
ನವದೆಹಲಿ(ಸೆ.30): ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಲಕ್ನೋನ ವಿಶೇಷ ನ್ಯಾಯಾಲಯ ಇಂದು ಹೊರಡಿಸಿರುವ ತೀರ್ಪನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ತೀರ್ಪಿನ ಮೂಲಕ ರಾಮ ಜನ್ಮಭೂಮಿ ಚಳುವಳಿ ಸಂಬಂಧ ನನ್ನ ಹಾಗೂ ಭಾರತೀಯ ಜನತಾ ಪಕ್ಷದ ವಿಶ್ವಾಸ ಹಾಗೂ ಬದ್ಧತೆಗೆ ಜಯ ಸಿಕ್ಕಂತಾಗಿದೆ ಎಂದಿದ್ದಾರೆ.
ನ್ಯಾಯಾಂಗಕ್ಕೆ ಇದು ಕಪ್ಪು ಚುಕ್ಕೆ: ಬಾಬ್ರಿ ತೀರ್ಪಿಗೆ ಮಾಜಿ ಸಿಎಂ ಮಗನ ಪ್ರತಿಕ್ರಿಯೆ!
ಅಲ್ಲೇ ನನ್ನ ಪಕ್ಷದ ಕಾರ್ಯಕರ್ತರು, ನಾಯಕರು ಹಾಗೂ ಸಾಧು ಸಂತರು ಮತ್ತು ಅಯೋಧ್ಯೆ ಯಾತ್ರೆ ತಮ್ಮ ನಿಸ್ವಾರ್ಥ ನನಗೆ ಶಕ್ತಿ ನೀಡುತ್ತದೆ ಎಂದು ಸಕ್ರಿಯವಾಗಿ ತೊಡಗಿದ್ದ ಎಲ್ಲರಿಗೂ ನನ್ನ ಧನ್ಯವಾದಗಳು. ಇದೇ ವೇಳೆ ಕಾನೂನಾತ್ಮಕ ಹೋರಾಟದಲ್ಲಿ ನನ್ನ ಜೊತೆಗಿದ್ದ ಶ್ರೀ ಮಹಿಪಾಲ್ ಅಹ್ಲುವಾಲಿಯಾ ಹಾಗೂ ಅವರ ತಂಡದವರಿಗೂ ಧನ್ಯವಾದ. ಮಹಿಪಾಲ್, ಅವರ ಮಗ ಹಾಗೂ ಅವರ ತಂಡ ಕಳೆದ ಅನೇಕ ವರ್ಷಗಳಿಂದ ಈ ಪ್ರಕರಣ ಸಂಬಂಧ ಸೂಕ್ಷ್ಮವಾಗಿ ಅಧ್ಯಯನ ನಡೆಸಿದ್ದಾರೆ ಎಂದಿದ್ದಾರೆ. ಸದ್ಯ ನನ್ನ ದೇಶದ ಕೋಟಿಗಟ್ಟಲೇ ಜನರೊಂದಿಗೆ ಅಯೋಧ್ಯೆಯಲ್ಲಿ ತಲೆ ಎತ್ತಲಿರುವ ಭವ್ಯ ರಾಮ ಮಂದಿರದ ಸೌಂದರ್ಯ ಕಣ್ತುಂಬಿಕೊಳ್ಳಲು ಕಾಯುತ್ತಿದ್ದೇನೆ ಎಂದಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿ ಸೇರಿ ಎಲ್ಲಾ ಆರೋಪಿಗಳು ಖುಲಾಸೆ!
ಪಿತೂರಿ ನಡೆಸಿರಲಿಲ್ಲ: ಜೋಶಿ
ತೀರ್ಪಿನ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಜೆಪಿಯ ,ತ್ತೊಬ್ಬ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ 'ಇದು ನ್ಯಾಯಾಲಯದ ಐತಿಹಾಸಿಕ ತೀರ್ಪು. ಅಯೋಧ್ಯೆಯಲ್ಲಿ 1992ರ ಡಿಸೆಂಬರ್ 6ರಂದು ನಡೆದ ಘಟನೆಗೆ ಯಾವುದೇ ಪಿತೂರಿ ನಡೆಸಿರಲಿಲ್ಲ ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ. ನಮ್ಮ ಕಾರ್ಯಕ್ರಮ, ರ್ಯಾಲಿ ಯಾವುದೇ ಪಿತೂರಿಯ ಭಾಗವಾಗಿರಲಿಲ್ಲ. ಇಂದು ನ್ಯಾಯಾಲಯದ ತೀರ್ಪು ನಮಗೆ ಖುಷಿ ಕೊಟ್ಟಿದೆ. ರಾಮ ಮಂದಿರ ನಿರ್ಮಾಣದತ್ತ ನಮ್ಮ ಸಂಪೂರ್ಣ ಗಮನವನ್ನು ಇನ್ನು ಹರಿಸೋಣ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ