ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆಲ್ಲಲು ಸಲುವಾಗ ಅಲ್ಲ ಬದಲಾಗಿ ಭ್ರಷ್ಟರನ್ನು ಉಳಿಸಲೆಂದೇ ತರಾತುರಿಯಲ್ಲಿ ರ್‍ಯಾಲಿಗಳನ್ನು ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಅಜ್ಮೇರ್ (ಏ.07): ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆಲ್ಲಲು ಸಲುವಾಗ ಅಲ್ಲ ಬದಲಾಗಿ ಭ್ರಷ್ಟರನ್ನು ಉಳಿಸಲೆಂದೇ ತರಾತುರಿಯಲ್ಲಿ ರ್‍ಯಾಲಿಗಳನ್ನು ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಇಲ್ಲಿ ಬಿಜೆಪಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಕಾಂಗ್ರೆಸ್ ಪಕ್ಷದ ಲೂಟಿ ಅಂಗಡಿ ಮುಚ್ಚಿರುವುದರಿಂದಲೇ ವಿರೋಧ ಪಕ್ಷ ಅಂತಕದಲ್ಲಿದೆ. ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣದಿಂದ ಕೂಡಿದ್ದು, ಅದೊಂದು ಭ್ರಷ್ಟ ಪಕ್ಷವಾಗಿದೆ. ಯಾವೆಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆಯೋ ಅಲ್ಲಿ ಅಭಿವೃದ್ಧಿ ಕುಂಠತವಾಗಿದೆ.
ಬಡವರು, ದೀನ ದಲಿತರು, ಯುವಕರ ಬಗ್ಗೆ ಎಂದಿಗೂ ಚಿಂತಿಸದ ಕಾಂಗ್ರೆಸ್ ಜನರಿಂದ ಅದೆಷ್ಟೋ ಹಣವನ್ನು ಲೂಟಿ ಮಾಡಿದೆ’ ಎಂದು ಟೀಕಿಸಿದರು. ಇದೇ ವೇಳೆ ತಾವು ಮೂರನೇ ಬಾರಿ ಪ್ರಧಾನಿಯಾಗುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ, ‘ಮೊದಲ 100 ದಿನನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆ. ಅದರಲ್ಲಿ ಯಾವೊಬ್ಬ ಭ್ರಷ್ಟರನ್ನು ಬಿಡುವುದಿಲ್ಲ. ಭ್ರಷ್ಟರಿಗೆಲ್ಲರಿಗೂ ಶಿಕ್ಷೆ ಕೊಡಿಸುವುದೇ ನಮ್ಮ ಗುರಿ’ ಎಂದರು.
ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್ ಪ್ರಣಾಳಿಕೆ ರೀತಿ ಇದೆ: ಪ್ರಧಾನಿ ಮೋದಿ
ರಾಜ್ಯದ ಬೂತ್‌ಗಳಿಗೆ ಮೋದಿ +370 ಗುರಿ: ರ್ನಾಟಕದ ಪ್ರತಿ ಬೂತ್‌ಗಳಲ್ಲಿ ಕಳೆದ ಬಾರಿಗಿಂತ 370 ಮತಗಳು ಹೆಚ್ಚುವರಿಯಾಗಿ ಬಿಜೆಪಿಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರಿ ನೀಡಿದ್ದಾರೆ. ನಮೋ ಆ್ಯಪ್ ಮೂಲಕ ನಡೆದ ರಾಜ್ಯದ ಬಿಜೆಪಿಯ ಬೂತ್ ಮಟ್ಟದ ಅಧ್ಯಕ್ಷರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ಸೂಚನೆ ನೀಡಿದರು. ಒಂದೊಂದು ಮತವೂ ಮುಖ್ಯವಾದದ್ದು. ಯಾವುದೇ ಕಾರಣಕ್ಕೂ ಕೇವಲ ಒಂದು ಮತ ಎಂದು ನಿರ್ಲಕ್ಷಿಸಬೇಡಿ. ಕುಟುಂಬದ ಎಲ್ಲ ಮತದಾರರೂ ಮತದಾನ ಮಾಡುವಂತೆ ನೋಡಿಕೊಳ್ಳಿ ಎಂದು ಹೇಳಿದರು.
ಮೈಸೂರಿನ ಕಾರ್ಯಕರ್ತ ರಾಜೇಶ್, ಶಿವಮೊಗ್ಗದ ಕಾರ್ಯಕರ್ತೆ ಸರಳಾ, ಬೆಳಗಾವಿಯ ಕಾರ್ಯಕರ್ತೆ ಶ್ರುತಿ ಆಪ್ಟೇಕರ್ ಹಾಗೂ ಉಡುಪಿಯ ಕಾರ್ಯಕರ್ತ ಸುಪ್ರೀತ್ ಭಂಡಾರಿ ಅವರ ಜೊತೆ ಮೋದಿ ಅವರು ಸಂವಾದ ನಡೆಸಿ ಆ ಮೂಲಕ ರಾಜ್ಯದ ಎಲ್ಲ ಬೂತ್ ಅಧ್ಯಕ್ಷರಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಆರಂಭದಲ್ಲೇ ಜಗಜ್ಯೋತಿ ಬಸವೇಶ್ವರರ ನಾಡಾಗಿರುವ ಕರ್ನಾಟಕದ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲು ಖುಷಿ ಆಗುತ್ತಿದೆ ಎಂದು ಹೇಳಿದ ಅವರು ಕೆಂಪೇಗೌಡ, ಸರ್ ಎಂ.ವಿಶ್ವೇಶ್ವರಯ್ಯ ಹೆಸರು ಪ್ರಸ್ತಾಪ ಮಾಡಿದರು.
ಚುನಾವಣೆಗೆ ಈಗ ಸಮಯ ಕಡಮೆಯಿದೆ. ಕೆಲಸ ಜಾಸ್ತಿಯಿದೆ. ಕೆಲಸದ ಹಂಚಿಕೆ ಹೇಗೆ ಆಗುತ್ತಿದೆ? ಸಮಯ ಹೇಗೆ ಹೊಂದಿಸುತ್ತಿದ್ದೀರಿ? ಪೇಜ್ ಪ್ರಮುಖರ ಜತೆ ಸಭೆ ಮಾಡುತ್ತಿದ್ದೀರಾ? ಚುನಾವಣಾ ಪ್ರಚಾರ ಸಾಮಗ್ರಿಗಳು ತಲುಪಿವೆಯೇ? ಪ್ರತಿದಿನ ಎಷ್ಟು ಮನೆಗಳಿಗೆ ಸಂಪರ್ಕ ಮಾಡುತ್ತಿದ್ದೀರಾ? ರಾಮಮಂದಿರದ ಸ್ಥಾಪನೆ ವಿಷಯ ಎಷ್ಟರ ಪ್ರಭಾವ ಬೀರಲಿದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು. ಸಂಘಟನೆಗೆ ಹೆಚ್ಚು ಸಮಯ ನೀಡಬೇಕಿದೆ. ಮತದಾರರಿಗೆ ನಾವು ರಿಪೋರ್ಟ್ ಕಾರ್ಡ್ ನೀಡಬೇಕಾಗಿದೆ.
ಲೋಕಸಭೆಗೆ ಭರ್ಜರಿ ಪ್ರಚಾರ ಆರಂಭ: ಮೊಳಗಿದ ಕಾಂಗ್ರೆಸ್ ಪ್ರಜಾಧ್ವನಿ ರಣಕಹಳೆ
ಪೇಜ್ ಪ್ರಮುಖರ ಮೂವರ ಗುಂಪು ಮಾಡಿಕೊಂಡು ಪ್ರತಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಬೇಕು. ಅದರಲ್ಲಿ ಒಬ್ಬರು ಮಹಿಳೆ ಇರುವುದು ಕಡ್ಡಾಯ. ಒಂದೊಂದು ಮನೆಯಲ್ಲಿ ಅರ್ಧ ಗಂಟೆ ಕಾಲ ಕಳೆಯಬೇಕು. ಪ್ರಚಾರ ಒಂದು ಕಡೆಯಾದರೆ ಬಿಜೆಪಿಗೆ ಮತ ನಿಶ್ಚಿತ ಮಾಡಿಕೊಳ್ಳುವುದು ಮತ್ತೊಂದು ಕಡೆ. ನೀರು ಕುಡಿಯುತ್ತ, ಕಾಫಿ ಕುಡಿಯುತ್ತಲೇ ಜನರೊಂದಿಗೆ ಹರಟೆ ಹೊಡೆಯಬೇಕು. ಜತೆ ಜತೆಗೇ ಮತ ನಿಶ್ಚಿತ ಮಾಡಿಕೊಳ್ಳಬೇಕು ಎಂದು ಹೇಳಿದರು.