
ನವದೆಹಲಿ (ಜ.01) ಭಾರತ ಸೇರಿದಂತೆ ಎಲ್ಲಾ ದೇಶಗಳು ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಿದೆ. ಭಾರತದಲ್ಲಿ ಬಹುತೇಕರು ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಪ್ರತಿ ದೇಶದಲ್ಲೂ ಆಯಾ ದೇಶದ ಪದ್ಧತಿ ಪರಂಪರೆಗೆ ಅನುಗುವಾದ ಕ್ಯಾಲೆಂಡರ್ ಇದ್ದರೂ ಆಂಗ್ಲರ ಗ್ರೆಗೋರಿಯನ್ ಕ್ಯಾಲೆಂಡರ್ ವಿಶ್ವವೇ ಅಂಗೀಕರಿಸಿದ ಕ್ಯಾಲೆಂಡರ್. ಭಾರತೀಯ ಪರಂಪರೆಯಲ್ಲಿ ಯುಗಾದಿ ಹೊಸ ವರ್ಷ. ಇದರ ನಡುವೆ ಬಿಜೆಪಿ ನಾಯಕ, ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ ಜನವರಿ 1ಕ್ಕೆ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಆದರೆ ತ್ರಿವೇದಿ ಶುಭಾಶಯ ಇದೀಗ ಟ್ರೆಂಡ್ ಆಗಿದೆ. ಅಷ್ಟಕ್ಕೂ ಸುಧಾಂಶು ತ್ರಿವೇದಿ ಶುಭಾಶಯ ಕೋರಿದ್ದು ಹೇಗೆ?
ಜನವರಿ 1ರ ಗ್ರೆಗೋರಿಯನ್ ಕ್ಯಾಲೆಂಡರ್‌ನ ಹೊಸ ವರ್ಷಕ್ಕೆ ಸುಧಾಂಶು ತ್ರಿವೇದಿ ಶುಭಕೋರಿದ್ದಾರೆ. ರೋಮನ್ ದೇವರು ಜೂನಸ್ ಹೆಸರಿನಲ್ಲಿ, ರೋಮನ್ ರಾಜ ನೂಮಾ ಪೊಂಫಿಲಸ್ ಪ್ರತಿಪಾದಿಸಿದ, ಜ್ಯೂಲಿಯಸ್ ಸೀಸರ್ ಆರಂಭಿಸಿದ 13ನೇ ಪೋಪ್ ಗ್ರೆಗರಿ 1582ರಲ್ಲಿ ತಿದ್ದುಪಡಿ ಮಾಡಿ ಸರಿಪಡಿಸಿದ, 1752ರಲ್ಲಿ ಬ್ರಿಟಿಷರು ಅಂಗೀಕರಿಸಿದ, ಇಂಗ್ಲೀಷ್ ಹೊಸ ವರ್ಷದ ಶುಭಾಶಯ ಎಂದು ಸುಧಾಂಶು ತ್ರಿವೇದಿ ಹೇಳಿದ್ದಾರೆ.
ಸುಧಾಂಶು ತ್ರಿವೇದಿ ಶುಭಾಶಯದ ಮೂಲಕ ಗ್ರೆಗೋರಿಯನ್ ಕ್ಯಾಲೆಂಡರ್ ಇತಿಹಾಸ ಹೇಳಿದ್ದಾರೆ. ಈ ಮೂಲಕ ಭಾರತಕ್ಕೆ ಯುಗಾದಿ ಹೊಸ ವರ್ಷ . ಸದ್ಯ ಆಚರಿಸುತ್ತಿರುವ, ಬರಮಾಡಿಕೊಂಡಿರುವ ಹೊಸ ವರ್ಷ ಬ್ರಿಟಿಷ್ ಕ್ಯಾಲೆಂಡರ್‌ನ ಹೊಸ ವರ್ಷ ಎಂದು ಇತಿಹಾಸ ಬಿಚ್ಚಿಟ್ಟಿದ್ದಾರೆ. ಆದರೆ ಸುಧಾಂಶು ತ್ರಿವೇದಿ ಈ ಸಂದೇಶ ನೀಡಿದ್ದು 2025ರ ಹೊಸ ವರ್ಷಕ್ಕೆ. ಕಳೆದ ವರ್ಷ ಭಾರಿ ಸದ್ದು ಮಾಡಿದ್ದ ಈ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ.
ಬಿಜೆಪಿ ಸೇರಿದಂತೆ ಎಲ್ಲಾ ನಾಯಕರು ಹೊಸ ವರ್ಷಕ್ಕೆ ಶುಭಾಶಯ ತಿಳಿಸಿದ್ದಾರೆ. ಹೊಸ ವರ್ಷ ಸಂಭ್ರಮ ಆಚರಿಸಿದ್ದಾರೆ. ಹಲವು ನಾಯಕರು ದೇವಸ್ಥಾನಕ್ಕೆ ತೆರಳಿ ಹೊಸ ವರ್ಷ ಆಚರಿಸಿದ್ದಾರೆ.
ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಜನರು ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್, ಕೋರಮಂಗಲದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ