
ಲಕ್ನೋ(ಮೇ.09): ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗೋಮೂತ್ರ (ಹಸುವಿನ ಮೂತ್ರ) ಸೇವಿಸುವುದರಿಂದ ಕೊರೋನವೈರಸ್ ನಿಂದ ಖಂಡಿತ ರಕ್ಷಣೆ ಪಡೆಯಬಹುದು ಎಂದಿದ್ದಾರೆ.
ಉತ್ತರ ಪ್ರದೇಶದ ಬೈರಿಯಾ ಮೂಲದ ಬಿಜೆಪಿ ಶಾಸಕ ಹಸುವಿನ ಮೂತ್ರವನ್ನು ಹೇಗೆ ಸೇವಿಸಬೇಕು ಎಂಬ ಟ್ಯುಟೋರಿಯಲ್ ವಿಡಿಯೋವನ್ನೂ ಚಿತ್ರೀಕರಿಸಿದ್ದಾರೆ. ವೀಡಿಯೊದಲ್ಲಿ ಪತಂಜಲಿಯ ಹಸುವಿನ ಮೂತ್ರದ ಬಾಟಲಿಯನ್ನು ಹಿಡಿದಿರುವ ಸಿಂಗ್, ಜನರು 50 ಮಿಲಿ ಹಸುವಿನ ಮೂತ್ರವನ್ನು ತಣ್ಣನೆಯ ನೀರಿನಲ್ಲಿ ಬೆರೆಸಿ ವೈರಸ್‌ನಿಂದ ನೈಸರ್ಗಿಕ ತಡೆ ಸಾಧಿಸಲು ಪ್ರತಿದಿನ ಅದನ್ನು ಸೇವಿಸುವಂತೆ ವಿನಂತಿಸುತ್ತಾರೆ.
ಮಾದರಿಯಾದ ಗ್ರಾಮ: 45 ವರ್ಷ ಮೇಲ್ಪಟ್ಟವರಿಗೆಲ್ಲಾ ಲಸಿಕೆ ಕೊಟ್ಟಾಯ್ತು..!
ಭಾರತದ ಎರಡನೇ ಅಲೆ ಮಧ್ಯದಲ್ಲಿ, ಸಿಂಗ್ ಅವರು ದಿನಕ್ಕೆ ಸುಮಾರು 18 ಗಂಟೆಗಳ ಕಾಲ ಸಾರ್ವಜನಿಕವಾಗಿ ಕಳೆಯುತ್ತಿದ್ದಾರೆ ಮತ್ತು ಇನ್ನೂ ಆರೋಗ್ಯಕರ ಮತ್ತು ರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಅನುಮಾನಿಸಬೇಡಿ, ವಿಜ್ಞಾನಿಗಳು ನಂಬುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಕೋವಿಡ್ -19 ನಂತಹ ಮಾರಣಾಂತಿಕ ವೈರಸ್ ಅನ್ನು ತೊಡೆದುಹಾಕಲು ಗೋಮೂತ್ರಕ್ಕೆ ಮಾತ್ರ ಶಕ್ತಿ ಇದೆ ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಸಿಂಗ್ ವೀಡಿಯೊದಲ್ಲಿ ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ