ರಾತ್ರಿ 11.45ಕ್ಕೆ ಶುರುವಾಗಿತ್ತು ಬಿಜೆಪಿ ಸರ್ಜಿಕಲ್ ಸ್ಟ್ರೈಕ್: 8 ತಾಸು ನಡೆದದ್ದೇನು?

By Web Desk  |  First Published Nov 23, 2019, 3:43 PM IST

ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಬಿಜೆಪಿ ಸರ್ಜಿಕಲ್ ಸ್ಟ್ರೈಕ್| ಶಿವಸೇನೆ, ಕಾಂಗ್ರೆಸ್‌ಗೆ ಆಘಾತ| ರಾತ್ರಿ 11.45ಕ್ಕೆ ಆರಂಭವಾಗಿತ್ತು ಪ್ಲಾನಿಂಗ್| 8 ತಾಸಿನಲ್ಲಿ ಏನೇನಾಯ್ತು? ಇಲ್ಲಿದೆ ವಿವರ


ಮುಂಬೈ[ನ.23]: ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಹಾಗೂ NCP ನೇತೃತ್ವದ ಸರ್ಕಾರ ರಚಿಸಲು ಎಲ್ಲಾ ಸಿದ್ಧತೆಗಳು ನಡೆದಿದ್ದವು. ಶನಿವಾರದಂದು ಮೂರು ಪಕ್ಷದ ನಾಯಕರು ರಾಜ್ಯಪಾಲರನ್ನು ಭೇಟಿಯಾಗುವುದೊಂದೇ ಬಾಕಿ ಇತ್ತು. ಉದ್ಧವ್ ಠಾಕ್ರೆ ಸಿಎಂ ಆಧರೆ ಇನ್ನುಳಿದವರಿಗೆ ಯಾವ ಖಾತೆ ನೀಡುವುದು ಎಂಬುವುದೂ ಫೈನಲ್ ಆಗಿತ್ತು. ಆದರೆ ರಾತ್ರೋ ರಾತ್ರಿ ನಡೆದ ಕ್ಷಿಪ್ರ ಕ್ರಾಂತಿಯಿಂದ NCP ನಾಯಕ ಬಿಜೆಪಿ ಜೊತೆ ಕೈ ಜೋಡಿಸಿ, ಶನಿವಾರ ಬೆಳಗ್ಗೆ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 

ಹಾಗಾದ್ರೆ ಮಹಾರಾಷ್ಟ್ರ ಸರ್ಕಾರದಲ್ಲಿ ಇಂತಹ ಬೆಳವಣಿಗೆ ಆಗಿದ್ದು ಹೇಗೆ? ಬಿಜೆಪಿ ರಾಜಕೀಯ ಕ್ಷೇತ್ರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಹೇಗೆ? ಯಾವ ಕ್ಷಣ ಏನಾಯ್ತು? ಇಲ್ಲಿದೆ ವಿವರ

Tap to resize

Latest Videos

undefined

ಬರೀ ಮಾತಾಡಿದ್ದೇ ಬಂತು: ಸ್ವಪಕ್ಷದ ವಿರುದ್ಧ ಹರಿಹಾಯ್ದ ‘ಕೈ’ ನಾಯಕ!

* ರಾತ್ರಿ ಸುಮಾರು 11.45ಕ್ಕೆ ಅಜಿತ್ ಪವಾರ್ ಹಾಗೂ ಬಿಜೆಪಿ ನಡುವೆ ಒಪ್ಪಂದ ಫಿಕ್ಸ್

* ರಾತ್ರಿ 11.55: ದೇವೇಂದ್ರ ಫಡ್ನವೀಸ್ ಫಡ್ನವೀಸ್ ಬಿಜೆಪಿ ನಾಯಕರಿಗೆ ಪ್ರಮಾಣವಚನ ಕಾರ್ಯಕ್ರಮಕ್ಕೆವ ತಯಾರಿ ನಡೆಸುವಂತೆ ಆದೇಶ ನೀಡಿದರು ಹಾಗೂ ಈ ವಿಚಾರ ಶಿವಸೇನೆ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಿಗೆ ತಿಳಿಯದಂತೆ ಎಚ್ಚರ ವಹಿಸುವಂತೆ ಸೂಚಿಸಿದರು. 

* ರಾತ್ರಿ 12. 30: ರಾಜ್ಯಪಾಲ ಭಗತ್ ಸಿಂಗ್ ಕೋಶ್ಯರಿ ದೆಹಲಿಯ ತಮ್ಮ ಪ್ರವಾಸವನ್ನು ರದ್ದುಗೊಳಿಸಿದರು.

* ರಾತ್ರಿ 12. 30: ಕಾಜ್ಯಪಾಲರ ಕಾರ್ಯದರ್ಶಿಗೆ ಬೆಳಗ್ಗೆ 05.45ಕ್ಕೆ ರಾಷ್ಟ್ರಪತಿ ಆಳ್ವಿಕೆ ತೆಗೆದುಹಾಕುವ ಅಧಿಸೂಚನೆ ಜಾರಿಗೊಳಿಸಿ, ಬೆಳಗ್ಗೆ 06.30ಕ್ಕೆ ಪ್ರಮಾಣವಚನ ಕಾರ್ಯಕ್ರಮಕ್ಕೆ ತಯಾರಿ ನಡೆಸುವಂತೆ ಆದೇಶ.

* ರಾತ್ರಿ 02.30: ರಾಜ್ಯಪಾಲರ ಕಾರ್ಯದರ್ಶಿ ಎರಡು ತಾಸಿನೊಳಗೆ ಅಧಿಸೂಚನೆ ಹೊರಡಿಸಿ, ಬೆಳಗ್ಗೆ 07.30ರೊಳಗೆ ಪ್ರಮಾಣವಚನ ಸ್ವೀಕರಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸುವುದಾಗಿ ತಿಳಿಸಿದರು.

* ರಾತ್ರಿ 01.45ರಿಂದ ಬೆಳಗ್ಗೆ ಶನಿವಾರ ಬೆಳಗ್ಗೆ 09.00 ಗಂಟೆಯವರೆಗೆ ಅಜಿತ್ ಪವಾರ್,  ದೇವೇಂದ್ರ ಫಡ್ನವೀಸ್ ಜೊತೆಗಿದ್ದರು. ಪ್ರಮಾಣವಚನ ಸ್ವೀಕರಿಸುವವರೆಗೆ ಎಲ್ಲೂ ಕದಲಲಿಲ್ಲ.

* ಬೆಳಗ್ಗೆ 05:30: ಫಡ್ನವೀಸ್ ಹಾಗೂ ಅಜಿತ್ ಪವಾರ್ ಮಹಾರಾಷ್ಟ್ರ ರಾಜಭವನಕ್ಕೆ ತಲುಪಿದರು.

* ಬೆಳಗ್ಗೆ 05.47: ರಾಷ್ಟ್ರಪತಿ ಆಳ್ವಿಕೆ ತೆಗೆದು ಹಾಕಿರುವ ಅಧಿಸೂಚನೆ ಜಾರಿ. ಆದರೆ ಈ ಘೋಷಣೆ ಬೆಳಗ್ಗೆ 9 ಗಂಟೆಗೆ ಮಾಡಲಾಯ್ತು.

* ಬೆಳಗ್ಗೆ 07.50: ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ಆರಂಭ.

* ಬೆಳಗ್ಗೆ 08.10: ಈ ಸುದ್ದಿ ಇಡೀ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿತು.

* ಬೆಳಗ್ಗೆ 08.16: ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರದ ನೂತನ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಡಿಸಿಎಂ ಅಜಿತ್ ಪವಾರ್ ನ್ನು ಅಭಿನಂದಿಸಿದರು.

ಮಹಾರಾಷ್ಟ್ರ ರಾಜಕೀಯದಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಹಲವು ಸುದ್ದಿಗಳು

"

ನವೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!