ಪಕ್ಷ, ಕುಟುಂಬ ಒಡೆದಿದೆ: ಸುಪ್ರಿಯಾ ಸುಳೆ ವಾಟ್ಸಪ್ ಸ್ಟೇಟಸ್!

By Web Desk  |  First Published Nov 23, 2019, 2:48 PM IST

ಮಹಾರಾಷ್ಟ್ರದಲ್ಲಿ ಮುಗಿಯದ ರಾಜಕೀಯ ಹೈಡ್ರಾಮಾ| ಬಿಜೆಪಿ ಜೊತೆ ಸೇರಿ ಉಪ ಮುಖ್ಯಮಂತ್ರಿಯಾದ ಅಜಿತ್ ಪವಾರ್| ಅಜಿತ್ ಪವಾರ್ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಂಸದೆ ಸುಪ್ರಿಯಾ ಸುಳೆ| ಅಜಿತ್ ಪವಾರ್ ಅವರಿಂದಾಗಿ ಪಕ್ಷ ಹಾಗೂ ಕುಟುಂಬ ಒಡೆದಿದೆ ಎಂದ ಸುಪ್ರಿಯಾ ಸುಳೆ| ಜೀವನದಲ್ಲಿ ಯಾರಿಂದಲೂ ಇಷ್ಟು ಮೋಸ ಹೋಗಿಲ್ಲ ಎಂದು ವಾಟ್ಸಪ್ ಸ್ಟೇಟಸ್| ಅಜಿತ್ ಪವಾರ್ ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದ ಸಂಸದೆ| 


ಮುಂಬೈ(ನ.23): ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಉಪಮುಖ್ಯಮಂತ್ರಿಯಾಗಿರುವ ಎನ್’ಸಿಪಿ ನಾಯಕ ಅಜಿತ್ ಪವಾರ್ ನಡೆಯನ್ನು, ಶರದ್ ಪವಾರ್ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ತೀವ್ರವಾಗಿ ಖಂಡಿಸಿದ್ದಾರೆ.

'ಮಹಾ' ರಾಜಕೀಯದಲ್ಲಿ ರೋಚಕ ತಿರುವು: 'ಸೇನೆ'ಗೆ ಶಾಕ್, ಫಡ್ನವೀಸ್ ಮತ್ತೆ ಸಿಎಂ!

Tap to resize

Latest Videos

undefined

ಅಜಿತ್ ಪವಾರ್ ಅವರಿಂದಗಿ ಪಕ್ಷ ಹಾಗೂ ಕುಟುಂಬ ಒಡೆದು ಹೋಗಿದೆ ಎಂದು ಸುಪ್ರಿಯಾ ಸುಳೆ ನೊಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ದಾರೆ.

Supriya Sule, Senior NCP leader and daughter of Sharad Pawar's latest Whatsapp status,her office confirms statement as well pic.twitter.com/cRksZyrNJK

— ANI (@ANI)

ತಾವು ಜೀವನದಲ್ಲಿ ಯಾರಿಂದಲೂ ಇಷ್ಟು ಮೋಸ ಹೋಗಿಲ್ಲ ಎಂದು ಮಾರ್ಮಿಕವಾಗಿ ಹೇಳಿರುವ ಸುಪ್ರಿಯಾ ಸುಳೆ, ಅಜಿತ್ ಪವಾರ್ ಅವರನ್ನು ಬೆರಂಬಲಿಸಿದ್ದಕ್ಕೆ ಪ್ರತಿಯಾಗಿ ಅವರು  ನಮ್ಮ ಬೆನ್ನಿಗೆ ಚೂರಿ ಇರಿದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶರದ್ ಪವಾರ್ ಅವರು ಇಂದು ಸಂಜೆ 4.30ಕ್ಕೆ ಎನ್’ಸಿಪಿ ಶಾಸಕರ ಸಭೆ ಕರೆದಿದ್ದಾರೆ. ಇದರ ಬಳಿಕ ಎನ್’ಸಿಪಿಯ ಮುಂದಿನ ರಾಜಕೀಯ ನಿರ್ಧಾರ ಸ್ಪಷ್ಟವಾಗಲಿದೆ ಎಂದು ಸುಳೆ ಸ್ಪಷ್ಟಪಡಿಸಿದ್ದಾರೆ.

ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಉಚ್ಛಾಟನೆಗೊಂಡ ಅಜಿತ್ ಪವಾರ್!

NCP Chief Sharad Pawar: Action against Ajit Pawar will be taken as per the procedure. pic.twitter.com/kSJ1OIhjSu

— ANI (@ANI)

ಈ ಮಧ್ಯೆ ಅಜಿತ್ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಿಂದ ಉಚ್ಛಾಟನೆ ಮಾಡಲಾಗಿದೆ. ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪರಿಣಾಮ ಅಜಿತ್ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಉಚ್ಛಾಟನೆಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
 

click me!