
ಮುಂಬೈ(ನ.30): ಮಹಾರಾಷ್ಟ್ರದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶಿವಸೇನೆಯ ಉದ್ಧವ್ ಠಾಕ್ರೆ, ಪ್ರತಿಜ್ಞಾ ವಿಧಿ ವೇಳೆ ತಮ್ಮ ತಂದೆ-ತಾಯಿ ಹೆಸರು ಉಲ್ಲೇಖಿಸಿದ್ದನ್ನು ಬಿಜೆಪಿ ವಿರೋಧಿಸಿದೆ.
ಸಾಂವಿಧಾನಿಕ ಹುದ್ದೆ ಅಲಂಕರಿಸುವಾಗ ವೈಯಕ್ತಿಕ ಸಂಬಂಧಗಳನ್ನು ಉಲ್ಲೇಖಿಸಬಾರದು ಎಂದು ಬಿಜೆಪಿ ಹರಿಹಾಯ್ದಿದೆ. ಉದ್ಧವ್ ತಮ್ಮ ತಂದೆ-ತಾಯಿ ಹೆಸರು ಉಲ್ಲೇಖಿಸಿದ್ದು ತಪ್ಪು ಎಂದು ಹೇಳಿದೆ.
‘ಮಹಾ’ದಲ್ಲಿ ಉದ್ಧವ್ ದರ್ಬಾರ್: ಅಸ್ತಿತ್ವಕ್ಕೆ ಬಂತು ಅಘಾಡಿ ಸರ್ಕಾರ್!
ಆದರೆ ಬಿಜೆಪಿ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಉದ್ಧವ್ ಠಾಕ್ರೆ, ವ್ಯಕ್ತಿಯೋರ್ವ ತನ್ನ ಜನ್ಮಕ್ಕೆ ಕಾರಣರಾದ ತಂದೆ-ತಾಯಿಯನ್ನು ನೆನೆಯದಿದ್ದರೆ ಆತನನ್ನು ಮನುಷ್ಯ ಎಂದು ಕರೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ತಂದೆ-ತಾಯಿಯನ್ನು ನೆನೆಯುವುದು ತಪ್ಪು ಎಂದಾದರೆ ನಾನು ಈ ತಪ್ಪನ್ನು ಮತ್ತೆ ಮತ್ತೆ ಮಾಡುತ್ತೇನೆ ಎಂದು ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಪ್ರಮಾಣವಚನ ಸಮಾರಂಭದಲ್ಲಿ ತಂದೆ-ತಾಯಿಯ ಹೆಸರು ಉಲ್ಲೇಖಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.
ಉದ್ಧವ್ ಬಹುಮತ ಸಾಬೀತುಪಡಿಸಿದರು: ದಂಡು ಕಟ್ಕೊಂಡು ಫಡ್ನವೀಸ್ ಹೊರ ನಡೆದರು!
ಇಂದು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿರುವ ಉದ್ಧವ್ ಠಾಕ್ರೆ, ವಿಕಾಸ್ ಅಘಾಡಿ ಸರ್ಕಾರದ ನೊಗವನ್ನು ಅಧಿಕೃತವಾಗಿ ಹೊತ್ತುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ