ಬಿಜೆಪಿ ಸಂಸದ ಪ್ರತಾಪ್‌ ಸಾರಂಗಿಯ ತಳ್ಳಿದ ರಾಹುಲ್‌ ಗಾಂಧಿ, ಚಿಕಿತ್ಸೆ ನೀಡಿದ ಡಾ. ಸಿಎನ್‌ ಮಂಜುನಾಥ್‌!

Published : Dec 19, 2024, 11:44 AM ISTUpdated : Dec 19, 2024, 12:42 PM IST
ಬಿಜೆಪಿ ಸಂಸದ ಪ್ರತಾಪ್‌ ಸಾರಂಗಿಯ ತಳ್ಳಿದ ರಾಹುಲ್‌ ಗಾಂಧಿ, ಚಿಕಿತ್ಸೆ ನೀಡಿದ ಡಾ. ಸಿಎನ್‌ ಮಂಜುನಾಥ್‌!

ಸಾರಾಂಶ

ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಸಂಸತ್ತಿನಲ್ಲಿ ತಲೆಗೆ ಗಾಯ ಮಾಡಿಕೊಂಡಿದ್ದಾರೆ. ರಾಹುಲ್ ಗಾಂಧಿ ತಳ್ಳಿದ್ದರಿಂದ ಬಿದ್ದೆ ಎಂದು ಸಾರಂಗಿ ಆರೋಪಿಸಿದ್ದಾರೆ. ಆದರೆ, ರಾಹುಲ್ ಗಾಂಧಿ ಈ ಆರೋಪವನ್ನು ನಿರಾಕರಿಸಿದ್ದಾರೆ.

ನವದೆಹಲಿ (ಡಿ.19): ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಪ್ರತಾಪ್ ಸಾರಂಗಿ ಗಂಭೀರವಾಗಿ ತಲೆಗೆ ಗಾಯ ಮಾಡಿಕೊಂಡಿದ್ದರೆ. ರಾಹುಲ್ ಗಾಂಧಿ ತಳ್ಳಿದ್ದರಿಂದ ನಾನು ಬಿದ್ದೆ ಎಂದು ಬಿಜೆಪಿ ಸಂಸದ ಸಾರಂಗಿ ಹೇಳಿದ್ದಾರೆ. ನಾನು ಸಂಸತ್‌ ಎದುರು ನಿಂತಿದ್ದೆ. ಈ ವೇಳೆ ರಾಹುಲ್‌ ಗಾಂಧಿ ಸಂಸದರೊಬ್ಬರನ್ನು ತಳ್ಳಿದ್ದಾರೆ. ಆ ಸಂಸದ ನನ್ನ ಮೇಲೆ ಬಿದ್ದಿದ್ದರಿಂದ ನಾನು ಉರುಳಿಬಿದ್ದೆ ಎಂದು ಸಾರಂಗಿ ತಿಳಿಸಿದ್ದಾರೆ. ತಲೆಗೆ ಗಂಭೀರವಾಗಿ ಗಾಯವಾಗಿ ರಕ್ತ ಸುರಿಯಲು ಆರಂಭಿಸಿದ್ದರಿಂದ ಕರ್ನಾಟಕದ ಸಂಸದ  ಹಾಗೂ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿಎನ್‌ ಮಂಜುನಾಥ್‌ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಪ್ರತಾಪ್‌ ಸಾರಂಗಿ ಚಿಕಿತ್ಸೆ ಪಡೆಯುತ್ತಿದ್ದ ಸ್ಥಳಕ್ಕೆ ರಾಹುಲ್‌ ಗಾಂಧಿ ಬಂದರೂ, ಸಾರಂಗಿ ಅವರಿಗೆ ಏನ್‌ ಆಯ್ತು ಎಂದು ವಿಚಾರಿಸಲೂ ಕೂಡ ರಾಹುಲ್‌ ಗಾಂಧಿ ಮನಸ್ಸು ಮಾಡಿಲ್ಲ.

ಇನ್ನು ಪ್ರತಾಪ್‌ ಸಾರಂಗಿ ಆರೋಪದ ಬಗ್ಗೆ ಮಾತನಾಡಿದ ರಾಹುಲ್‌ ಗಾಂಧಿ, ಹೌದು ಈ ಘಟನೆ ನಡೆದಿದೆ. ಆದರೆ, ಪರವಾಗಿಲ್ಲ ಎಂದಿದ್ದಾರೆ. ತಳ್ಳುವುದರಿಂದ ಏನೂ ಆಗೋದಿಲ್ಲ. ನಾನು ಸಂಸತ್ತಿನ ಒಳಗೆ ಹೋಗಲು ಬಯಸಿದ್ದೆ. ಸಂಸತ್ತಿಗೆ ಹೋಗುವುದು ನನ್ನ ಹಕ್ಕು, ತಡೆಯುವ ಪ್ರಯತ್ನ ನಡೆದಿದೆ. ನಮ್ಮನ್ನು ಸಂಸತ್ತಿಗೆ ಪ್ರವೇಶಿಸದಂತೆ ತಡೆದರು. ಬಿಜೆಪಿ ಸಂಸದರು ತಳ್ಳಾಟ, ನೂಕಾಟ ನಡೆಸುತ್ತಿದ್ದರು ಎಂದು ಹೇಳಿದ್ದಾರೆ.

ಪ್ರತಾಪ್ ಸಾರಂಗಿ ಆರೋಪದ ನಂತರ ರಾಹುಲ್ ಗಾಂಧಿ, ಹೌದು, ಅದು ನಡೆದಿದೆ, ಪರವಾಗಿಲ್ಲ ಎಂದು ಹೇಳಿದ್ದಾರೆ. ತಳ್ಳುವುದು ಮತ್ತು ತಳ್ಳುವುದರಿಂದ ಏನೂ ಆಗುವುದಿಲ್ಲ. ನಾನು ಸಂಸತ್ತಿನ ಒಳಗೆ ಹೋಗಲು ಬಯಸಿದ್ದೆ. ಸಂಸತ್ತಿಗೆ ಹೋಗುವುದು ನನ್ನ ಹಕ್ಕು, ತಡೆಯುವ ಪ್ರಯತ್ನ ನಡೆದಿದೆ. ನಮ್ಮನ್ನು ಸಂಸತ್ತಿಗೆ ಪ್ರವೇಶಿಸದಂತೆ ತಡೆದರು. ಬಿಜೆಪಿ ಸಂಸದರು ತಳ್ಳಾಟ, ತಳ್ಳಾಟ ನಡೆಸುತ್ತಿದ್ದರು.

ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆಯನ್ನು ವಿರೋಧಿಸಿ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ಮತ್ತು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಇಂಡಿಯಾ ಬ್ಲಾಕ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದೆ. ಸಂಸತ್ತಿನ ಅಂಬೇಡ್ಕರ ಪ್ರತಿಮೆಯಿಂದ ಮಕರ ದ್ವಾರದವರೆಗೆ ಈ ಮೆರವಣಿಗೆ ನಡೆಸಲಾಗುತ್ತಿದೆ.

Tumkur: ಗ್ಯಾರಂಟಿ ಕೊಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರಾಜ್ಯ ಸರ್ಕಾರ; ಸಿದ್ಧಗಂಗಾ ಮಠಕ್ಕೆ ಬಂತು 70 ಲಕ್ಷದ ಕರೆಂಟ್‌ ಬಿಲ್‌!

ನೀಲಿ ಬಟ್ಟೆ ಧರಿಸಿರುವ ಇಂಡಿಯಾ ಬ್ಲಾಕ್ ಸಂಸದರು ಅಂಬೇಡ್ಕರ್ ಪ್ರತಿಮೆಯಿಂದ ಮಕರ ದ್ವಾರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಅಂಬೇಡ್ಕರ್ ಅವರನ್ನು ಗೃಹ ಸಚಿವ ಅಮಿತ್ ಶಾ ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಅವರು ಮಾಡಿರುವ ಅಪರಾಧ ಅಕ್ಷಮ್ಯ. ಇಡೀ ವ್ಯವಸ್ಥೆ ಅವರನ್ನು ಉಳಿಸಲು ಪ್ರಯತ್ನಿಸುತ್ತಿದೆ. ಗೃಹ ಸಚಿವರು ಹೇಳಿದ ಮಾತನ್ನೇ ಹೇಳುತ್ತಿದ್ದೇವೆ. ಅವರ ಮಾತನ್ನು ತಿರುಚಿಲ್ಲ. ಕ್ಷಮೆ ಕೇಳುವ ಬದಲು ಬೆದರಿಕೆ ಹಾಕುತ್ತಿದ್ದಾರೆ. ಅವರ ಬೆದರಿಕೆಗೆ ನಾವು ಹೆದರುವುದಿಲ್ಲ ಎಂದಿದ್ದಾರೆ.

EPF ಬಗ್ಗೆ ಗೊತ್ತು VPF ಬಗ್ಗೆ ಗೊತ್ತಿದ್ಯಾ? ಇದರಲ್ಲಿ ನಿಮಗೆ ಸಿಗುತ್ತೆ ಪಿಎಫ್‌ನಷ್ಟೇ ಬಡ್ಡಿ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ
ಬಿಜೆಪಿಗರ ಬಳಿ 1 ಕೋಟಿ 2 ಕೋಟಿ ಮೊತ್ತದ ದುಬಾರಿ ವಾಚ್‌ಗಳಿವೆ ಚೆಕ್ ಮಾಡಿ: ಕಾಂಗ್ರೆಸ್ ಶಾಸಕ