ದೇಶಕ್ಕೆಲ್ಲಾ ಕೊರೋನಾ ವಿಮೆ ನೀಡುವ ಆಯುಷ್ಮಾನ್‌ ಕಚೇರಿಗೇ ಬೀಗ!

Published : Apr 21, 2020, 10:52 AM ISTUpdated : Apr 21, 2020, 11:22 AM IST
ದೇಶಕ್ಕೆಲ್ಲಾ ಕೊರೋನಾ ವಿಮೆ ನೀಡುವ ಆಯುಷ್ಮಾನ್‌ ಕಚೇರಿಗೇ ಬೀಗ!

ಸಾರಾಂಶ

ದೇಶಕ್ಕೆಲ್ಲಾ ಕೊರೋನಾ ವಿಮೆ ನೀಡುವ ಆಯುಷ್ಮಾನ್‌ ಕಚೇರಿಗೆ ಭೀತಿಯಿಂದ ಬೀಗ| ಕಚೇರಿಯ ಅಧಿಕಾರಿಯೊಬ್ಬರಿಗೆ ಕೋವಿಡ್‌-19 ಸೋಂಕು ದೃಢ ಪಟ್ಟಿರುವುದಿಂದ ಈ ಕ್ರಮ 

ನವದೆಹಲಿ(ಏ.21): ಕೊರೋನಾ ಪೀಡಿತ ದೇಶದ ಕೋಟ್ಯಂತರ ಜನರಿಗೆ ಆಯುಷ್ಮಾನ್‌ ಭಾರತ್‌ ವಿಮಾ ಯೋಜನೆಯಡಿ ಉಚಿತ ಆರೋಗ್ಯ ಸೇವೆ ಒದಗಿಸುವ ‘ಆಯುಷ್ಮಾನ್‌ ಭಾರತ್‌’ನ ದೆಹಲಿ ಕಚೇರಿಗೆ ಬೀಗ ಜಡಿಯಲಾಗಿದೆ.

ಕಚೇರಿಯ ಅಧಿಕಾರಿಯೊಬ್ಬರಿಗೆ ಕೋವಿಡ್‌-19 ಸೋಂಕು ದೃಢ ಪಟ್ಟಿರುವುದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಜತೆಗೆ 25 ಮಂದಿ ಕೆಲಸಗಾರರನ್ನು ಕ್ವಾರಂಟೈನ್‌ಗೆ ಒಳ ಪಡಿಸಲಾಗಿದೆ.

ಆಯುಷ್ಮಾನ್‌ ಭಾರತ ಅಡಿ ಉಚಿತ ಕೊರೋನಾ ಚಿಕಿತ್ಸೆ!

ದೆಹಲಿಯ ಕನ್ಹಾಟ್‌ಪ್ಲೇಸ್‌ನ ಜೀವನ್‌ ಭಾರತಿ ಕಟ್ಟಡಲ್ಲಿರುವ ಕಚೇರಿ ಕಚೇರಿಗೆ ಆರು ದಿನಗಳ ಹಿಂದೆಯೇ ಬೀಗ ಜಡಿಯಲಾಗಿದ್ದು, ಏ.24ರ ವರೆಗೆ ಕಚೇರಿ ಮುಚ್ಚಿರಲಿದೆ ಎಂದು ಆಯುಷ್ಮಾನ್‌ ಭಾರತ್‌ ಸಿಇಒ ಇಂದೂ ಭೂಷಣ್‌ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!