ರಕ್ತದಲ್ಲಿ ತಿಲಕವಿಟ್ಟು PM Modi Birthday ಆಚರಿಸಿದ ಮುಸ್ಲಿಂ ನಾಯಕಿ ರೂಬಿ ಆಸಿಫ್ ಖಾನ್!

Published : Sep 18, 2022, 03:50 PM IST
ರಕ್ತದಲ್ಲಿ ತಿಲಕವಿಟ್ಟು PM Modi Birthday ಆಚರಿಸಿದ ಮುಸ್ಲಿಂ ನಾಯಕಿ ರೂಬಿ ಆಸಿಫ್ ಖಾನ್!

ಸಾರಾಂಶ

ಮನೆಯಲ್ಲಿ ಗಣೇಶ ಚೌತಿ ಆಚರಿಸಿ ಮುಸ್ಲಿಂ ಸಮುದಾಯದ ಭಾರಿ ಆಕ್ರೋಶ ಹಾಗೂ ಫತ್ವಾಗೆ ಕಾರಣವಾಗಿದ್ದ ನಾಯಕಿ ರೂಬಿ ಆಸಿಫ್ ಖಾನ್ ಇದೀಗ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬ ಆಚರಿಸಿ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ. ಈ ಬಾರಿ ತಮ್ಮ ರಕ್ತದಲ್ಲಿ ತಿಲಕವಿಟ್ಟು ಮೋದಿ ಹುಟ್ಟು ಹಬ್ಬ ಆಚರಿಸಿದ್ದಾರೆ.

ಉತ್ತರ ಪ್ರದೇಶ(ಸೆ.18): ರೂಬಿ ಆಸಿಫ್ ಖಾನ್.. ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕಿ ರೂಬಿ ಆಸಿಫ್ ಖಾನ್ ಇದೀಗ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 72ನೇ ಹುಟ್ಟು ಹಬ್ಬವನ್ನು ರೂಬಿ ಆಸಿಫ್ ಖಾನ್ ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ. ತಮ್ಮ ಬೆಂಬಲಿಗರ ಜೊತೆ ಮೋದಿ ಹೆಸರಿನ ದೊಡ್ಡ ಕೇಕ್ ಕತ್ತರಿಸಿ ಬರ್ತ್‌ಡೇ ಆಚರಿಸಿದ್ದಾರೆ. ಇಷ್ಟೇ ಅಲ್ಲ ಇದೇ ವೇಳೆ ತಮ್ಮ ರಕ್ತ ತೆಗೆದು ತಿಲಕವಿಟ್ಟು ಜೈ ಮೋದಿ ಎಂದು ಘೋಷಣೆ ಕೂಗಿದ್ದಾರೆ. ರೂಬಿ ಆಸಿಫ್ ಖಾನ್ ನಡೆ ಮತ್ತೆ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ರೂಬಿ ಆಸಿಫ್ ಖಾನ್ ಮತ್ತೆ ಮತ್ತೆ ಇಸ್ಲಾಂಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದನ್ನು ಮುಸ್ಲಿಂ ಸಮುದಾಯ ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದೆ.

ಮನೆಯಲ್ಲೇ ನಾನು ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬ(PM Modi Birthday) ಆಚರಿಸಿದ್ದೇನೆ. ಮುಸ್ಲಿಂ ಸಹೋದರ ಸಹೋದರಿಯರು, ಬೆಂಬಲಿಗರ ಜೊತೆ ಕೇಕ್ ಕತ್ತರಿಸಿ(Birthday Cake) ಸಿಹಿ ಹಂಚಿದ್ದೇನೆ. ರಕ್ತದಿಂದ ತಿಲಕ ಇಟ್ಟಿದ್ದೇನೆ. ಪ್ರಧಾನಿ ನರೇಂದ್ರ ಮೋದಿಗೆ ಉತ್ತಮ ಆರೋಗ್ಯ, ಆಯುಷ್ಯ ಭಗವಂತ ಕರುಣಿಸಲಿ ಎಂದು ಮುಸ್ಲಿಂ ಸಮುದಾಯ( ಪಾರ್ಥಿಸಿದೆ ಎಂದು ರೂಬಿ ಆಸಿಫ್ ಖಾನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅತ್ಯುತ್ತಮ ಆಡಳಿತ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದಿದ್ದಾರೆ. ಎಲ್ಲಾ ಸಮುದಾಯ, ಧರ್ಮಗಳಿಗೆ ಸಮಾನ ಅವಕಾಶ, ಸೌಲಭ್ಯಗಳನ್ನು ನೀಡಿದ್ದಾರೆ. ಮೋದಿ ರೀತಿಯ ಪ್ರಧಾನಿಯನ್ನು ಈ ಹಿಂದೆ ಭಾರತ(India) ಕಂಡಿಲ್ಲ, ಮುಂದೆ ಕಾಣಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಮೋದಿ ಮತ್ತಷ್ಟು ಅಭಿವೃದ್ಧಿಯೊಂದಿಗೆ ಭಾರತವನ್ನು ವಿಶ್ವದ ನಂ.1 ದೇಶವನ್ನಾಗಿ ಮಾಡಲಿ ಎಂದು ರೂಬಿ ಆಸಿಫ್ ಖಾನ್(ruby asif khan) ಹೇಳಿದ್ದಾರೆ.

 

ನನ್ನ ಮಕ್ಕಳಿಗಿಂತ ನೀವು ತುಂಬಾ ಇಷ್ಟ: ಪ್ರಧಾನಿ ಮೋದಿಗೆ ನಟ ಅನುಪಮ್ ಖೇರ್ ತಾಯಿಯ ಪ್ರೀತಿಯ ವಿಶ್

ಉತ್ತರ ಪ್ರದೇಶದ ಬಿಜೆಪಿ(Uttar Pradesh BJP leader) ನಾಯಕಿ ರೂಬಿ ಆಸಿಫ್ ಖಾನ್ ಮುಸ್ಲಿಂ ಮುಖಂಡರು, ಮೌಲ್ವಿಗಳು ಅಕ್ರೋಶಕ್ಕೆ ಕಾರಣವಾಗಿದ್ದಾರೆ. ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೂ ಮೊದಲು ಅಂದರೆ ಗಣೇಶ ಚೌತಿ(Ganesh Chaturithi) ವೇಳೆ ರೂಬಿ, ತಮ್ಮ ಮನೆಯಲ್ಲಿ ಗಣೇಶ ವಿಗ್ರಹ ತಂದು ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಿದ್ದರು. ಆರತಿ ಎತ್ತಿ, ಕುಂಕುಮ ಇಟ್ಟು ಎಲ್ಲರಿಗೂ ಪ್ರಸಾದ ಹಂಚಿದ್ದರು. ರೂಬಿ ಆಸಿಫ್ ಖಾನ್ ಗಣೇಶ ಹಬ್ಬ ಆಚರಣೆ ಮುಸ್ಲಿಂ ಮುಖಂಡರ ಕೆಂಗಣ್ಣಿಗೆ ಗುರಿಯಾಗಿತ್ತು. 

ಮುಸ್ಲಿಂ ಸಮುದಾಯದಲ್ಲಿದ್ದುಕೊಂಡು(muslim community) ಮೂರ್ತಿ ಪೂಜೆ ಮಾಡುವುದು ಅಕ್ಷ್ಯಮ್ಯ ಅಪರಾಧವಾಗಿದೆ. ಅದರಲ್ಲೂ ಹಿಂದೂ ದೇವರ ಪೂಜೆ, ಹಿಂದೂಗಳಂತೆ ತಿಲಕ, ಆರತಿ ಎತ್ತುವುದು ಮುಸ್ಲಿಂ ಸಮುದಾಯ ಪ್ರಬಲವಾಗಿ ವಿರೋಧಿಸುತ್ತದೆ ಎಂದು ಮುಸ್ಲಿಂ ಮುಖಂಡರು ಹೇಳಿದ್ದರು. ಇಷ್ಟೇ ಅಲ್ಲ ಮೌಲ್ವಿಗಳು ರೂಬಿ ಆಸಿಫ್ ಖಾನ್ ವಿರುದ್ಧ ಫತ್ವಾ ಹೊರಡಿಸಿದ್ದರು.

 

ವನ್ಯಜೀವಿಗಳನ್ನು ಸಂರಕ್ಷಿಸುವ Modi Government ಪ್ರಯತ್ನಗಳು ಹೇಗೆ ಉತ್ತಮ ಫಲಿತಾಂಶಗಳನ್ನು ನೀಡಿವೆ ನೋಡಿ..

ಮೋದಿ ಹುಟ್ಟುಹಬ್ಬ
ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 17 ರಂದು 72ನೇ ಹುಟ್ಟು ಹಬ್ಬ ಆಚರಿಸಿದ್ದಾರೆ.  ಇದೇ ದಿನ ಆಫ್ರಿಕಾ ಖಂಡದ ನಮೀಬಿಯಾದಿಂದ ತರಿಸಿದ 8 ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ  ಮಧ್ಯಪ್ರದೇಶದ ಕುನೋ ಕಾಡಿಗೆ ಬಿಡುಗಡೆ ಮಾಡಿದರು. ಅದರೊಂದಿಗೆ, ಕೇವಲ 3 ಸೆಕೆಂಡ್‌ನಲ್ಲಿ 100 ಮೀಟರ್‌ ಓಡುವ ಜಗತ್ತಿನ ಅತಿ ವೇಗದ ಪ್ರಾಣಿಯ ಯುಗ ಭಾರತದಲ್ಲಿ ಮತ್ತೆ ಆರಂಭವಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ