ರಾಮ ಜನ್ಮಭೂಮಿ ಅಡಿಗಲ್ಲು ಕಾರ್ಯಕ್ರಮ ಆಗಸ್ಟ್ 5ಕ್ಕೆ ನಿಗದಿ ಆದಾಗ ಅಡ್ವಾಣಿ ಅವರನ್ನು ಮೋದಿ ಅಯೋಧ್ಯೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಆದರೆ ಇಲ್ಲ, 93 ವರ್ಷ ವಯಸ್ಸಾಗಿದೆ, ಹೀಗಾಗಿ ಬೇಡ ಎಂದು ತೀರ್ಮಾನ ಆಗಿದೆ ಎಂದು ಸಂಘ ಪರಿವಾರದ ಮೂಲಗಳು ಹೇಳುತ್ತಿದ್ದವು.
ಲಕ್ನೋ (ಆ. 07): ರಾಮ ಜನ್ಮಭೂಮಿ ಅಡಿಗಲ್ಲು ಕಾರ್ಯಕ್ರಮ ಆಗಸ್ಟ್ 5ಕ್ಕೆ ನಿಗದಿ ಆದಾಗ ಅಡ್ವಾಣಿ ಅವರನ್ನು ಮೋದಿ ಅಯೋಧ್ಯೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಆದರೆ ಇಲ್ಲ, 93 ವರ್ಷ ವಯಸ್ಸಾಗಿದೆ, ಹೀಗಾಗಿ ಬೇಡ ಎಂದು ತೀರ್ಮಾನ ಆಗಿದೆ ಎಂದು ಸಂಘ ಪರಿವಾರದ ಮೂಲಗಳು ಹೇಳುತ್ತಿದ್ದವು.
ಬಿಹಾರದಲ್ಲಿ ಕುಸಿಯುತ್ತಿದೆ ನಿತೀಶ್ ಕುಮಾರ್ ಜನಪ್ರಿಯತೆ
undefined
ಮೋದಿ ಅಯೋಧ್ಯೆಯ ಭಾಷಣದಲ್ಲಿ ಅಡ್ವಾಣಿ ಹೆಸರು ಪ್ರಸ್ತಾಪಿಸಬಹುದು ಎಂದು ಅನೇಕ ಬಿಜೆಪಿ ಮತ್ತು ಸಂಘದ ನಾಯಕರಿಗೆ ಅನ್ನಿಸಿತ್ತು. ಆದರೆ ಮೋದಿ ಹಾಗೇನೂ ಮಾಡಲಿಲ್ಲ. ಮುಂದೆ ಅಡ್ವಾಣಿಗೆ ಸಂಬಂಧಿಸಿದ ಇತಿಹಾಸ ಬರೆಯುವಾಗ ಅತ್ಯಂತ ನತದೃಷ್ಟನಾಯಕ ಎಂದು ದಾಖಲಾಗಬಹುದೇನೋ.
ನಾನು ಅಕ್ಬರನ ಬೀರಬಲ್ ಅಲ್ಲ..!
ರಾಜೀವ್ ಗಾಂಧಿ ಪ್ರಧಾನಿ ಆಗಿದ್ದ ಹೊಸತರಲ್ಲಿ ಇಂದೋರ್‌ನ ಶಾ ಬಾನೋ ತ್ರಿವಳಿ ತಲಾಖ್ ಪ್ರಕರಣದಲ್ಲಿ ಜಾರಿ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್‌ವರೆಗೆ ಎಲ್ಲ ಕಡೆ ಶಾ ಬಾನೋ ಪರವಾಗಿ ತೀರ್ಪು ಬಂದಿತ್ತು. ತೀರ್ಪು ಬಂದ ದಿನ ಸಂಸತ್ ಭವನದ ಪ್ರಧಾನಿ ಕಾರ್ಯಾಲಯದಲ್ಲಿ ರಾಜೀವ್ ಗಾಂಧಿ ಬಹರೇಚ್‌ನಿಂದ ಸಂಸದರಾಗಿದ್ದ ಆರಿಫ್ ಮೊಹಮ್ಮದ್ ಖಾನ್‌ರನ್ನು ಕರೆದು ಲೋಕಸಭೆಯಲ್ಲಿ ಮಾತನಾಡಿ ಅತಿರೇಕಿ ಮುಸ್ಲಿಮರಿಗೆ ಉತ್ತರ ಕೊಡಿ ಎಂದರಂತೆ. ಆರಿಫ್ 50 ನಿಮಿಷ ನಿಂತು ಮುಸ್ಲಿಂ ಮಹಿಳೆಯರ ಬಗ್ಗೆ ಭಾಷಣ ಮಾಡಿದಾಗ ರಾಜೀವ್ ತುಂಬಾ ಚೆನ್ನಾಗಿತ್ತು ಎಂದು ಚೀಟಿ ಕಳುಹಿಸಿದರಂತೆ.
ಇದಾದ ಹತ್ತು ದಿನಕ್ಕೆ ಎಂ.ಎಲ್ ಪೋತದಾರ್ ಹಾಗೂ ಅರ್ಜುನ್ ಸಿಂಗ್‌ರ ಒತ್ತಡಕ್ಕೆ ಒಳಗಾಗಿ ಸುಪ್ರೀಂಕೋರ್ಟ್‌ನ ತೀರ್ಪನ್ನು ವಿರೋಧಿಸಿ ಶಾಸನ ಮಾಡಲು ರಾಜೀವ್ ಗಾಂಧಿ ತೀರ್ಮಾನ ತೀರ್ಮಾನ ತೆಗೆದುಕೊಂಡರು. ಆಗ ಮತ್ತೆ ಆರಿಫ್ ಖಾನ್‌ರನ್ನು ಕರೆದು ಈಗ ವಿರುದ್ಧ ಮಾತನಾಡು, ಮೌಲ್ವಿ ಗಳಿಂದ ಒತ್ತಡ ಇದೆ ಎಂದು ಹೇಳಿದರಂತೆ. ಆಗ ಆರಿಫ್ ಸಿಟ್ಟಾಗಿ ನಾನು ಅಕ್ಬರನ ಮಂತ್ರಿ ಬೀರಬಲ್ ಅಲ್ಲ. ನನಗೆ ಬದ್ಧತೆ ಇದೆ ಎಂದು ಹೇಳಿ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಸ್ಲಿಮರಿಗೆ ಕೋರ್ಟ್ ತೀರ್ಪಿನ ವಿರುದ್ಧ ಶಾಸಕಾಂಗ ರಕ್ಷಣೆ ನೀಡುವುದು ಸರಿ ಎಂದಾದರೆ ರಾಮ ಮಂದಿರವನ್ನು ಕಟ್ಟಿಕೊಡಿ ಎಂದು ಅಶೋಕ್ ಸಿಂಘಾಲ್ ಎತ್ತಿದ ಪ್ರಶ್ನೆಯೇ ಬಿಜೆಪಿಯ ಇವತ್ತಿನ ಉತ್ಥಾನಕ್ಕೆ ಕಾರಣವಲ್ಲವೇ?
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ