
ತಿರುವನಂತಪುರಂ[ಡಿ.19]: ಕೇರಳ ಪೊಲೀಸ್ ಅಧಿಕಾರಿ ಎಸ್ ಎಸ್ ಶ್ರೀಜಿತ್ ರವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ಪೊಲೀಸ್ ಅಧಿಕಾರಿಯನ್ನು ದಿನ ಬೆಳಗಾಗುವಷ್ಟರಲ್ಲಿ ಹೀರೋ ಆಗಿಸಿದೆ.
30 ವರ್ಷದ ಪೊಲೀಸ್ ಅಧಿಕಾರಿಯೊಬ್ಬರು, ಉಪವಾಸ ಸತ್ಯಾಗ್ರಹದಂದು ವ್ಯಕ್ತಿಯೊಬ್ಬರೊಂದಿಗೆ ತಮ್ಮ ಮಧ್ಯಾಹ್ನದ ಊಟ ಹಂಚಿ ತಿನ್ನುತ್ತಿರುವ ವಿಡಿಯೋ ಇದಾಗಿದೆ. ಸೋಮವಾರದಂದು ತಿರುವನಂತಪುರಂನಲ್ಲಿ ಉಪವಾಸ ಸತ್ಯಾಗ್ರಹ ನಡೆದಿತ್ತು. ಇದೇ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. 'ಸ್ಟೇಟ್ ಪೊಲೀಸ್ ಮೀಡಿಯಾ ಸೆಂಟರ್, ಕೇರಳ' ಈ ಫೆಸ್ಟ ಬುಕ್ ಖಾತೆಯಿಂದ ವಿಡಿಯೋ ಶೇರ್ ಮಾಡಲಾಗಿದೆ.
ಕೇರಳದ ರಾಜ್ಯ ಪೊಲೀಸ್ ನಿರ್ದೇಶಕ ಜನರಲ್ ಲೋಕನಾಥ್ ಬೆಹ್ರಾ ಇಂತಹ ಮಾನವೀಯತೆ ಮೆರೆದ ಶ್ರೀಜಿತ್ ರನ್ನು ಅಭಿನಂದಿಸಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಶ್ರೀಜಿತ್ 'ನಾನು ಊಟದ ಪ್ಯಾಕೆಟ್ ತೆರೆಯಬೇಕು ಎನ್ನುವಷ್ಟರಲ್ಲಿ ಒಬ್ಬ ವ್ಯಕ್ತಿ ನನ್ನನ್ನೇ ನೋಡುತ್ತಿರುವುದು ಗಮನಕ್ಕೆ ಬಂತು. ಅವರು ಹಸಿವಿನಿಂದಿದ್ದಾರೆಂದು ನನಗೆ ತಿಳಿಯಿತು. ನಿಮಗೆ ಹಸಿವಾಗಿದೆಯಾ ಎಂದು ಕೇಳಿದಾಗ ಹೌದು ಎಂದಿದ್ದಾರೆ. ಹೀಗಾಗಿ ನನ್ನೊಂದಿಗೆ ಊಟ ಮಾಡಲು ಹೇಳಿದೆ. ಮೊದಲು ಆತ ಹಿಂಜರಿದ ಆದರೆ ನಾನು ಒತ್ತಾಯಿಸಿದಾಗ ಊಟ ಮಾಡಿದ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ