ಫೇಸ್‌ಬುಕ್‌ನಲ್ಲಿ ಪೋರ್ನ್‌ ವಿಡಿಯೋ ಪೋಸ್ಟ್ ಮಾಡಿದ BJP ಮುಖಂಡ

By Suvarna News  |  First Published Jul 8, 2020, 3:08 PM IST

ಫೇಸ್‌ಬುಕ್‌ನಲ್ಲಿ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ ರಾಜಸ್ಥಾನದ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ..


ಜೈಪುರ(ಜು.08): ಫೇಸ್‌ಬುಕ್‌ನಲ್ಲಿ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ ರಾಜಸ್ಥಾನದ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್‌ಸಮಂದ್ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಐಟಿ ಸೆಲ್‌ನ ಇನ್‌ಚಾರ್ಜ್ ಅಶ್ಲೀಲ ವಿಡಿಯೋವನ್ನು ಫೇಸ್‌ಬುಕ್‌ಗೆ ಪೋಸ್ಟ್ ಮಾಡಿದ್ದಾರೆ.

ರಾಜಸಮಂದ್ ಮತ್ತು ಜೈಪುರ ರಾಜಮನೆತನದ ಬಿಜೆಪಿ ಸಂಸದರ ಹೆಸರಿನಲ್ಲಿ ಟೀಮ್ ದಿಯಾ ಕುಮಾರಿ ಎನ್ನುವ ಫೇಸ್‌ಬುಕ್ ಪೇಜ್ ಕ್ರಿಯೇಟ್ ಮಾಡಿ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. ರಾಜ್‌ನಗರ ಪೊಲೀಸ್‌ ಸ್ಟೇಷನ್‌ನ ಪೊಲೀರು 9 ತಿಂಗಳ ಹಿಂದೆ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿ, ಬಿಜೆಪಿ ಮುಖಂಡನನ್ನು ವಶಕ್ಕೆ ಪಡೆದಿದ್ದಾರೆ.

Tap to resize

Latest Videos

undefined

ತುರ್ತು ಸೇವೆಗೆ ಹೋಗಬೇಕಿದ್ದ ಆಂಬುಲೆನ್ಸ್ ಹತ್ತಿ ಪೋಸ್ ಕೊಟ್ಟ ಶಾಸಕಿ..! ವಿಡಿಯೋ ವೈರಲ್

ಮೋರ್ಚಾನ ಪ್ರದೇಶದ ಗೌರವ್ ಜೋಶಿ ಫೇಸ್‌ಬುಕ್ ಪೇಜ್ ಕ್ರಿಯೇಟ್ ಮಾಡಿದ್ದ. ಇದಕ್ಕೆ 3 ಲಕ್ಷಕ್ಕೂ ಅಧಿಕ ಬೆಂಬಲಿಗರಿದ್ದರು. ಟೀಮ್ ದಿಯಾ ಕುಮಾರಿ ಎಂಬ ಪೇಜ್‌ನಲ್ಲಿ ಪೋರ್ನ್ ವಿಡಿಯೋ ಪೋಸ್ಟ್ ಆಗಿರುವ ಬಗ್ಗೆ 2019 ಸೆಪ್ಟೆಂಬರ್‌ನಲ್ಲಿ ದೂರು ದಾಖಲಿಸಲಾಗಿತ್ತು ಎಂದು ಪೊಲೀಸ್ ಪ್ರವೀಣ್ ತಿಳಿಸಿದ್ದಾರೆ.

ತನ್ನದೇ ಸೆಕ್ಸ್​ ವಿಡಿಯೋವನ್ನು ವೆಬ್​​ಸೈಟ್​ಗೆ ಅಪ್ಲೋಡ್​ ಮಾಡಿ ಸಿಕ್ಕಿಬಿದ್ದ ಪ್ರೊಫೆಸರ್

ಸಂಸದ ವಿಕಾಸ್ ಚೌಧರಿ ಅವರ ಸಹಾಯಕ ಈ ಬಗ್ಗೆ ದೂರು ದಾಖಲಿಸಿದ್ದರು. ಈ ಬಗ್ಗೆ ಸೈಬರ್ ಕ್ರೈಂ ದಾಖಲಾಗಾದ, ಸೈಬರ್ ವಿಭಾಗ ಈ ಬಗ್ಗೆ ಫೇಸ್‌ಬುಕ್ ಸ್ಪಷ್ಟನೆ ಕೇಳಿತ್ತು. ಆ ಸಂದರ್ಭ ಗೌರವ್ ಜೋಶಿ ಐಡಿಯಿಂದ ವಿಡಿಯೋ ಪೋಸ್ಟ್ ಆಗಿರುವುದು ಬಹಿರಂಗವಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಗೌರವ್‌ನ್ನು ಸಮರ್ಥಿಸಿಕೊಂಡೇ ಬಂದ ಬಿಜೆಪಿ ಎಕೌಂಟ್‌ ಹ್ಯಾಕ್ ಆಗಿತ್ತು. ಗೌರವ್‌ ಅಡ್ನಿನ್ ಆಗಿರಲಿಲ್ಲ ಎಂದು ಸಾಬೂಬು ನೀಡುತ್ತಲೇ ಇತ್ತು.

click me!