ಡಿಮ್ಯಾಂಡ್ ಮೇಲೆ ಕಾರು ಕದ್ದೆವು: ನಡ್ಡಾ ಪತ್ನಿ ಕಾರು ಕದ್ದ ಖದೀಮರ ಬಂಧನ

By Suvarna News  |  First Published Apr 7, 2024, 11:53 AM IST

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಕಾರನ್ನೇ ಎಗರಿಸಿದ ಖದೀಮರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಅವರಿಂದ ಕಳುವಾಗಿದ್ದ ಫಾರ್ಚುನರ್ ಎಸ್‌ಯುವಿ ಗಾಡಿಯನ್ನು ವಶಕ್ಕೆ ಪಡೆಯಲಾಗಿದೆ. 


ನವದೆಹಲಿ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಕಾರನ್ನೇ ಎಗರಿಸಿದ ಖದೀಮರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಅವರಿಂದ ಕಳುವಾಗಿದ್ದ ಫಾರ್ಚುನರ್ ಎಸ್‌ಯುವಿ ಗಾಡಿಯನ್ನು ವಶಕ್ಕೆ ಪಡೆಯಲಾಗಿದೆ.  ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ಇದ್ದ ಮಲ್ಲಿಕಾ ನಡ್ಡಾ ಅವರ ಫಾರ್ಚುನರ್ ಕಾರನ್ನು ಮಾರ್ಚ್‌ 19ರಂದು ಖದೀಮರು ಹಾರಿಸಿಕೊಂಡು ಹೋಗಿದ್ದರು. ಘಟನೆಗೆ ಸಂಬಂಧಿಸಿದಂತೆ ಈಗ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯಿಂದ ಕಳವಾಗಿದ್ದ ಈ ಕಾರು ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ಪತ್ತೆಯಾಗಿದೆ. 

ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಕಾರು ಚಾಲಕನ ನಿವಾಸ ದೆಹಲಿಯ ಗೋವಿಂದಪುರಿ ಬಳಿ ಇದ್ದು, ಆತ ವಾಹನವನ್ನು  ಸರ್ವೀಸ್‌ಗೆ  ನೀಡಿ ಬಳಿ  ಮಧ್ಯಾಹ್ನದ ಊಟ ಮಾಡಲು ಮನೆಗೆ ಹೋಗಿದ್ದ ವೇಳೆ ಕಾರು ಕಳ್ಳತನವಾಗಿತ್ತು. ಬಳಿಕ ಆಥ ಕಾರು ಕಳ್ಳತನವಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ, ದೂರು ದಾಖಲಿಸಿಕೊಂಡ ಪೊಲೀಸರು ಈ ವಾಹನಕ್ಕಾಗಿ ಶೋಧ ನಡೆಸಿದ್ದರು. ಹಲವು ಸಿಸಿಟಿವಿಗಳ ಪರಿಶೀಲನೆ ಮಾಡಲಾಗಿತ್ತು. ಈ ವೇಳೆ  ಈ ಕಳುವಾಗಿದ್ದ ಎಸ್‌ಯುವಿ ಗಾಡಿ ಕೊನೆಯದಾಗಿ ಗುರುಗ್ರಾಮದತ್ತ ಹೋಗುತ್ತಿರುವುದು ಪತ್ತೆಯಾಗಿತ್ತು, ಜೊತೆಗೆ ಇದರಲ್ಲಿ ಹಿಮಾಚಲ ಪ್ರದೇಶದ ನಂಬರ್ ಪ್ಲೇಟ್ ಇತ್ತು ಎಂದು ಪೊಲೀಸರು ಹೇಳಿದ್ದಾರೆ. 

Tap to resize

Latest Videos

ರಾಜ್ಯಸಭೆಗೆ ಗುಜರಾತ್‌ನಿಂದ ಜೆಪಿ ನಡ್ಡಾ, ರಾಜಸ್ಥಾನದಿಂದ ಸೋನಿಯಾ ಗಾಂಧಿ ಅವಿರೋಧ ಆಯ್ಕೆ!

ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಬೇಡಿಕೆಯ ಮೇರೆಗೆ ಎಸ್‌ಯುವಿ ಗಾಡಿ ಕಳ್ಳತನ ಮಾಡಿದ್ದೆವು, ಆ ಗಾಡಿಯನ್ನು ನಾಗಲ್ಯಾಂಡ್‌ಗೆ ತೆಗೆದುಕೊಂಡು ಹೋಗಲು ಯೋಜನೆ ರೂಪಿಸಿದ್ದೆವು ಎಂದು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

JP Nadda: ಬೆಳಗಾವಿಯಲ್ಲಿ ಜೆ.ಪಿ.ನಡ್ಡಾ ರೌಂಡ್ಸ್ ..! ನಡ್ಡಾ ಭೇಟಿಯ ಹಿಂದಿನ ಗೇಮ್ ಪ್ಲ್ಯಾನ್ ಏನು..?

click me!