಿಗೆ ಐಎಂಎ ಖಂಡನೆ: 23ರಂದು ಕರಾಳ ದಿನ ಎಚ್ಚರಿಕೆ!

By Suvarna NewsFirst Published Apr 21, 2020, 11:57 AM IST
Highlights

23ರಂದು ಕರಾಳ ದಿನ: ಐಎಂಎ ಎಚ್ಚರಿಕೆ| ವೈದ್ಯರ ಮೇಲೆ ದಾಳಿಗೆ ಐಎಂಎ ಖಂಡನೆ| 22ರಂದು ರಾತ್ರಿ 9ಕ್ಕೆ ಮೋಂಬತ್ತಿ ಪ್ರತಿಭಟನೆ| 23ರಂದು ಕಪ್ಪುಪಟ್ಟಿಧರಿಸಿ ಕರ್ತವ್ಯಕ್ಕೆ ಹಾಜರು

ನವದೆಹಲಿ(ಏ.21): ಬೆಂಗಳೂರು ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಕೊರೋನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿಯ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌ (ಐಎಂಎ), ತೀವ್ರ ಆಕ್ರೋಶ ವ್ಯಕ್ತಪಡಿಸಿದೆ ಹಾಗೂ ಇಂತಹ ಕೃತ್ಯಗಳನ್ನು ಕೂಡಲೇ ನಿಲ್ಲಿಸಲು ಕೇಂದ್ರ ಸರ್ಕಾರವು ಕಠಿಣ ಕೇಂದ್ರೀಯ ಕಾನೂನನ್ನು ಬಳಸಬೇಕು ಎಂದು ಆಗ್ರಹಿಸಿದೆ.

ತಿಂಗಳ ಸಂಪಾದನೆ ಬಡವರ ಊಟಕ್ಕೆ ನೀಡಿದ ವಾಚ್‌ಮನ್

‘ಇದಕ್ಕೆ ಪ್ರತಿಭಟನಾರ್ಥವಾಗಿ ಏಪ್ರಿಲ್‌ 22ರಂದು ರಾತ್ರಿ 9ಕ್ಕೆ ಎಲ್ಲ ವೈದ್ಯರು ಹಾಗೂ ಆಸ್ಪತ್ರೆಗಳ ಸಿಬ್ಬಂದಿ ಮೋಂಬತ್ತಿ ಹಚ್ಚಿ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ. ಒಂದು ವೇಳೆ ಕಠಿಣ ಕೇಂದ್ರೀಯ ಕಾನೂನಿನನ್ವಯ ದಾಳಿಕೋರರ ವಿರುದ್ಧ ಕ್ರಮ ಜರುಗಿಸದೇ ಹೋದರೆ ಏಪ್ರಿಲ್‌ 23ನ್ನು ಕಪ್ಪು ದಿನ ಎಂದು ಘೋಷಿಸಿ, ಅಂದು ಕಪ್ಪುಪಟ್ಟಿಧರಿಸಿ ವೈದ್ಯರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ’ ಎಂದು ಐಎಂಎ ಹೇಳಿದೆ.

ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗೆ ಸರ್ಕಾರ ಕ್ರಮ ಜರುಗಿಸಬೇಕು ಎಂದು ಅದು ಒತ್ತಾಯಿಸಿದೆ.

click me!