ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್‌ನಲ್ಲೆ ಕೇಸ್!

By Suvarna NewsFirst Published Nov 27, 2020, 12:22 PM IST
Highlights

ಪೂರ್ವಾನುಮತಿ ಇಲ್ಲದೆ ಇಲ್ಲಿನ ಒಸ್ಮಾನಿಯಾ ವಿಶ್ವವಿದ್ಯಾಲಯದ ಒಳಗೆ ಪ್ರವೇಶಿಸಿದ ಆರೋಪ|  ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ‍್ಯ ಹಾಗೂ ಬೆಂಬಲಿಗರ ವಿರುದ್ಧ ಕೇಸ್

ಹೈದರಾಬಾದ್(ನ.27)‌: ಪೂರ್ವಾನುಮತಿ ಇಲ್ಲದೆ ಇಲ್ಲಿನ ಒಸ್ಮಾನಿಯಾ ವಿಶ್ವವಿದ್ಯಾಲಯದ ಒಳಗೆ ಪ್ರವೇಶಿಸಿದ ಆರೋಪ ಸಂಬಂಧ ಕರ್ನಾಟಕದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ‍್ಯ ಹಾಗೂ ಬೆಂಬಲಿಗರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದಕ್ಷಿಣದ ಸಂಪೂರ್ಣ ಕೇಸರೀಕರಣ ಹೈದ್ರಾಬಾದ್‌ನಿಂದಲೇ ಪ್ರಾರಂಭ: ತೇಜಸ್ವಿ

ತೆಲಂಗಾಣ ಚಳವಳಿಯಲ್ಲಿ ಹುತಾತ್ಮರಾದವರಿಗೆ ನಮನ ಸಲ್ಲಿಸಲು ಸೂರ‍್ಯ ಹಾಗೂ ಅವರ ಬೆಂಬಲಿಗರು ಮಂಗಳವಾರ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಒಸ್ಮಾನಿಯಾ ಕ್ಯಾಂಪಸ್‌ ಒಳಗೆ ಪ್ರವೇಶಿಸಿದ್ದರು. ಅಲ್ಲಿ ಸಭೆಯೊಂದನ್ನು ಏರ್ಪಡಿಸಿದ್ದರು. ಈ ಸಂಬಂಧ ಹೈದರಾಬಾದ್‌ ನಗರ ಪೊಲೀಸ್‌ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಲಾಗಿದೆ.

ಇನ್ನೊಂದೆಡೆ ಪೊಲೀಸರು ತಮ್ಮನ್ನು ತಡೆದಿದ್ದಾಗಿ ತೇಜಸ್ವಿ ಸೂರ‍್ಯ ಪ್ರತಿ ಆರೋಪ ಮಾಡಿದ್ದು, ಪೊಲೀಸರು ಅದನ್ನು ಅಲ್ಲಗಳೆದಿದ್ದಾರೆ. ಈ ವಿಶ್ವವಿದ್ಯಾಲಯವು ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ಹೋರಾಟದ ಕೇಂದ್ರಬಿಂದುವಾಗಿತ್ತು.

ಹೈದರಾಬಾದ್‌ ಹೆಸರು ಬದಲಿಸಿದ ತೇಜಸ್ವಿ ಸೂರ್ಯ, ಭಾಗ್ಯನಗರ!

ಡಿಸೆಂಬರ್‌ 1ರಂದು ಹೈದರಾಬಾದ್‌ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ತೇಜಸ್ವಿ ಸೂರ‍್ಯ ಪ್ರಚಾರ ನಡೆಸುತ್ತಿದ್ದಾರೆ.

click me!