Watch Video ನಾನು ಮೋದಿ ಪರಿವಾರ ಹಾಡು ಲಾಂಚ್, 2019ರ ಇದೇ ದಿನ ಚೌಕಿದಾರ್ ಕ್ಯಾಂಪೇನ್!

Published : Mar 16, 2024, 04:59 PM ISTUpdated : Mar 16, 2024, 05:02 PM IST
Watch Video ನಾನು ಮೋದಿ ಪರಿವಾರ ಹಾಡು ಲಾಂಚ್, 2019ರ ಇದೇ ದಿನ ಚೌಕಿದಾರ್ ಕ್ಯಾಂಪೇನ್!

ಸಾರಾಂಶ

ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಇತ್ತ ಬಿಜೆಪಿ ಅಭಿಯಾನ ಚುರುಕುಗೊಂಡಿದೆ. ಮೋದಿ ಪರಿವಾರ ಪ್ರಶ್ನಿಸಿದ್ದ ವಿಪಕ್ಷಗಳ ಟೀಕೆಯನ್ನೇ ಅಸ್ತ್ರವಾಗಿಸಿಕೊಂಡ ಬಿಜೆಪಿ ಇದೀಗ ಮೇ ಮೋದಿ ಕಾ ಪರಿವಾರ್ ಹಾಡು ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಮಾರ್ಚ್ 16ರ ಇದೇ ದಿನ 2019ರಲ್ಲಿ ಮೇ ಬಿ ಚೌಕಿದಾರ್ ಕ್ಯಾಂಪೇನ್ ಆರಂಭಗೊಂಡಿತ್ತು.  

ನವದೆಹಲಿ(ಮಾ.16) ಲೋಕಸಭಾ ಚುನಾವಣೆ ಎಪ್ರಿಲ್ 19 ರಿಂದು 7 ಹಂತಗಳಲ್ಲಿ ನಡೆಯಲಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದೆ. ಇದೀಗ ಕರ್ನಾಟಕದಿಂದ ಕಲಬುರಗಿಯಿಂದ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇತ್ತ ಈ ಲೋಕಸಭಾ ಚುನಾವಣೆಗೆ ಕಳೆದ ಎರಡು ಚುನಾವಣೆಗಳಂತೆ ಟೀಕೆಯನ್ನು ಅಸ್ತ್ರವಾಗಿಸಿಕೊಂಡ ಕ್ಯಾಂಪೇನ್ ಆರಂಭಿಸಿದ್ದಾರೆ. ವಿಪಕ್ಷಗಳು ಮಾಡಿದ ಕುಟುಂಬ ಟೀಕೆಯನ್ನೇ ಪ್ರಮುಖ ಅಸ್ತ್ರವಾಗಿ ಹಿಡಿದ ಬಿಜೆಪಿ ಮೋದಿ ಕಾ ಪರಿವಾರ್ ಹ್ಯಾಶ್ ಟ್ಯಾಗ್, ಸಾಮಾಜಿಕ ಜಾಲತಾಣದಲ್ಲಿ ಸೇರಿಸುವಿಕೆ ಸೇರಿದಂತೆ ಹಲವು ಕ್ಯಾಂಪೇನ್ ಆರಂಭಿಸಿದೆ. ಇಂದು(ಮಾ.16) ಮೇ ಮೋದಿ ಕಾ ಪರಿವಾರ್ ಹಾಡು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಮೇ ಮೋದಿ ಕಾ ಪರಿವಾರ್ ಹೂಂ ಅನ್ನೋ ಈ ಹಾಡು ಇದೀಗ ಭಾರಿ ವೈರಲ್ ಆಗಿದೆ.ಈ 3 ನಿಮಿಷಗಳ ವಿಡಿಯೋದಲ್ಲಿ ಮೋದಿ ಸರ್ಕಾರದ ಸಾಧನೆಯನ್ನು ನೀಡಲಾಗಿದೆ. ನನ್ನ ಭಾರತ, ನನ್ನ ಕುಟುಂಬ ಅನ್ನೋ ಪ್ರಧಾನಿ ಮೋದಿ ಹೇಳಿಕೆಯ ಪ್ರಮುಖ ಸಾಲುಗಳನ್ನು ಈ ಹಾಡಿನಲ್ಲಿ ಉಲ್ಲೇಖಿಸಲಾಗಿದೆ. ಮೂಲಭೂತ ಸೌಕರ್ಯ ಅಭಿವೃದ್ಧಿ, ಚಂದ್ರಯಾನ ಸೇರಿದಂತೆ ಇತರ ವೈಜ್ಞಾನಿಕ ಸಾಧನೆ, ಮಹಿಳಾ ಸುರಕ್ಷತೆ, ಬಡತನ ನಿರ್ಮೂಲನೆ ಸೇರಿದಂತೆ ಹಲವು ವಿಚಾರಗಳನ್ನು ಈ ಹಾಡಿನಲ್ಲಿ ಹೇಳಲಾಗಿದೆ.

Breaking: ಲೋಕಸಭೆಗೆ ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಮತದಾನ, ಜೂನ್‌ 4 ರಂದು ಫಲಿತಾಂಶ

ಈಗಾಗಲೇ ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿನ ಹೆಸರಿನ ಬಳಿಕ ಮೋದಿ ಕಾ ಪರಿವಾರ್ ಉಲ್ಲೇಖಿಸಿ ಕ್ಯಾಂಪೇನ್ ಆರಂಭಿಸಿದ್ದರು. ಇದೀಗ ಮಾರ್ಚ್ 16ರಂದು ಮೇ ಮೋದಿ ಕಾ ಪರಿವಾರ್ ಹೂ ಹಾಡು ಲಾಂಚ್ ಮಾಡಲಾಗಿದೆ. ಇಂಡಿಯಾ ಒಕ್ಕೂಟದ ಪ್ರಮುಖ ನಾಯಕ ಲಾಲೂ ಪ್ರಸಾದ್ ಯಾದವ್ ಭಾಷಣದ ವೇಳೆ ಕುಟುಂಬ ರಾಜಕಾರಣ ಪ್ರಶ್ನಿಸುವ ಮೋದಿಗೆ ಕುಟಂಬವೇ ಇಲ್ಲ. ಕುಟುಂಬ ಇಲ್ಲದ ಮೋದಿ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಮೋದಿ, ದೇಶವೇ ನನ್ನ ಕುಟುಂಬ ಎಂದು ತಿರುಗೇಟು ನೀಡಿದ್ದರು. ಇದರ ಬಳಿಕ ಮೋದಿ ಕಾ ಪರಿವಾರ್ ಅಭಿಯಾನ ಆರಂಭಗೊಂಡಿತು. 

2019ರ ಮಾರ್ಚ್ 16ರಂದು ಬಿಜೆಪಿ ಮೇ ಭಿ ಚೌಕಿದಾರ್ ಅನ್ನೋ ಅಭಿಯಾನ ಆರಂಭಿಸಿತ್ತು. 2019ರ ಚುನಾವಣೆ ವೇಳೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಚೌಕಿದಾರ್‌ ಚೋರ್‌ ಹೈ’ (ಕಾವಲುಗಾರನೇ ಕಳ್ಳ) ಎಂದು ಮೋದಿಯನ್ನು ಟೀಕಿಸಿದ್ದರು.ಈ ವೇಳೆ ಬಿಜೆಪಿ  ‘ಮೈ ಭೀ ಚೌಕಿದಾರ್‌’ ಆಂದೋಲನ ಶುರುಮಾಡಿತ್ತು.  2014ರಲ್ಲಿ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹಾಗೂ ಕಾಂಗ್ರೆಸ್ ಇತರ ನಾಯಕರು ಚಾಯ್ ವಾಲಾ ಪ್ರಧಾನಿಯಾಗುತ್ತಾನಾ? ಎಂದು ವ್ಯಂಗ್ಯವಾಡಿತ್ತು. ಈ ವೇಳೆ ಚಾಯ್ ಪೇ ಚರ್ಚಾ ಆಂದೋಲನ ನಡೆಸಿತ್ತು.

ಆಂಧ್ರ ಪ್ರದೇಶ ಸೇರಿ 4 ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

MNREGA Row: ಕಾಂಗ್ರೆಸ್‌ಗೆ ಯಾವುದೇ ನೀತಿ ಇಲ್ಲ, ಗದ್ದಲ ಕೇವಲ ರಾಜಕೀಯ: ಶಿವರಾಜ್ ಸಿಂಗ್ ಚೌಹಾಣ್ ಕಿಡಿ
ಮಾತೃಭಾಷೆ ಮಾತನಾಡುತ್ತಿಲ್ಲ ಎಂದು 6 ವರ್ಷದ ಮಗಳನ್ನೇ ಕೊಂದ ಪಾಪಿ ತಾಯಿ