ರಾಮಮಂದಿರ ಪ್ರಾಣಪ್ರತಿಷ್ಠೆ ದಿನ ಬಾಂಬ್ ಬ್ಲಾಸ್ಟ್‌ಗೆ ಬಿಜೆಪಿ ಪ್ಲಾನ್, ವಿವಾದ ಸೃಷ್ಟಿಸಿದ ಆರ್‌ಜೆಡಿ ನಾಯಕ!

By Suvarna News  |  First Published Jan 8, 2024, 1:31 PM IST

ಜ.22ರ ರಾಮ ಮಂದಿರ ಪ್ರಾಣಪ್ರತಿಷ್ಠೆ ದಿನ ಬಿಜೆಪಿ ಬಾಂಬ್ ಬ್ಲಾಸ್ಟ್ ಮಾಡಲಿದೆ ಎಂದು ಇಂಡಿಯಾ ಮೈತ್ರಿ ಕೂಟ ಪಕ್ಷ ಆರ್‌ಜೆಡಿ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಂಬ್ ಬ್ಲಾಸ್ಟ್ ಮಾಡಿ ಆರೋಪವನ್ನು  ಪಾಕಿಸ್ತಾನ ಹಾಗೂ ಮುಸ್ಲಿಮರ ಮೇಲೆ ಹೊರಿಸಲು ಬಿಜೆಪಿ ಪ್ಲಾನ್ ಮಾಡಿದೆ ಎಂದಿದ್ದಾರೆ.
 


ಪಾಟ್ನಾ(ಜ.08) ರಾಮನ ಅಸ್ತಿತ್ವ, ರಾಮ ಮಂದಿರದ ಅವಶ್ಯಕತೆಯನ್ನು ಪ್ರಶ್ನಿಸುತ್ತಲೇ ಬಂದ ಹಲವು ಪಕ್ಷಗಳಿಗೆ ಇದೀಗ ರಾಮ ಮಂದಿರ ಉದ್ಘಾಟನೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ರಾಮ ಮಂದಿರ ಉದ್ಘಾಟನೆಗೆ ಭಂಗ ತರುವ ಪ್ರಯತ್ನಗಳು ನಡೆಯತ್ತಲೇ ಇದೆ. ಇದೀಗ ಇಂಡಿಯಾ ಮೈತ್ರಿ ಕೂಟದ ಪಕ್ಷ, ಲಾಲೂ ಪ್ರಸಾದ್ ಯಾದವ್ ಅವರ್ ಆರ್‌ಜೆಡಿ ಪಕ್ಷದ ನಾಯಕ ವಿವಾದಾತ್ಮಕ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದರೆ. ಜನವರಿ 22ರಂದು ರಾಮ ಮಂದಿರ ಪ್ರಾಣಪ್ರತಿಷ್ಠೆ ನಡೆಯಲಿದೆ. ಗಣ್ಯರು, ಲಕ್ಷಾಂತರ ರಾಮ ಭಕ್ತರು ಈ ಕ್ಷಣ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಇದೇ ದಿನ ಬಿಜೆಪಿ ಬಾಂಬ್ ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದೆ ಎಂದು ಆರ್‌ಜೆಡಿ ಶಾಸಕ ಅಜಯ್ ಯಾದವ್ ಎಚ್ಚರಿಸಿದ್ದಾರೆ. 

ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಬಿಜೆಪಿ ಭಾರಿ ಬಾಂಬ್ ಬ್ಲಾಸ್ಟ್ ಮಾಡಲಿದೆ. ಲಕ್ಷಾಂತರ ಜನರ ಮಾರಣಹೋಮಕ್ಕೆ ಸಜ್ಜಾಗಿದೆ. ಬಾಂಬ್ ಬ್ಲಾಸ್ಟ್ ಮಾಡಿದ ಬೆನ್ನಲ್ಲೇ ಬಿಜೆಪಿ ನಾಯಕರು ಇದು ಪಾಕಿಸ್ತಾನದ ಕೃತ್ಯ, ಇದು ಮುಸ್ಲಿಮರ ಕೃತ್ಯ ಎಂದು ಅಮಾಯಕರ ಮೇಲೆ ಪ್ರಕರಣ ಹೊರಿಸುವ ಎಲ್ಲಾ ಪ್ಲಾನ್ ನಡೆದಿದೆ ಎಂದು ಶಾಸಕ ಅಜಯ್ ಯಾದವ್ ಹೇಳಿದ್ದಾರೆ. 

Tap to resize

Latest Videos

212 ಪಿಲ್ಲರ್, 161 ಅಡಿ ಎತ್ತರ; ಕಬ್ಬಿಣ ಬಳಸದೆ ನಾಗರಶೈಲಿಯಲ್ಲಿ ರಾಮ ಮಂದಿರ ನಿರ್ಮಾಣ!

ಆರ್‌ಜೆಡಿ ನಾಯಕನ ಅಜಯ್ ಯಾದವ್ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬಿಹಾರದ ಅತಾರಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿರುವ ಅಜಯ್ ಯಾದವ್ ತಮ್ಮ ಬೆಂಬಲಿಗರ ಕಾರ್ಯಕ್ರಮದಲ್ಲಿ ಈ ಮಾತುಗನ್ನಾಡಿದ್ದಾರೆ. ವಿಶೇಷ ಅಂದರೆ ನೆರೆದಿದ್ದವರು ಈತನ ಮಾತುಗಳನ್ನು ಬೆಂಬಲಿಸಿದ್ದಾರೆ. ಬಿಹಾರದ ನಿರ್ಭೀತ ನಾಯಕ ಎಂದು ಹೊಗಳಿದ್ದಾರೆ.

ಇದಕ್ಕೂ ಮೊದಲು ಅಜಯ್ ಯಾದವ್, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆಯೋಧ್ಯೆ ರಾಮ ಮಂದಿರ ಕ್ರೆಡಿಟ್ ಬಿಜೆಪಿ ಪಡೆಯುತ್ತಿದೆ. ರಾಮ ಮಂದಿರದ ಲಾಭವನ್ನು ರಾಜಕೀಯವಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ. ಜನಗಳೇ ಕೇಳಿ, ರಾಮ ಮಂದಿರ ನಮ್ಮ ತೆರಿಗೆ ಹಣದಿಂದ ಕಟ್ಟಲಾಗಿದೆ. ಹೀಗಿರುವಾಗ ಬಿಜೆಪಿ ಇದರ ಕ್ರೆಡಿಟ್ ಪಡೆಯುವುದು ಎಷ್ಟು ಸರಿ ಎಂದು ಅಜಯ್ ಯಾದವ್ ಪ್ರಶ್ನಿಸಿದ್ದಾನೆ.

 

VIDEO | "They (BJP) are taking credit for building the Ram Temple (in ), which was constructed out of our income tax money," says RJD leader Ajay Yadav.

(Source: Third party) pic.twitter.com/msbhJxfNPf

— Press Trust of India (@PTI_News)

 

ಕರಸೇವಕರಿಗೆ ತೊಂದರೆ ಕೊಟ್ಟರೆ ಸುಮ್ಮನೆ ಬಿಡಲ್ಲ: ಕೆ.ಎಸ್.ಈಶ್ವರಪ್ಪ

ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ರಾಮ ಮಂದಿರ ನಿರ್ಮಾಣವಾಗಿರುವುದು ಭಕ್ತರು ನೀಡಿದ ದೇಣಿಗೆ ಹಣದಲ್ಲಿ. ಸರ್ಕಾರದ ಅಥವಾ ತೆರಿಗೆ ಹಣದಿಂದ ಅಲ್ಲ. ತೆರಿಗೆ ಹಣ ಹಜ್ ಯಾತ್ರೆಗೆ ಬಳಸಲಾಗುತ್ತಿದೆ ಎಂದು ಹಲವರು ಕಮೆಂಟ್ ಮಾಡಿದ್ದರೆ. 

click me!