ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಲ್ಲಿ ವಿಫಲ ಹಿನ್ನೆಲೆ| ಸ್ವಪಕ್ಷದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕ| ‘ದೀರ್ಘ ಮಾತುಕತೆ ಪರಿಣಾಮ ಕೈ ತಪ್ಪಿದ ಸರ್ಕಾರ ರಚಿಸುವ ಅವಕಾಶ’| ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅಸಮಾಧಾನ| ನಮ್ಮ ವಿಳಂಬ ಧೋರಣೆಯನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿದೆ ಎಂದ ಸಿಂಘ್ವಿ| ಸರ್ಕಾರ ರಚಿಸಲು ಇಷ್ಟು ವಿಳಂಬ ಮಾಡಿದ್ದೇ ಬಿಜೆಪಿಗೆ ವರವಾಯಿತು ಎಂದ ಸಿಂಘ್ವಿ|
ನವದೆಹಲಿ(ನ.23): ಮಹಾರಾಷ್ಟ್ರದ ರಾಜಕೀಯ ಹೈ ಡ್ರಾಮಾ ಇಡೀ ದೇಶದ ಗಮನ ಸೆಳೆಯುತ್ತಿದ್ದು, ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೈತ್ರಿಗೂ ಮುನ್ನವೇ ಅಜಿತ್ ಪವಾರ್ ಬಿಜೆಪಿಗೆ ಬೆಂಬಲ ಘೋಷಿಸಿ ಉಪ ಮುಖ್ಯಮಂತ್ರಿಯಾಗಿದ್ದಾರೆ.
'ಮಹಾ' ರಾಜಕೀಯದಲ್ಲಿ ರೋಚಕ ತಿರುವು: 'ಸೇನೆ'ಗೆ ಶಾಕ್, ಫಡ್ನವೀಸ್ ಮತ್ತೆ ಸಿಎಂ!
undefined
ಅಜಿತ್ ಪವಾರ್ ದಿಢೀರ್ ನಡೆಯಿಂದಾಗಿ ಎನ್’ಸಿಪಿ ಹಾಗೂ ಕಾಂಗ್ರೆಸ್ ಕಕ್ಕಾಬಿಕ್ಕಿಯಾಗಿದೆ. ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿದ್ದ ಎರಡೂ ಪಕ್ಷಗಳ ನಾಯಕರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಈ ಮಧ್ಯೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಲ್ಲಿ ವಿಫಲವಾದ ಕಾಂಗ್ರೆಸ್ ವಿರುದ್ಧ ಸ್ವಪಕ್ಷೀಯ ನಾಯಕರಾದ ಅಭಿಷೇಕ್ ಸಿಂಘ್ವಿ ಕಿಡಿಕಾರಿದ್ದಾರೆ.
ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಉಚ್ಛಾಟನೆಗೊಂಡ ಅಜಿತ್ ಪವಾರ್!
ಸರ್ಕಾರ ರಚನೆಯ ಕುರಿತು ಅಂತಿಮ ನಿರ್ಣಯಕ್ಕೆ ಬರಲು ದೀರ್ಘ ಮಾತುಕತೆ ನಡೆಸಿದ್ದೇ ಅವಕಾಶ ಕೈ ತಪ್ಪಲು ಕಾರಣ ಎಂದು ಸಿಂಘ್ವಿ ಹರಿಹಾಯ್ದಿದ್ದಾರೆ.
Surreal wht I read abt . Thought it was fake news. Candidly &personally speaking, our tripartite negotiations shd not have gone on for more than 3 days...took too long. Window given was grabbed by fast movers. tussi grt ho! Amazing if true, still not sure
— Abhishek Singhvi (@DrAMSinghvi)ಈ ಕುರಿತು ಟ್ವಿಟ್ ಮಾಡಿರುವ ಸಿಂಘ್ವಿ, ಮೈತ್ರಿ ಸರ್ಕಾರ ರಚನೆಗೆ ಇಷ್ಟು ಸಮಯ ತೆಗೆದುಕೊಂಡಿದ್ದು ತಪ್ಪು ಎಂದು ಹೇಳಿದ್ದಾರೆ. ಸರ್ಕಾರ ರಚಿಸಲು ಇಷ್ಟು ವಿಳಂಬ ಮಾಡಿದ್ದೇ ಬಿಜೆಪಿಗೆ ವರವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷ, ಕುಟುಂಬ ಒಡೆದಿದೆ: ಸುಪ್ರಿಯಾ ಸುಳೆ ವಾಟ್ಸಪ್ ಸ್ಟೇಟಸ್!
ನಮ್ಮ ವಿಳಂಬ ಧೋರಣೆಯನ್ನು ದುರುಪಯೋಗಪಡಿಸಿಕೊಂಡ ಬಿಜೆಪಿ, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಿಂಘ್ವಿ ಅಸಮಾಧಾನ ಹೊರಹಾಕಿದ್ದಾರೆ.