ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಸ್ಥಾನದಲ್ಲಿ ಗೆದ್ದ ನಾಯಕರಿಗೆ ಹೈಕಮಾಂಡ್ ಸೂಚನೆ!

By Suvarna NewsFirst Published Dec 5, 2023, 5:59 PM IST
Highlights

ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಬಿಜೆಪಿ 7 ಸಂಸದರನ್ನು ಕಣಕ್ಕಿಳಿಸಿತ್ತು. ಈ ಪೈಕಿ ನಾಲ್ವರು ಗೆಲುವು ದಾಖಲಿಸಿದ್ದಾರೆ. ಇದೀಗ ಈ ನಾಯಕರಿಗೆ ತಕ್ಷಣವೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚನೆ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ದೊಡ್ಡ ಸ್ಥಾನ ನೀಡಲು ಬಿಜೆಪಿ ಸಜ್ಜಾಗಿದೆ. ಈ ಈ ನಾಲ್ವರ ಹೆಸರು ರಾಜಸ್ಥಾನ ಮುಖ್ಯಮಂತ್ರಿ ರೇಸ್‌ನಲ್ಲೂ ಕಾಣಿಸಿಕೊಂಡಿರುವುದು ಭಾರಿ ಕುತೂಹಲ ಕೆರಳಿಸಿದೆ.

ಜೈಪುರ(ಡಿ.05) ಪಂಚ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಬಿಜೆಪಿ ಹುಮ್ಮಸ್ಸು ಇಮ್ಮಡಿಗೊಳಿಸಿದೆ. ಮೂರು ರಾಜ್ಯಗಳಲ್ಲಿ ಗೆಲುವು ಹಾಗೂ 2 ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆ 2024ರ ಲೋಕಸಭಾ ಚುನಾವಣಾ ಆತ್ಮವಿಶ್ವಾಸ ಹೆಚ್ಚಿಸಿದೆ. ರಾಜಸ್ಥಾನ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ 7 ಸಂಸದರನ್ನು ಅಖಾಡಕ್ಕಿಳಿಸಿತ್ತು. ಈ ಪೈಕಿ ನಾಲ್ವರು ಗೆಲುವು ದಾಖಲಿಸಿದ್ದರೆ. ಇನ್ನುಳಿದ ಮೂವರು ಸೋಲು ಕಂಡಿದ್ದಾರೆ. ಇದೀಗ ಸಂಸದರಾಗಿ ವಿಧಾನಸಭಾ ಚುನಾವಣೆಗೆ ಗೆದ್ದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಲು ಸಜ್ಜಾಗಿದ್ದಾರೆ. ಗೆದ್ದ ನಾಲ್ಕು ನಾಯಕರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ.

ರಾಜಸಮಾಂದ್ ಸಂಸದೆ ದಿವ್ಯಾ ಕುಮಾರಿ ವಿಧಾನಸಭೆ ಚುನಾವಣೆಯಲ್ಲಿ ವಿದ್ಯಾದರ ನಗರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಇನ್ನು ಜೈಪುರ ಗ್ರಾಮಂತರ ಸಂಸಸದ ರಾಜ್ಯವರ್ಧನ ರಾಥೋರ್ ಝೋತ್ವಾರ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಅಲ್ವಾರಾ ಸಂಸದೆ ಬಾಬಾ ಬಾಲಕನಾಥ್ ಇದೀಗ ತಿಜಾರಾ ಕ್ಷೇತ್ರದಿಂದ ಗೆಲುವು ದಾಖಿಲಿಸಿದ್ದಾರೆ. ಶೇಕಡಾ 38 ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ಈ ಕ್ಷೇತ್ರದಲ್ಲಿ ಬಾಬಾ ಬಾಲಕನಾಥ್ ಗೆಲುವು ಕಂಡಿದ್ದರು. ಇನ್ನು ರಾಜ್ಯಸಭಾ ಸಂಸದ ಕಿರೋಡಿ ಲಾಲ್ ಮೀನಾ ಈ ಬಾರಿ ಸವಾಯಿ ಮಾಧೋಪುರ್ ಕ್ಷೇತ್ರದಿಂದ ಗೆಲುವು ದಾಖಲಿಸಿದ್ದಾರೆ. 

Latest Videos

ಕನುಗೋಲು ಮಾತು ಕೇಳದೆ 2 ರಾಜ್ಯ ಸೋತ ಕಾಂಗ್ರೆಸ್‌: ಕಮಲನಾಥ್‌, ಗೆಹ್ಲೋಟ್‌ರಿಂದ ನಿರ್ಲಕ್ಷ್ಯ

ಈ ನಾಲ್ವರು ನಾಯಕರು ತಕ್ಷಣವೇ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚನೆ ನೀಡಿದ್ದಾರೆ. ಈ ನಾಲ್ವರ ಪೈಕಿ ಬಾಬಾ ಬಾಲಕನಾಥ್ ಮುಖ್ಯಮಂತ್ರಿ ರೇಸ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ಬಿಜೆಪಿ ಹೈಕಮಾಂಡ್ ನಾಲ್ವರು ಸಂಸದರಿಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಜವಾಬ್ದಾರಿ ನೀಡಲು ಸಜ್ಜಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. 

ರಾಜಸ್ಥಾನದ ಸಿಎಂ ರೇಸ್‌ನಲ್ಲಿ ಬಾಬಾ ಬಾಲಕನಾಥ್ ಹೊರತುಪಡಿಸಿದರೆ ಹಲವು ಹೆಸರುಗಳು ಕೇಳಿಬರುತ್ತಿದೆ. ಈ ಪೈಕಿ ಮಾಜಿ ಸಿಎಂ ವಸುಂಧರಾ ರಾಜೇ, ದಿಯಾ ಕುಮಾರಿ, ಗಜೇಂದ್ರ ಸಿಂಗ್‌ ಶೆಖಾವತ್‌, ಸಿ.ಪಿ. ಜೋಶಿ, ಕಿರೋಡಿ ಲಾಲ್‌ ಮೀನಾ, ಅರ್ಜುನ್ ರಾಂ ಮೇಘ್ವಾಲ್‌ ಹೆಸರು ಕೇಳಿಬರುತ್ತಿವೆ.

ಬೆಂಗಳೂರಿನ ಚಿಕ್ಕಪೇಟೆ ಬಟ್ಟೆ ವ್ಯಾಪಾರಿ ಲಾಡು ಲಾಲ್‌ ಈಗ ರಾಜಸ್ಥಾನದಲ್ಲಿ ಶಾಸಕ

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಮತ್ತು ಯುವ ನಾಯಕ ಸಚಿನ್‌ ಪೈಲಟ್‌ ಆಂತರಿಕ ಕಚ್ಚಾಟ ಕಾಂಗ್ರೆಸ್‌ ಸರ್ಕಾರದ ಸೋಲನ್ನು ಖಚಿತಪಡಿಸಿದೆ. ರಾಜ್ಯದ 200 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 115ಕ್ಕೂ ಹೆಚ್ಚು ಸ್ಥಾನ ಗೆದ್ದು ಮರಳಿ ಅಧಿಕಾರಕ್ಕೆ ಬಂದಿದೆ. ಈ ಮೂಲಕ ಒಮ್ಮೆ ಗೆದ್ದ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆಲ್ಲದು ಎಂಬ 3 ದಶಕಗಳ ಸಂಪ್ರದಾಯ ಮುಂದುವರೆದಿದೆ.
 

click me!