ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂಗೆ ಥಳಿಸಿ ಬೆಂಕಿ ಹಚ್ಚಿದ ಗುಂಪು, ಭಾರತದಲ್ಲಿ ಕೆಕೆಆರ್ ವಿರುದ್ಧ ಆಕ್ರೋಶ

Published : Jan 01, 2026, 06:31 PM IST
Bangladesh case and KKR Buy

ಸಾರಾಂಶ

ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂಗೆ ಥಳಿಸಿ ಬೆಂಕಿ ಹಚ್ಚಿದ ಗುಂಪು, ಭಾರತದಲ್ಲಿ ಕೆಕೆಆರ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದೂ ಮೇಲೆ ದಾಳಿಯಾಗುತ್ತಿದ್ದರೆ ಇತ್ತ ಶಾರುಖ್ ಖಾನ್ ಹಾಗೂ ಕೆಕೆಆರ್ ವಿರುದ್ಧವೂ ಸ್ವಾಮೀಜಿಗಳು ಆಕ್ರೋಶ ಹೊರಹಾಕಿದ್ದೇಕೆ? 

ನವದೆಹಲಿ (ಜ.01) ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ತೀವ್ರಗೊಂಡಿದೆ. ಮೊಹಮ್ಮದ್ ಯೂನಸ್ ಹಂಗಾಮಿ ಸರ್ಕಾರದ ನೀತಿಗಳು, ಭಾರತ ವಿರೋಧಿ ಹೇಳಿಕೆಗಳು ಬಾಂಗ್ಲಾದೇಶ ಉದ್ರಿಕ್ತರನ್ನು ಮತ್ತಷ್ಟು ಕೆರಳಿಸುತ್ತಿದೆ ಅನ್ನೋ ಆರೋಪವನ್ನು ಮಾಜಿ ಪ್ರಧಾನಿ ಶೇಕ್ ಹಸೀನಾ ಮಾಡಿದ್ದಾರೆ. ಇದೀಗ ಎರಡು ವಾರದಲ್ಲಿ ನಾಲ್ಕನೇ ಹಿಂದೂ ಮೇಲೆ ದಾಳಿಯಾಗಿದೆ. ದೀಪು ಚಂದ್ರದಾಸ್ ಎಂಬ ಹಿಂದೂವಿನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಬಾಂಗ್ಲಾದೇಶ ಉದ್ರಿಕ್ತರ ಗುಂಪು ಇದೀಗ ಹಿಂದೂ ವ್ಯಾಪಾರಿ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಈ ಘಟನೆ ಭಾರತೀಯ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ಕೆಕೆಆರ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಮೆಡಿಕಲ್ ಶಾಪ್ ಮಾಲೀಕನ ಮೇಲೆ ದಾಳಿ

40 ವರ್ಷದ ಖೋಕಾನ್ ಚಂದು ಕೀರಬಂಗಬಜಾರ್‌ನಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದಾನೆ. ಡಿಸೆಂಬರ್ 31ರ ರಾತ್ರಿ 9 ಗಂಟೆಗೆ ಮೆಡಿಕಲ್ ಶಾಪ್ ಮುಚ್ಚಿದ ಚಂದು ಸ್ಕೂಟರ್ ಮೂಲಕ ಮನೆಗೆ ಮರಳುವಾಗ ಉದ್ರಿಕ್ತರ ಗುಂಪು ಚಂದು ತಡೆದು ದಾಳಿ ನಡೆಸಿದ್ದಾರೆ. ತಿಲೋಯ್ ವಲಯದಲ್ಲಿ ಈ ಘಟನೆ ನಡೆದಿದೆ. ಭಾರತ ವಿರೋಧಿ ಘೋಷಣೆ ಕೂಗುತ್ತಿದ್ದ ಗುಂಪು, ಚಂದು ತಡೆದಿದ್ದಾರೆ. ಈ ವೇಳೆ ಚಂದು ಹಿಂದೂ ಅನ್ನೋದು ಗೊತ್ತಾಗಿದೆ. ಹೀಗಾಗಿ ಚಾಕು, ತಲ್ವಾರ್ ಮೂಲಕ ಚಂದು ಮೇಲೆ ದಾಳಿ ನಡೆಸಿದ್ದಾರೆ.

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಗುಂಪು

ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಉದ್ರಿಕ್ತರ ಗುಂಪು ಪೆಟ್ರೋಲ್ ಸುರಿದು ಬೆಂಕಿ ಹಚಿದ್ದಾರೆ. ರಕ್ಷಣೆಗಾಗಿ ಕೂಗಿಕೊಂಡರು ಯಾರೂ ನೆರವಿಗೂ ಬಂದಿಲ್ಲ.ಎಲ್ಲೂರು ಉದ್ರಿಕ್ತರ ಗುಂಪು ಸೇರಿಕೊಂಡು ಘೋಷಣೆ ಕೂಗಿದ್ದಾರೆ. ಇತ್ತ ಜೀವ ಉಳಿಸಿಕೊಳ್ಳಲು ಚಂದು ಕೆಲ ದೂರದಲ್ಲಿದ್ದ ಕೆರೆಗೆ ಹಾರಿದ್ದಾನೆ. ಒಂದೆಡೆ ಮಾರಕಾಸ್ತ್ರಗಳ ದಾಳಿ, ಮತ್ತೊಂದೆಡೆ ಸುಟ್ಟ ಗಾಯಗಳಿಂದ ಚಂದು ಸ್ಥಿತಿ ಗಂಭೀರವಾಗಿತ್ತು. ಸ್ಥಳೀಯರು ಚಂದು ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ. ಇದೀಗ ಚಂದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಎರಡು ವಾರದಲ್ಲಿ ನಾಲ್ಕನೇ ಘಟನೆ

ದೀಪು ಚಂದ್ರದಾಸ್ ಹತ್ಯೆ ಬಳಿಕ ಸತತವಾಗಿ ಹಿಂದೂ ಮೇಲೆ ದಾಳಿ ಹತ್ಯೆಗಳು ನಡೆಯುತ್ತಿದೆ. ಕಳೆದ ಎರಡು ವಾರದಲ್ಲಿ 4 ಹಿಂದೂಗಳ ಮೇಲೆ ಹತ್ಯೆಯಾಗಿದೆ. ಹಲವು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಆದರೆ ಬಾಂಗ್ಲಾದೇಶ ಸರ್ಕಾರ ಇದು ಆಕಸ್ಮಿಕ ಎಂದು ನುಣುಚಿಕೊಂಡಿದೆ. 

ಶಾರುಖ್ ಖಾನ್ ವಿರುದ್ಧ ಭಾರಿ ಆಕ್ರೋಶ

ಬಾಂಗ್ಲಾದೇಶದಲ್ಲಿ ಸತತವಾಗಿ ಹಿಂದೂಗಳ ಮೇಲೆ ದಾಳಿಯಾಗುತ್ತಿದೆ. ಹಿಂದೂಗಳ ಹುಡುಕಿ ಹುಡಿಕಿ ಹತ್ಯೆ ಮಾಡತ್ತಿದ್ದಾರೆ. ಭಾರತ ವಿರೋಧಿ ಘೋಷಣೆ ಕೂಗುತ್ತಿದ್ದಾರೆ. ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರಹಮಾನ್‌ಗೆ 9.2 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಬಾಂಗ್ಲಾದೇಶದ ಬಹುತೇಕರು ಭಾರತದಲ್ಲಿ ಅಕ್ರಮವಾಗಿ ನೆಲೆಸಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ. ಇದೇ ಹಣ ಬಳಸಿ ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಕೂಗು ಹೆಚ್ಚಾಗುತ್ತಿದೆ. ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಹೀಗಿರುವಾಗ ಬಾಂಗ್ಲಾದೇಶ ಕ್ರಿಕೆಟಿಗರನ್ನು ಖರೀದಿಸುವು ಸೂಕ್ತವಲ್ಲ. ಶಾರುಖ್ ಖಾನ್ ಹಾಗೂ ಕೆಕೆಆರ್ ವಿರುದ್ದ ದೇವಿಕಾನಂದನ್ ಠಾಕೂರ್ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ. ಶಾರುಖ್ ಖಾನ್ ಭಾರತ, ಹಿಂದೂಗಳ ಪ್ರೀತಿಸುತ್ತಿದ್ದರೆ, ಬಾಂಗ್ಲಾದಲ್ಲಿ ಹಿಂದೂ ಮೇಲೆ ನಡೆಯುತ್ತಿರುವ ದಾಳಿಯಿಂದ ನೋವಾಗಿದ್ದರೆ, ತಕ್ಷಣವೇ ಮುಸ್ತಾಫಿಜುರ್ ರಹಮಾನ್ ಖರೀದಿ ರದ್ದುಗೊಳಿಸುವಂತೆ ಸೂಚಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಓಲಾ, ಉಬರ್ ಪ್ರಾಬಲ್ಯಕ್ಕೆ ಅಂತ್ಯ; ಕೇಂದ್ರ ಸರ್ಕಾರದ ಭಾರತ್ ಟ್ಯಾಕ್ಸಿ ಇಂದಿನಿಂದ ಆರಂಭ!
ಅಮೆರಿಕಾದಲ್ಲಿ ಉದ್ಯೋಗ ಅರಸುತ್ತಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿನಿಯರು ಸಾವು