ರಾಜಸ್ಥಾನ ರಾಜಕೀಯದಲ್ಲಿ ತಿಕ್ಕಾಟ; ಕುತೂಹಲ ಮೂಡಿಸಿದೆ ವಸುಂಧರಾ ರಾಜೆ ಮೌನ

By Suvarna News  |  First Published Aug 7, 2020, 3:06 PM IST

ರಾಜಸ್ಥಾನದ ಕಾಂಗ್ರೆಸ್‌ನಲ್ಲಿ ಇಷ್ಟೆಲ್ಲ ತಿಕ್ಕಾಟಗಳು ನಡೆಯುತ್ತಿರುವಾಗ ‘ಮಹಾರಾಣಿ’ ವಸುಂಧರಾ ರಾಜೇ ಮೌನದ ಬಗ್ಗೆ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಕಡೆ ಭಾರಿ ಕುತೂಹಲವಿದೆ. ಮೋದಿ, ಅಮಿತ್‌ ಶಾ ಹಾಗೂ ಆರ್‌ಎಸ್‌ಎಸ್‌ ಜೊತೆಗೆ ವಸುಂಧರಾ ಸಂಬಂಧ ಅಷ್ಟಕಷ್ಟೆ. 


ಬೆಂಗಳೂರು (ಅ. 07): ರಾಜಸ್ಥಾನದ ಕಾಂಗ್ರೆಸ್‌ನಲ್ಲಿ ಇಷ್ಟೆಲ್ಲ ತಿಕ್ಕಾಟಗಳು ನಡೆಯುತ್ತಿರುವಾಗ ‘ಮಹಾರಾಣಿ’ ವಸುಂಧರಾ ರಾಜೇ ಮೌನದ ಬಗ್ಗೆ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಕಡೆ ಭಾರಿ ಕುತೂಹಲವಿದೆ. ಮೋದಿ, ಅಮಿತ್‌ ಶಾ ಹಾಗೂ ಆರ್‌ಎಸ್‌ಎಸ್‌ ಜೊತೆಗೆ ವಸುಂಧರಾ ಸಂಬಂಧ ಅಷ್ಟಕಷ್ಟೆ.

ಬಿಹಾರದಲ್ಲಿ ಕುಸಿಯುತ್ತಿದೆ ನಿತೀಶ್ ಕುಮಾರ್ ಜನಪ್ರಿಯತೆ

Tap to resize

Latest Videos

ಈಗ ಅಶೋಕ್‌ ಗೆಹ್ಲೋಟ್‌ ಅಮಿತ್‌ ಶಾ ಮತ್ತು ಕೇಂದ್ರ ಸಚಿವ ಕಿಶೋರ್‌ ಶೆಖಾವತ್‌ ಮೇಲೆ ಸರ್ಕಾರ ಬೀಳಿಸುವ ಆರೋಪ ಮಾಡುತ್ತಿದ್ದಾರೆಯೇ ಹೊರತು ವಸುಂಧರಾ ಬಗ್ಗೆ ಒಂದು ಮಾತೂ ಆಡುತ್ತಿಲ್ಲ. ಮೂಲಗಳು ಹೇಳುತ್ತಿರುವ ಪ್ರಕಾರ ಸಚಿನ್‌ ಪೈಲಟ್‌ ಜೊತೆ ಬಿಜೆಪಿ ಸಖ್ಯ ಬೆಳೆಸುವುದು ವಸುಂಧರಾಗೆ ಇಷ್ಟವಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ ವಸುಂಧರಾಗೆ ಇವತ್ತು ಕೂಡ ಬಿಜೆಪಿಯ 70ರಲ್ಲಿ 42 ಶಾಸಕರ ಪಕ್ಕಾ ಬೆಂಬಲವಿದೆ. ಇಲ್ಲಿಯವರೆಗಂತೂ ಮಹಾರಾಣಿ ತನ್ನ ಎಲೆ ಎಸೆದಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!