ದೇಶದ ಸಮಗ್ರತೆಗೆ ಸವಾಲೊಡ್ಡುವವರೊಂದಿಗೆಯೇ ರಾಹುಲ್ ಸ್ನೇಹ ಏಕೆ: ಬಿಜೆಪಿ ಪ್ರಶ್ನೆ

Published : May 04, 2022, 02:01 PM IST
ದೇಶದ ಸಮಗ್ರತೆಗೆ ಸವಾಲೊಡ್ಡುವವರೊಂದಿಗೆಯೇ ರಾಹುಲ್ ಸ್ನೇಹ ಏಕೆ: ಬಿಜೆಪಿ ಪ್ರಶ್ನೆ

ಸಾರಾಂಶ

ಉತ್ತರಾಖಂಡ್‌ನ ಕೆಲ ಭಾಗಗಳು ತನ್ನದೆಂದಿದ್ದ ನೇಪಾಳ ಈ ನಿಲುವನ್ನು ಶ್ಲಾಘಿಸಿದ ಸುಮ್ನಿಮಾ ಉದಾಸ್‌ ಆಕೆಯ ಮದುವೆಗೆ ಹೋದ ರಾಹುಲ್ ಗಾಂಧಿ

ನವದೆಹಲಿ: ವಿದೇಶದ ಪಬ್‌ವೊಂದರಲ್ಲಿ ರಾಹುಲ್ ಗಾಂಧಿ ಪಾರ್ಟಿ ಮಾಡುತ್ತಿರುವ ವಿಡಿಯೋ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ರಾಹುಲ್‌ ವಿರುದ್ಧ ಭಾರತೀಯ ಜನತಾ ಪಾರ್ಟಿ ಮುಗಿಬಿದ್ದಿದೆ. ಇಂದು ಈ ಬಗ್ಗೆ ಮತ್ತೆ ಟ್ವಿಟ್‌ ಮಾಡಿದ ಬಿಜೆಪಿ ಐಟಿ ಸೆಲ್‌ನ ಉಸ್ತುವಾರಿ ಅಮಿತ್ ಮಾಳವಿಯಾ ರಾಹುಲ್ ಗಾಂಧಿ ಮದುವೆಗಾಗಿ ನೇಪಾಳಕ್ಕೆ ಹೋಗಿದ್ದರು. ನೇಪಾಳಿ ರಾಜತಾಂತ್ರಿಕ ಅಧಿಕಾರಿ ಪುತ್ರಿ ಸುಮ್ನಿಮಾ ಉದಾಸ್‌ ಅವರ ವಿವಾಹದಲ್ಲಿ ಭಾಗವಹಿಸಲು ಅವರು ನೇಪಾಳಕ್ಕೆ ಹೋಗಿದ್ದರು. ಈಕೆ ಭಾರತದ ಭಾಗವಾದ ಉತ್ತರಾಖಂಡ್‌  ರಾಜ್ಯದ ಕೆಲ ಪ್ರದೇಶಗಳನ್ನು ತನ್ನದೆಂದು ಹೇಳಿಕೊಳ್ಳುತ್ತಿರುವ ನೇಪಾಳದ ನಿಲುವನ್ನು ಸದಾ ಬೆಂಬಲಿಸುತ್ತಾ ಬಂದಿದ್ದಾರೆ. ಚೀನಾದಿಂದ ನೇಪಾಳದವರೆಗೆ ರಾಹುಲ್ ಗಾಂಧಿ ಯಾವಾಗಲೂ ಭಾರತದ ಪ್ರಾದೇಶಿಕ ಸಮಗ್ರತೆಗೆ ಸವಾಲು ಹಾಕುವಂತಹವರೊಂದಿಗೆಯೇ ಏಕೆ ಸ್ನೇಹ ಬೆಳೆಸಿಕೊಂಡಿದ್ದಾರೆ ಎಂದು ಅಮಿತ್ ಮಾಳವಿಯಾ ಪ್ರಶ್ನಿಸಿದ್ದಾರೆ. 

ರಾಹುಲ್ ಗಾಂಧಿ ನೇಪಾಳದ ನೈಟ್‌ಕ್ಲಬ್‌ನಲ್ಲಿ ಇರುವ ವಿಡಿಯೋವೊಂದು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೇಳೆ ಟ್ವಿಟ್‌ ಮಾಡಿದ್ದ ಅಮಿತ್ ಮಾಳವಿಯಾ, ಮುಂಬೈ ಸಂಕಷ್ಟದಲ್ಲಿರುವಾಗ ರಾಹುಲ್ ಗಾಂಧಿ ನೈಟ್‌ಕ್ಲಬ್‌ನಲ್ಲಿದ್ದಾರೆ. ಅವರ ಪಕ್ಷ ಶೋಚನೀಯ ಸ್ಥಿತಿಯಲ್ಲಿರುವ ಸಮಯದಲ್ಲಿ ಅವರು ನೈಟ್‌ಕ್ಲಬ್‌ನಲ್ಲಿದ್ದಾರೆ. ಅವರು ಸ್ಥಿರವಾಗಿರುತ್ತಾರೆ. ಕಾಂಗ್ರೆಸ್ ತಮ್ಮ ಅಧ್ಯಕ್ಷ ಸ್ಥಾನವನ್ನು ಗಾಂಧಿ ಕುಟುಂಬದ ಹೊರಗಿನವರಿಗೆ ನೀಡಲು ನಿರಾಕರಿಸಿದ ಬೆನ್ನಲೇ ಈ ವಿಡಿಯೋ ಕೂಡ ಬಂದಿದೆ ಎಂದು ಬರೆದಿದ್ದಾರೆ.

ನಿನ್ನೆ ನೆರೆಯ ದೇಶ ನೇಪಾಳದ ನೈಟ್‌ ಕ್ಲಬ್‌ವೊಂದರಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪಾರ್ಟಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ, ಇತ್ತ  ಪ್ರಧಾನಿ ವಿದೇಶಿ ಪ್ರವಾಸವನ್ನು ಟೀಕಿಸಿದ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಿದಂತಾಗಿತ್ತು. 

ವಿದೇಶದ ನೈಟ್‌ ಕ್ಲಬ್‌ನಲ್ಲಿ ರಾಹುಲ್‌ : ಮೋದಿ ಪ್ರವಾಸ ಟೀಕಿಸಿದ ಕಾಂಗ್ರೆಸ್‌ಗೆ ಮುಜುಗರ

ಫೇಸ್‌ಬುಕ್ ಪೋಸ್ಟ್‌ವೊಂದರಲ್ಲಿ, ಭೂಪೇನ್ ಕುನ್ವರ್ ಎಂಬ ನೇಪಾಳಿ ಪ್ರಜೆ ವಿಡಿಯೋಗಳನ್ನು ಪೋಸ್ಟ್‌ ಮಾಡಿದ್ದು, ಭಾರತೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್ ಎಲ್‌ಒಡಿ (ಲಾರ್ಡ್ ಆಫ್ ದಿ ಡ್ರಿಂಕ್ಸ್) ಎಂದು ಬರೆದಿದ್ದಾರೆ. ನೇಪಾಳದ ಕಠ್ಮಂಡು ನಗರದಲ್ಲಿರುವ ಪಬ್‌ನಲ್ಲಿ ರಾಹುಲ್‌ಗಾಂಧಿ ಇರುವಿಕೆಯನ್ನು ತೋರಿಸುವ ಎರಡು ವೀಡಿಯೊಗಳನ್ನು ಅವರು ಅಪ್‌ಲೋಡ್ ಮಾಡಿದ್ದರು. ಒಂದು ವೀಡಿಯೋದಲ್ಲಿ ಕಾಂಗ್ರೆಸ್ ನಾಯಕ ತನ್ನ ಫೋನ್ ಬಳಸುತ್ತಿರುವುದು ಮತ್ತೊಂದು ವಿಡಿಯೋದಲ್ಲಿ ಮಹಿಳೆಯೊಂದಿಗೆ ಮಾತನಾಡುತ್ತಿರುವುದು ಕಂಡು ಬಂದಿದೆ. ರಾಹುಲ್ ಗಾಂಧಿ ಮಹಿಳೆಯೊಂದಿಗೆ ಸಂವಾದ ನಡೆಸುತ್ತಿರುವ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿತ್ತು.

ಪಬ್‌ನಲ್ಲಿ ರಾಹುಲ್ ಗಾಂಧಿ ಪಾರ್ಟಿ, ಜೊತೆಗಿದ್ದ ಯುವತಿ ಯಾರು? ಸದ್ದು ಮಾಡುತ್ತಿದೆ ಚೀನಾ ಸುಂದರಿಯ ಹೆಸರು!
 

ಕಠ್ಮಂಡು ಪೋಸ್ಟ್‌ನ (Kathmandu Post) ವರದಿಯ ಪ್ರಕಾರ, ರಾಹುಲ್ ಗಾಂಧಿ (Rahul Gandhi) ನೇಪಾಳಕ್ಕೆ ಸುಮ್ನಿಮಾ ಉದಾಸ್ (Sumnima Udas)ಎಂಬ ಸ್ನೇಹಿತೆಯ ವಿವಾಹದಲ್ಲಿ ಭಾಗವಹಿಸಲು ತೆರಳಿದ್ದರು. ಅವರೊಂದಿಗೆ ಇತರ 3 ಜನರು ಬಂದಿದ್ದು,ಕಠ್ಮಂಡುವಿನ ಮ್ಯಾರಿಯೆಟ್ ಹೋಟೆಲ್‌ನಲ್ಲಿ ( Marriott Hotel) ತಂಗಿದ್ದರು. ಮೇ 3 ರಂದು ಅಂದರೆ ನಿನ್ನೆ ಉದಾಸ್ ಮದುವೆ ನಡೆದಿದೆ, ಮೇ 5 ರಂದು ಹಯಾತ್ ರೀಜೆನ್ಸಿ ಹೋಟೆಲ್‌ನಲ್ಲಿ (Hyatt Regency Hotel) ಆರತಕ್ಷತೆ ನಡೆಯಲಿದೆ.

ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷವೂ ಜರ್ಮನಿ (Germany), ಡೆನ್ಮಾರ್ಕ್ (Denmark) ಮತ್ತು ಫ್ರಾನ್ಸ್‌ಗೆ (France) ಮೂರು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿತ್ತು. 'ದೇಶದಲ್ಲಿ ಬಿಕ್ಕಟ್ಟು ಇದೆ, ಆದರೆ ಸಾಹೇಬರು ವಿದೇಶದಲ್ಲಿರಲು ಇಷ್ಟಪಡುತ್ತಾರೆ' ಎಂದು ಕಾಂಗ್ರೆಸ್ ಪಕ್ಷ ಸೋಮವಾರ ರಾತ್ರಿ ಟ್ವೀಟ್ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಈಗ ಕಾಂಗ್ರೆಸ್ ನಾಯಕನೂ ವಿದೇಶದಲ್ಲಿ ಪಾರ್ಟಿಯಲ್ಲಿ ತೊಡಗಿದು ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ತಿರುಗೇಟು ನೀಡಲು ಹೊಸ ಅಸ್ತ್ರ ಸಿಕ್ಕಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!