ದೇಶದಲ್ಲಿ ಪ್ರತಿ 10 ಲಕ್ಷ ಜನರಿಗೆ 14 ಮಂದಿ ಸಾವು: ವಿಶ್ವದಲ್ಲೇ ಅತಿ ಕಡಿಮೆ!

By Kannadaprabha NewsFirst Published Jul 8, 2020, 12:15 PM IST
Highlights

 ಭಾರತದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು 7 ಲಕ್ಷ| ದೇಶದಲ್ಲಿ ಪ್ರತಿ 10 ಲಕ್ಷ ಜನರಿಗೆ 14 ಮಂದಿ ಸಾವು| ವಿಶ್ವದಲ್ಲೇ ಅತಿ ಕಡಿಮೆ

ನವದೆಹಲಿ(ಜು.08): ಭಾರತದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು 7 ಲಕ್ಷ ಹಾಗೂ ಸಾವಿನ ಸಂಖ್ಯೆ 20 ಸಾವಿರ ಗಡಿ ದಾಟಿರುವ ಹೊರತಾಗಿಯೂ, 10 ಲಕ್ಷ ಜನಸಂಖ್ಯೆಗೆ ಭಾರತದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ವಿಶ್ವದಲ್ಲೇ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಇದಕ್ಕೆ ಪೂರಕವಾಗಿ ವಿಶ್ವ ಆರೋಗ್ಯ ಸಂಸ್ಥೆ ಜು.6ರಂದು ನೀಡಿರುವ ವರದಿಯನ್ನು ಸಚಿವಾಲಯ ಉಲ್ಲೇಖಿಸಿದೆ. ಅದರಂತೆ ಭಾರತದಲ್ಲಿ 10 ಲಕ್ಷ ಜನಸಂಖ್ಯೆಗೆ 505.37 ಮಂದಿ ಕೊರೋನಾಕ್ಕೆ ತುತ್ತಾಗಿದ್ದಾರೆ. ಆದರೆ, ಜಾಗತಿಕ ಸರಾಸರಿ 10 ಲಕ್ಷ ಜನಸಂಖ್ಯೆಗೆ 1,453.25ರಷ್ಟಿದೆ. ಇದೇ ವೇಳೆ ಚಿಲಿಯಲ್ಲಿ 10 ಲಕ್ಷಕ್ಕೆ 15,459.8 ಜನರಿಗೆ ಕೊರೋನಾ ಸೋಂಕು ತಗುಲಿದ್ದರೆ, ಪೆರುವಿನಲ್ಲಿ 9,070 ಜನರು ಸೋಂಕಿಗೆ ತುತ್ತಾಗಿದ್ದಾರೆ.

ಅದೇ ರೀತಿ 10 ಲಕ್ಷ ಜನಸಂಖ್ಯೆಗೆ ಕೊರೋನಾದಿಂದ ಸಂಭವಿಸುತ್ತಿರುವ ಸಾವಿನ ಪ್ರಮಾಣ ಭಾರತದಲ್ಲೇ ಕಡಿಮೆ ಇದೆ. ಭಾರತದಲ್ಲಿ 10 ಲಕ್ಷ ಜನಸಂಖ್ಯೆಗೆ 14.27 ಸಾವು ಸಂಭವಿಸುತ್ತಿದೆ. ಆದರೆ, ಜಾಗತಿಕವಾಗಿ 68.29 ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

#NewsIN100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!