
ನವದೆಹಲಿ(ಆ.05) ಬಾಂಗ್ಲಾದೇಶ ಪರಿಸ್ಥಿತಿ ಗಂಭೀರವಾಗಿದೆ. ಪ್ರಧಾನಿ ಶೇಖ್ ಹಸೀನಾ ದೇಶದಿಂದಲೇ ಪರಾರಿಯಾಗಿದ್ದಾರೆ. ಬಾಂಗ್ಲಾದೇಶ ಸೇನೆ ಇದೀಗ ಅಧಿಕಾರ ವಹಿಸಿಕೊಳ್ಳಲಿದೆ. ಎಲ್ಲೆಡೆ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದಿದೆ. ಸೇನೆ ಸೂಚನೆಯಂತೆ ಪ್ರಧಾನಿ ಸ್ಥಾನಕ್ಕೆ ಶೇಕ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಅತ್ತ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಿಂತಿಲ್ಲ, ಪ್ರಧಾನಿ ನಿವಾಸಕ್ಕೂ ದಾಂಗುಡಿ ಇಟ್ಟು ಎಲ್ಲವನ್ನು ಗುಡಿಸಿ ಗುಂಡಾಂತರ ಮಾಡಿದ್ದಾರೆ. ಈ ಬೆಳವಣಿಗೆ ನಡುವೆ ಯೂಟ್ಯೂಟಬರ್ ಧ್ರುವ್ ರಾಠಿಯನ್ನು ಬಿಜೆಪಿ ಟ್ರೋಲ್ ಮಾಡಿದೆ. 2024ರ ಹ್ಯಾಪಿಯೆಸ್ಟ್ ದೇಶಗಳ ಪಟ್ಟಿ ಬಿಡುಗಡೆಯಾಗಿತ್ತು. ವರದಿಯನ್ನು ಹೊಗಳಿ ವಿಡಿಯೋ ಮಾಡಿದ್ದ ಧ್ರುವ್ ರಾಠಿ, ಭಾರತಕ್ಕಿಂತ ಬಾಂಗ್ಲಾದೇಶದ ಜನರು ಹೆಚ್ಚು ಸಂತೋಷವಾಗಿದ್ದಾರೆ ಎಂದಿದ್ದರು. ಇದೀಗ ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಬಿಜೆಪಿ ನಾಯಕ, ಜೋಕರ್ ಎಂದು ಟ್ರೋಲ್ ಮಾಡಿದ್ದಾರೆ.
ಇತ್ತೀಚೆಗೆ 2024ರ ಹ್ಯಾಪಿಯೆಸ್ಟ್ ದೇಶಗಳ ಪಟ್ಟಿ ಬಿಡುಗಡೆಯಾಗಿತ್ತು. ಹಲವು ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಈ ಅಧ್ಯಯನ ನಡೆಸಲಾಗಿತ್ತು. ಈ ವರದಿ ಭಾರಿ ಕೋಲಾಹಲಕ್ಕೂ ಕಾರಣಾಗಿತ್ತು. ಕಾರಣ ಈ ವರದಿಯಲ್ಲಿ ಬಾಂಗ್ಲಾದೇಶ ಭಾರತಕ್ಕಿಂತ ಉತ್ತಮ ಸ್ಥಾನ ಪಡೆದಿತ್ತು. ಅಂದರೆ ಬಾಂಗ್ಲಾದೇಶದ ಜನರು ಭಾರತಕ್ಕಿಂತ ಹೆಚ್ಚು ಸಂತೋಷವಾಗಿದ್ದಾರೆ. ಬಾಂಗ್ಲಾದೇಶ, ಭಾರತಕ್ಕಿಂತ ಹೆಚ್ಚು ಸಂತೋಷವಾದ ದೇಶ ಎಂದು ಹೇಳಿತ್ತು. ಇದೇ ವರದಿ ಆಧಾರದಲ್ಲಿ ಧ್ರುವ್ ರಾಠಿ ವಿಡಿಯೋ ಪೋಸ್ಟ್ ಮಾಡಿದ್ದರು.
ಬಾಂಗ್ಲಾದೇಶ ಪ್ರಧಾನಿ ರಾಜೀನಾಮೆ, ಭಾರತಕ್ಕೆ ಓಡಿಬಂದ ಶೇಖ್ ಹಸೀನಾ!
ಈ ವಿಡಿಯೋದಲ್ಲಿ ಧ್ರುವ್ ರಾಠಿ, ಬಾಂಗ್ಲಾದೇಶ ಹಲವು ವಿಚಾರದಲ್ಲಿ ಭಾರತವನ್ನು ಹಿಂದಿಕ್ಕಿದೆ. ಈ ಮೂಲಕ ಬಾಂಗ್ಲಾದೇಶ ಭಾರತಕ್ಕಿಂತ ಅತೀ ಸಂತೋಷದ ದೇಶ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಎಂದಿದ್ದರು. ಈ ವಿಡಿಯೋವನ್ನು ಬಿಜೆಪಿ ನಾಯಕ ಶೆಹಜಾದ್ ಪೂನವಾಲ ಹಂಚಿಕೊಂಡಿದ್ದಾರೆ. ಬಳಿಕ ಜೋಕರ್ ಆಪ್ ದಿ ಸೆಂಚುರಿ ಎಂದು ಟ್ರೋಲ್ ಮಾಡಿದ್ದಾರೆ.
ಶೆಹಜಾದ್ ಪೂನಾವಾಲಗೆ ಧ್ರುವ್ ರಾಠಿ ತಿರುಗೇಟು ನೀಡಿದ್ದಾರೆ. ಇದು ಹಳೆ ವಿಡಿಯೋ. ಅಂದಿನ ಡೇಟಾ, ಮಾಹಿತಿ ಆಧರಿಸಿ ವಿಡಿಯೋ ಮಾಡಲಾಗಿದೆ. ಅಂದು ಬಿಡುಗಡೆಯಾಗಿದ್ದ ವರದಿಯಲ್ಲಿ ಇರುವುದನ್ನು ಹೇಳಿದ್ದೇನೆ. ಇದೀಗ ಈ ವಿಡಿಯೋ ಹಂಚಿಕೊಂಡು ಸುಳ್ಳು ಹರಡಬೇಡಿ ಎಂದು ರಾಠಿ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಧ್ರುವ್ ರಾಠಿ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ಹಳೇ ವಿಡಿಯೋ ಹಂಚಿಕೊಂಡು ಪ್ರಸ್ತುತ ಪರಿಸ್ಥಿತಿಗೆ ಹೋಲಿಗೆ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಬಾಂಗ್ಲಾದೇಶದಲ್ಲಿ ಮತ್ತೆ ಭಾರೀ ಸಂಘರ್ಷಕ್ಕೆ 98 ಜನ ಬಲಿ: ಭಾರತೀಯರಿಗೆ ಎಚ್ಚರಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ