
ದೇಶಾದ್ಯಂತ ಬಿಜೆಪಿಯಿಂದ ಹಲವು ಸೇವಾ ಕಾರ್ಯಕ್ರಮ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ 75 ವರ್ಷ ತುಂಬಲಿದ್ದು, ಇದರ ಭಾಗವಾಗಿ ಬಿಜೆಪಿಯು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಕ್ತದಾನ, ಆರೋಗ್ಯ ತಪಾಸಣೆ ಶಿಬಿರಗಳಿಂದ ಹಿಡಿದು, ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸುವ ತನಕ ವಿವಿಧ ರಾಜ್ಯಗಳು ನಾನಾ ಯೋಜನೆ ಜಾರಿಗೆ ಮುಂದಾಗಿವೆ.
ಸೆ.17ರಿಂದ ಅ.2 (ಗಾಂಧಿ/ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ) ವರೆಗೆ ದೇಶಾದ್ಯಂತ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಅಭಿಯಾನ, ಒಡಿಶಾದಲ್ಲಿ ಗಿಡನೆಡುವ ಅಭಿಯಾನವನ್ನು ಸಹ ಅಲ್ಲಿನ ಬಿಜೆಪಿ ಸರ್ಕಾರ ಹಮ್ಮಿಕೊಂಡಿದೆ. ಬಿಜೆಪಿ ಯುವಮೋರ್ಚಾ 75 ನಗರಗಳಲ್ಲಿ ‘ನಮೋ ಯುವ ರನ್’ ಹೆಸರಿನಲ್ಲಿ ಮ್ಯಾರಥಾನ್ ಆಯೋಜಿಸಿದ್ದು, ಪ್ರತಿ ಕಡೆ 10000ಕ್ಕೂ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ. ಗುಜರಾತ್ ಸರ್ಕಾರ ಯೋಗ ಅಭಿಯಾನ, ದೆಹಲಿಯಲ್ಲಿ ಸಿಎಂ ರೇಖಾ ಗುಪ್ತಾ ಸರ್ಕಾರ ವಿವಿಧ ಆರೋಗ್ಯ ಯೋಜನೆಗಳನ್ನು ಜನರಿಗೆ ಮುಕ್ತ ಮಾಡಲಿದ್ದಾರೆ. ಬಂಗಾಳದಲ್ಲಿ ವಾರಪೂರ್ತಿ ಮೋದಿ ಅವರ ಜೀವನದ ಕುರಿತು ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಪುಣೆಯಲ್ಲಿ ಡ್ರೋನ್ ಲೇಸರ್ ಶೋ:
ಮೋದಿ ಅವರ ಜನ್ಮದಿನದ ಹಿಂದಿನ ದಿನ ಮಂಗಳವಾರ ಪುಣೆಯಲ್ಲಿ ಸಂಸದ, ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳಿಧರ ಮೊಹೋಲ್ ಅವರು ನೇತೃತ್ವದಲ್ಲಿ ಡ್ರೋನ್ ಲೇಸರ್ ಶೋ ಆಯೋಜಿಸಲಾಗಿತ್ತು. ಇಲ್ಲಿ ಮೋದಿ ಅವರ ಕುರಿತು ಪ್ರದರ್ಶನ ನಡೆಯಿತು.
ಕುನೋದಿಂದ 2 ಚೀತಾ ವರ್ಗ:
ಮಧ್ಯ ಪ್ರದೇಶದ ಕುನೋದಿಂದ 2 ಚೀತಾಗಳನ್ನು ಮಂಡ್ಸೋರ್‌ನಲ್ಲಿನ ಗಾಂಧಿ ಸಾಗರ್ ಅಭಯಾರಣ್ಯಕ್ಕೆ ವರ್ಗಾಯಿಸಲಾಗುತ್ತದೆ. ಈಗಾಗಲೇ ಇಲ್ಲಿಗೆ 2 ಗಂಡು ಚೀತಾಗಳನ್ನು ಬಿಟ್ಟಿದ್ದು, ಈಗ ಅಲ್ಲಿಗೇ 2 ಹೆಣ್ಣು ಚೀತಾಗಳನ್ನು ಬಿಡಲಾಗುತ್ತದೆ.
ಪಿತೃಪಕ್ಷ ಮೇಳದಲ್ಲಿ ಮೋದಿ ಭಾಗಿ:
ಬಿಹಾರದ ಗಯಾಜಿಯಲ್ಲಿ ನಡೆಯಲಿರುವ ಪಿತೃಪಕ್ಷ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗುವ ಸಾಧ್ಯತೆ ಎನ್ನಲಾಗಿದೆ.
ಇದನ್ನೂ ಓದಿ: ಭಾರತದ ಕ್ಷಿಪಣಿ ದಾಳಿಗೆ ಉಗ್ರ ಮಸೂದ್ ಅಜರ್ ಪರಿವಾರವೇ ನಾಶವಾಗಿದೆ: ಮೊದಲ ಬಾರಿ ಈ ಬಗ್ಗೆ ಬಾಯ್ಬಿಟ್ಟ ಉಗ್ರ ಸಂಘಟನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ