Madhya Pradesh: ಪತನಗೊಂಡ ಯುದ್ಧ ವಿಮಾನದ ಬ್ಲಾಕ್‌ಬಾಕ್ಸ್‌ ಪತ್ತೆ

Published : Jan 30, 2023, 07:38 AM ISTUpdated : Jan 30, 2023, 10:54 AM IST
Madhya Pradesh: ಪತನಗೊಂಡ ಯುದ್ಧ ವಿಮಾನದ ಬ್ಲಾಕ್‌ಬಾಕ್ಸ್‌ ಪತ್ತೆ

ಸಾರಾಂಶ

ಶನಿವಾರ ಪತನಗೊಂಡಿದ್ದ ಭಾರತೀಯ ವಾಯುಪಡೆಗೆ ಸೇರಿದ ಮಿರಾಜ್‌-2000 ಮತ್ತು ಸುಖೋಯ್‌-30 ಯುದ್ಧ ವಿಮಾನದ ಬ್ಲಾಕ್‌ಬಾಕ್ಸ್‌ ಪತ್ತೆಯಾಗಿದೆ. ಹೀಗಾಗಿ ಅಪಘಾತಕ್ಕೆ ಕಾರಣವೇನು ಎಂಬ ಅಂಶಗಳು ಬ್ಲಾಕ್‌ಬಾಕ್ಸ್‌ ವಿಶ್ಲೇಷಣೆಯ ಬಳಿಕ ಪತ್ತೆಯಾಗುವ ಭರವಸೆ ಸಿಕ್ಕಿದೆ.

ಮೊರೇನಾ: ಶನಿವಾರ ಪತನಗೊಂಡಿದ್ದ ಭಾರತೀಯ ವಾಯುಪಡೆಗೆ ಸೇರಿದ ಮಿರಾಜ್‌-2000 ಮತ್ತು ಸುಖೋಯ್‌-30 ಯುದ್ಧ ವಿಮಾನದ ಬ್ಲಾಕ್‌ಬಾಕ್ಸ್‌ ಪತ್ತೆಯಾಗಿದೆ. ಹೀಗಾಗಿ ಅಪಘಾತಕ್ಕೆ ಕಾರಣವೇನು ಎಂಬ ಅಂಶಗಳು ಬ್ಲಾಕ್‌ಬಾಕ್ಸ್‌ ವಿಶ್ಲೇಷಣೆಯ ಬಳಿಕ ಪತ್ತೆಯಾಗುವ ಭರವಸೆ ಸಿಕ್ಕಿದೆ. ಮಧ್ಯಪ್ರದೇಶಧ ಮೊರೆನಾದ ಪಹಾಡ್‌ಗಢದಲ್ಲಿ 2 ವಿಮಾನಗಳು ಪತನಗೊಂಡಿದ್ದವು. ಇವುಗಳ ಅವಶೇಷಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಪಹಾಡ್‌ಗಢ್‌ನಲ್ಲಿ ಮಿರಾಜ್‌ನ ಬ್ಲಾಕ್‌ಬಾಕ್ಸ್‌ ಪತ್ತೆಯಾಗಿದೆ. 

ಇದೇ ಸ್ಥಳದಲ್ಲಿ ಸುಖೋಯ್‌ ಡೇಟಾ ರೆಕಾರ್ಡರ್‌ನ (data recorder) ಒಂದು ಭಾಗ ಪತ್ತೆಯಾಗಿದ್ದು, ಮತ್ತಷ್ಟು ಅವಶೇಷಗಳು ರಾಜಸ್ಥಾನದ ಭರತ್‌ಪುರದಲ್ಲಿ (Bharatpur) ಬಿದ್ದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು, ವಾಯುಪಡೆ ಮತ್ತು ಇತರ ಅಧಿಕಾರಿಗಳು ಸುಖೋಯ್‌ ವಿಮಾನದ ಬ್ಲಾಕ್‌ಬಾಕ್ಸ್‌ನ ಇತರ ಭಾಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶನಿವಾರ ನಡೆದ ದುರ್ಘಟನೆಯಲ್ಲಿ ಮಿರಾಜ್‌ ವಿಮಾನದಲ್ಲಿದ್ದ ಪೈಲಟ್‌ ವಿಂಗ್‌ ಕಮಾಂಡರ್‌ ಬೆಳಗಾವಿಯ ಹನುಮಂತರಾವ್‌ ಸಾರಥಿ (Wing Commander Hanumanta Rao Sarathi)ಮೃತಪಟ್ಟಿದ್ದರೆ, ಸುಖೋಯ್‌ನಲ್ಲಿದ್ದ ಇಬ್ಬರು ಪೈಲಟ್‌ಗಳು ವಿಮಾನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದರು.

ಮಧ್ಯ ಪ್ರದೇಶದ ಮೊರೆನಾ ಬಳಿ 2 ಯುದ್ಧ ವಿಮಾನ ಪತನ; ಓರ್ವ ಪೈಲಟ್‌ ಸಾವು

Aero India Show ಜ.30 ರಿಂದ ಫೆ.20ರ ವರೆಗೆ ಯಲಹಂಕ ವಾಯುನೆಲೆ ಸುತ್ತ ಮಾಂಸ ಮಾರಾಟ ನಿಷೇಧ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?