
ರಾಯ್ಪುರ (ಜು.4): ಕಳೆದ 36 ವರ್ಷಗಳಲ್ಲಿ 300ಕ್ಕೂ ಹೆಚ್ಚು ಐಷಾರಾಮಿ ಹೋಟೆಲ್‌ಗಳಲ್ಲಿ ಕೊಠಡಿ ಬಾಡಿಗೆ ಪಡೆದು ಹಣ ನೀಡದೆ ವಂಚಿಸಿದ್ದ 69 ವರ್ಷದ ವ್ಯಕ್ತಿಯನ್ನು ಛತ್ತೀಸ್‌ಗಢದ ರಾಯ್ಪುರ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಬಿಂಗ್‌ಸಾನ್ ಜಾನ್(Bingson John) ಬಂಧಿತ. ಈತ ರಾಯ್ಪರದ ಹೈಯಾತ್ ಪಂಚತಾರಾ ಹೋಟೆಲ್‌ನಲ್ಲಿ ಜೂ.25ರಂದು ಹೋಟೆಲ್ ರೂಂ ಬಾಡಿಗೆ ಪಡೆದಿದ್ದ. ಆ ಬಳಿಕ ಜೂ.27ರಂದು ಬಾಕಿಯಿದ್ದ 63,755 ರು.ಪಾವತಿಸದೇ ಅಲ್ಲಿಂದ ಕಾಲ್ಕಿತ್ತಿದ್ದ. ಹೋಟೆಲ್‌ಮ 1.48 ಲಕ್ಷ ರು. ಮೌಲ್ಯದ ಲ್ಯಾಪ್‌ಟಾಪ್ ಕೂಡ ಕದ್ದೊಯ್ದಿದ್ದ. ಈ ಸಂಬಂಧ ಹೋಟೆಲ್ ನೀಡಿದ ದೂರಿನನ್ವಯ ಪೊಲೀಸರು ಆತನನ್ನು ಭುವನೇಶ್ವರದಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನ ಹಿಸ್ಟರಿ ನೋಡಿ ದಂಗಾಗಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ಆತ, ಕುಖ್ಯಾತ ಸರಣಿ ಹಂತಕ ಹಾಗೂ ವಂಚಕ ಚಾರ್ಲ್ಸ್ ಶೋಭರಾಜ್‌ನಿಂದ ಪ್ರೇರಣೆ ಪಡೆದು ಈ ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದ್ದಾನೆ.
ವಿದೇಶಿ ಪ್ರವಾಸಿ ಗೈಡ್, ಇಂಗ್ಲಿಷ್ ಶಿಕ್ಷಕ, ಯೋಗ ಮಾರ್ಗದರ್ಶಿ ಸೋಗಿನಲ್ಲಿ ಐಷಾರಾಮಿ ಹೋಟೆಲ್‌ಗಳಿಗೆ ತೆರಳಿ ಅಲ್ಲಿನ ಸಿಬ್ಬಂದಿ ಮರಳು ಮಾಡಿ ರೂಂ ಬಾಡಿಗೆಗೆ ಪಡೆಯುತ್ತಿದ್ದ. ಬಳಿಕ ಹಣ ನೀಡದೇ ರಹಸ್ಯವಾಗಿ ಹೋಟೆಲ್‌ನಿಂದ ನಿರ್ಗಮಿಸಿ ವಂಚಿಸುತ್ತಿದ್ದ. ಆತ ಈ ರೀತಿ ಏಮಾರಿಸಿರುವುದು ಇದೇ ಮೊದಲೇನಲ್ಲ.ಈ ಹಿಂದೆಯೂ ಇದೇ ರೀತಿ ಮಾಡಿದ್ದ. 1990ರಿಂದ 10 ರಾಜ್ಯಗಳಲ್ಲಿ 300 ಹೋಟೆಲ್‌ಗಳಿಗೆ ಬಿಲ್ ನೀಡದೇ ವಂಚನೆ ಮಾಡಿದ್ದಾನೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಮಾತ್ರವಲ್ಲದೇ ಈತ ವಿವಿಧ ಅಪರಾಧ ಕೃತ್ಯಗಳ ಕಾರಣಕ್ಕೆ ತಿಹಾರ್ ಜೈಲು ಸೇರಿದಂತೆ ವಿವಿಧ ಜೈಲುಗಳಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದನು. ಅಲ್ಲಿ ಅವನಿಗೆ ಹಲವಾರು ಕುಖ್ಯಾತ ಅಪರಾಧಿಗಳೊಂದಿಗೆ ನಂಟಿತ್ತು ಎನ್ನುವುದು ತನಿಖೆ ವೇಳೆ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ