CAB ಬೆಂಬಲಿಸಿದ್ದ ಡಾ. ಸಿಂಗ್ ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ!

By Suvarna NewsFirst Published Dec 19, 2019, 6:25 PM IST
Highlights

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್| 2003ರ ಡಾ. ಮನಮೋಹನ್ ಸಿಂಗ್ ವಿಡಿಯೋ ಬಿಡುಗಡೆ| ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ರಾಜ್ಯಸಭೆಯಲ್ಲಿ ಮಾತನಾಡಿದ್ದ ಡಾ.ಸಿಂಗ್| ವಿಡಿಯೋ ಬಿಡುಗಡೆ ಮಾಡಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿಜೆಪಿ| ಪ್ರತಿಪಕ್ಷ ನಾಯಕರಾಗಿ ಪೌರತ್ವ ತಿದ್ದುಪಡಿ ಬೆಂಬಲಿಸಿದ್ದ ಡಾ.ಸಿಂಗ್|

ನವದೆಹಲಿ(ಡಿ.19): ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ 2003ರಲ್ಲಿ ಅದರ ಪರವಾಗಿತ್ತೇ ಎಂಬ ಪ್ರಶ್ನೆ ಕಾಡುತ್ತಿದೆ. 

ಇದಕ್ಕೆ ಪುಷ್ಠಿ ಎಂಬಂತೆ 2003ರಲ್ಲಿ ರಾಜ್ಯಸಭೆಯಲ್ಲಿ ನಡೆದ ಕಲಾಪದ ವೇಳೆ, ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ತರಲು ಮನವಿ ಮಾಡಿಕೊಂಡಿದ್ದ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ.

ನಮ್ಮದೇ ಜಮೀನಲ್ಲಿ ನಾವು ಜೀತದಾಳು: ಧರ್ಮವೀರ್ ಸಂಕಟ ತರಿಸಿದ ಅಳು!

2003ರಲ್ಲಿ ಡಾ ಮನಮೋಹನ್ ಸಿಂಗ್ ರಾಜ್ಯಸಭೆಯಲ್ಲಿ ಮಾತನಾಡುತ್ತಾ, ನೆರೆಯ ದೇಶಗಳಲ್ಲಿ ಧಾರ್ಮಿಕ ಹಿಂಸೆ ಅನುಭವಿಸಿ ಭಾರತಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತರಿಗೆ ಇಲ್ಲಿನ ಪೌರತ್ವ ನೀಡುವಲ್ಲಿ ಸರ್ಕಾರ ಮುಕ್ತ ಧೋರಣೆ ತಳೆಯಬೇಕು. ಅದಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ ಹಾದಿ ಮಾಡಿಕೊಡುತ್ತದೆ ಎಂದು ಹೇಳಿರುವ ವಿಡಿಯೋ ಇದಾಗಿದೆ.

In 2003, speaking in Rajya Sabha, Dr Manmohan Singh, then Leader of Opposition, asked for a liberal approach to granting citizenship to minorities, who are facing persecution, in neighbouring countries such as Bangladesh and Pakistan. Citizenship Amendment Act does just that... pic.twitter.com/7BOJJMdkKa

— BJP (@BJP4India)

ದೇಶ ಇಬ್ಘಾಗವಾದ ನಂತರ ನೆರೆಯ ದೇಶಗಳ ಅಲ್ಪಸಂಖ್ಯಾತರು ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಅಲ್ಲಿ ಜೀವನ ನಡೆಸಲು ಸಾಧ್ಯವಾಗದೆ ನಮ್ಮ ದೇಶಕ್ಕೆ ಆಶ್ರಯ ಬಯಸಿ ಬಂದವರಿಗೆ ಇಲ್ಲಿನ ನಾಗರಿಕತ್ವ ನೀಡಬೇಕು. ಈ ವಿಷಯದಲ್ಲಿ ಮುಕ್ತ ಧೋರಣೆ ತಳೆಯಬೇಕು ಎಂದು ಡಾ. ಸಿಂಗ್ ಮನವಿ ಮಾಡಿದ್ದರು. 

ಓಡಿ ಬರುವುದು ಬಿಟ್ಟರೆ ಬೇರೇನು ಮಾರ್ಗ?: ಸೋನ್‌ದಾಸ್ ಪ್ರಕಾರ ಭಾರತವೇ ಸ್ವರ್ಗ!

ಆದರೆ ಇಂದು ಕಾಂಗ್ರೆಸ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದ್ದು, ಇದು ಆ ಪಕ್ಷದ ಇಬ್ಬಗೆ ನೀತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಕಿಡಿಕಾರಿದೆ. 

ಹೆಣ್ಣುಮಕ್ಕಳನ್ನು ಹೊತ್ತೊಯ್ದು..ಗಂಗಾರಾಮ್ ಮಾತಿಗೆ ಕಣ್ಣಂಚು ತೊಯ್ದು!

click me!