ಚಾತ್ ಹಬ್ಬದ ರಜೆ ಕಡಿತಗೊಳಿಸಿದ ಸರ್ಕಾರ, ಹಿಂದೂ ವಿರೋಧಿ ನೀತಿ ವಿರುದ್ಧ ವಿಪಕ್ಷ ಕೆಂಡ!

Published : Aug 30, 2023, 06:08 PM IST
ಚಾತ್ ಹಬ್ಬದ ರಜೆ ಕಡಿತಗೊಳಿಸಿದ ಸರ್ಕಾರ, ಹಿಂದೂ ವಿರೋಧಿ ನೀತಿ ವಿರುದ್ಧ ವಿಪಕ್ಷ ಕೆಂಡ!

ಸಾರಾಂಶ

ಶಾಲೆಗಳಿಗೆ ನೀಡಿರುವ ಹಿಂದೂ ಹಬ್ಬಗಳ ರಜೆಯನ್ನು ಕಡಿತಗೊಳಿಸಲಾಗಿದೆ.  ಇದು ಹಿಂದೂ ವಿರೋಧಿ ನೀತಿ ಎಂದು ವಿಪಕ್ಷಗಳು ಕಿಡಿ ಕಾರಿದೆ. ತಕ್ಷಣವೇ ಹಿಂದೂ ಹಬ್ಬಗಳ ರಜೆ ಕಡಿತ ನಿರ್ಧಾರ ಹಿಂಪಡೆಯಬೇಕು ಎಂದು ಎಚ್ಚರಿಕೆ ನೀಡಿದೆ.

ಪಾಟ್ನಾ(ಆ.30) ಸರ್ಕಾರದ ಒಂದು ನಿರ್ಧಾರ ವಿಪಕ್ಷ ಬಿಜೆಪಿಯನ್ನು ಕೆರಳಿಸಿದೆ.  ಚಾತ್ ಹಬ್ಬ ಸೇರಿದಂತೆ ಕೆಲ ಹಿಂದೂಗಳ ಹಬ್ಬಗಳಿಗೆ ನೀಡಲಾಗಿದ್ದ ರಜೆಯನ್ನು ಬಿಹಾರದ ನಿತೀಶ್ ಕುಮಾರ್ ಸರ್ಕಾರ ಕಡಿತಗೊಳಿಸಿದೆ.  ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ಸರ್ಕಾರ ಹಿಂದೂ ವಿರೋಧಿ ನೀತಿ ತಾಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಇಷ್ಟೇ ಅಲ್ಲ ಈ ನಿರ್ಧಾರದಿಂದ ತಕ್ಷಣವೇ ಹಿಂದೆ ಸರಿಯಬೇಕು ಎಂದು ಎಚ್ಚರಿಸಿದೆ. ಸರ್ಕಾರಿ ಶಾಲೆಗಳಿಗೆ ನೀಡಿರುವ ಕೆಲ ಹಿಂದೂ ಹಬ್ಬಗಳ ರಜೆ ಕಡಿತಗೊಳಿಸಲಾಗಿದೆ.  ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ತೀವ್ರ ಜಟಾಪಟಿಗೆ ಕಾರಣವಾಗಿದೆ.

ಬಿಹಾರದಲ್ಲಿ ಚಾತ್ ಹಬ್ಬ ಪ್ರತಿ ಮನೆಯಲ್ಲಿ ಆಚರಿಸುತ್ತಾರೆ. ಕುಟುಂಬಸ್ಥರು, ಮಕ್ಕಳು ಜೊತೆ ಸಂತೋಷದಿಂದ ಈ ಹಬ್ಬ ಆಚರಿಸಲಾಗುತ್ತದೆ. ಆದರೆ ಚಾತ್ ಹಬ್ಬದ ರಜೆ ಕಡಿತ ಮಾಡಲಾಗಿದೆ. ಇದೀಗ ಮಕ್ಕಳು ಚಾತ್ ಹಬ್ಬದ ದಿನ ಶಾಲಾ ತರಗತಿ ನಡೆಯುವಂತೆ ಮಾಡಲಾಗಿದೆ. ಇದರಿಂದ ಮಕ್ಕಳು ಚಾತ್ ಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಈ ಮೂಲಕ ಮುಂದಿನ ಪೀಳಿಗೆಗೆ ಹಿಂದೂ ಹಬ್ಬಗಳು, ಸಂಸ್ಕೃತಿಗಳ ಜ್ಞಾನ ಇಲ್ಲದಂತೆ ಮಾಡಲಾಗುತ್ತಿದೆ.  ಮೇಲ್ನೋಟಕ್ಕೆ ಕೇವಲ ರಜೆ ಕಡಿತವಾಗಿದ್ದರೂ, ಒಂದು ಸಂಸ್ಕೃತಿಯನ್ನು, ಪರಂಪರೆಯನ್ನು ನಾಶ ಮಾಡುವ ಅತೀ ದೊಡ್ಡ ಹುನ್ನಾರ ಇದರ ಹಿಂದಿದೆ ಎಂದು ಬಿಹಾರ ಬಿಜೆಪಿ ನಾಯಕ, ರಾಜ್ಯ ಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.

ಹಿಂದೂ ಧರ್ಮವಿಲ್ಲ, ಎಲ್ಲ ಸಮಸ್ಯೆಗಳಿಗೆ ಬ್ರಾಹ್ಮಣವಾದ ಕಾರಣ: ಎಸ್‌ಪಿ ಮುಖಂಡ

ಚಾತ್ ಹಬ್ಬದ ಜೊತೆ ಇತರ ಕೆಲ ಹಿಂದೂ ಹಬ್ಬಗಳ ರಜೆಯನ್ನು ಕಡಿತಗೊಳಿಸಲಾಗಿದೆ. ಇದುವರೆಗೆ ಬಿಹಾರದಲ್ಲಿ ಹಿಂದೂ ಹಬ್ಬಗಳಿಗೆ ಸೆಪ್ಟೆಂಬರ್‌ನಿಂದ ಡಿಸೆಂಬರ್ ತಿಂಗಳ ವರೆಗೆ 23 ರಜೆ ನೀಡಲಾಗಿತ್ತು. ಇದೀಗ ಈ ಹಿಂದೂ ಹಬ್ಬಗಳ ರಜಾ ದಿನಗಳ ಸಂಖ್ಯೆಯನ್ನು 11ಕ್ಕೆ ಇಳಿಸಲಾಗಿದೆ. ದೀಪಾವಳಿ ರಜೆಯನ್ನು ಒಂದು ದಿನಕ್ಕೆ ಇಳಿಸಲಾಗಿದೆ.  

ಸರ್ಕಾರ ಈ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕು. ಈ ಹಿಂದೆ ಇರುವ ರಜಾ ನಿಮಯವನ್ನೇ ಪಾಲಿಸಬೇಕು ಎಂದು ಬಿಜೆಪಿ ಎಚ್ಚರಿಕೆ ನೀಡಿದೆ. ನಿತೀಶ್ ಕುಮಾರ್ ಸರ್ಕಾರ ಹಿಂದೂ ವಿರೋಧಿ ನೀತಿ ತಳೆದರೆ ಉಗ್ರ ಪ್ರತಿಭಟನೆ ಎಚ್ಚರಿಕೆಯನ್ನು ಬಿಜೆಪಿ ನೀಡಿದೆ. 

 

 

ಮುಂಬೈನಲ್ಲಿ ಇಂಡಿಯಾ ಮೈತ್ರಿ ಒಕ್ಕೂಟದ ಸಭೆಗೂ ಒಂದು ದಿನ ಮೊದಲೇ ಈ ವಿವಾದ ನಿತೀಶ್ ಕುಮಾರ್ ಸರ್ಕಾರಕ್ಕೆ ತಲೆನೋವು ತಂದಿದೆ. ನಿತೀಶ್ ಕುಮಾರ್, ತೇಜಸ್ವಿ ಯಾದವ್ ಸೇರಿದಂತೆ ಪ್ರಮುಖ ನಾಯಕರು ಇಂಡಿಯಾ ಒಕ್ಕೂಟ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಬಿಹಾರದಲ್ಲಿ ಇದೀಗ ಸರ್ಕಾರ ಹಿಂದೂ ವಿರೋಧಿ ನೀತಿ ತಾಳುತ್ತಿದೆ ಅನ್ನೋ ಕೂಗು ಹೆಚ್ಚಾಗಿದೆ.

ಚಂದ್ರನ ಹಿಂದೂ ರಾಷ್ಟ್ರ ಎಂದು ಘೋಷಿಸಿ, ಶಿವಶಕ್ತಿ ಪಾಯಿಂಟ್ ರಾಜಧಾನಿ ಮಾಡಿ, ಪ್ರಧಾನಿಗೆ ಮನವಿ!

26 ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸಂಚಾಲಕರನ್ನಾಗಿ ತಮ್ಮನ್ನು ನೇಮಿಸಲಾಗುತ್ತದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ‘ನನಗೆ ಯಾವುದೇ ವೈಯಕ್ತಿಕ ಮಹಾತ್ವಾಕಾಂಕ್ಷೆಗಳಿಲ್ಲ. ಬಿಜೆಪಿ ವಿರುದ್ಧ ಗರಿಷ್ಠ ಸಂಖ್ಯೆಯ ಪಕ್ಷಗಳನ್ನು ಸಂಘಟಿಸುವುದು ಮಾತ್ರ ನನ್ನ ಏಕೈಕ ಉದ್ದೇಶ’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು