
ನವದೆಹಲಿ(ಮಾ. 19) 'ಪ್ರಧಾನಿ ನರೇಂದ್ರ ಮೋದಿ ದೇವರ ಇನ್ನೊಂದು ಅವತಾರ... ದೇಶವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುತ್ತಿರುವ ದೇವರು ' ಹೀಗೆ ಮೋದಿಯನ್ನು ಕೊಂಡಾಡಿದ್ದು ಅರುಣಾಚಲ ಪ್ರದೇಶದ ಎಂಪಿ ತಪಿರ್ ಗಾವೋ.
ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಟೀ ಪ್ಲಾಂಟೇಶನ್ ನಲ್ಲಿ ಕೆಲಸ ಮಾಡುವವರಿಗೆ ಮೋದಿ ನೀಡಿದ ಕೊಡುಗೆಗಳನ್ನು ಉಲ್ಲೇಖಿಸಿದ ಸಂಸದ ಮೋದಿ ಭಗವಾನ್, ಮೋದಿ ಅಲ್ಲಾ..ದೇವರ ಅವತಾರ ಎಂದು ಕೊಂಡಾಡಿದರು. ಲೋಕಸಭೆ ಈ ಘಟನೆಗೆ ಸಾಕ್ಷಿಯಾಯಿತು.
ಮೋದಿಗೆ ಧನ್ಯವಾದ ಹೇಳಿದ ಯುನಿವರ್ಸ್ ಬಾಸ್
ಜಮ್ಮು ಕಾಶ್ಮೀರಕ್ಕೆ ವಿಶೇಷ ಅನುದಾನ ನೀಡಿದ್ದಕ್ಕೆ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಮೋದಿ ಅವರನ್ನು ಯುಗಪುರುಷ ಎಂದು ಕೊಂಡಾಡಿದ್ದರು.
ಭಾರತ ಇಂದು ನೂರಕ್ಕೂ ಅಧಿಕ ರಾಷ್ಟ್ರಗಳಿಗೆ ಕೊರೋನಾ ಲಸಿಕೆ ಕಳುಹಿಸಿಕೊಡುತ್ತಿದೆ ಎಂದರೆ ಅದರ ಹಿಂದೆ ಮೋದಿ ಶಕ್ತಿ ಇದೆ. ಮೋದಿ ಒಬ್ಬ ಮಾನವ ಅಲ್ಲ.. ಅವರೊಂದು ದೇವರ ಅವತಾರ.. ಇಡೀ ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ತಪಿರ್ ಹೇಳಿದರು.
ಟೀ ಪ್ಲಾಂಟೇಶನ್ ಕೆಲಸಗಾರರ ಕಲ್ಯಾಣಕ್ಕೆ ಸಾವಿರ ಕೋಟಿ ರೂ. ಮೀಸಲಿಟ್ಟಿದ್ದನ್ನು ಮತ್ತೆ ಉಲ್ಲೇಖ ಮಾಡಿದರು. ಇಂಥ ದಿಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳಲು ದೇವರಿಂದ ಮಾತ್ರ ಸಾಧ್ಯ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ