ಪ್ರಯಾಣಿಕರೇ ಗಮನಿಸಿ, ಬಿಪೊರ್‌ಜಾಯ್ ಸೈಕ್ಲೋನ್‌ನಿಂದ ಜು.14, 15ರ 20ಕ್ಕೂ ಹೆಚ್ಚು ರೈಲು ಸಂಚಾರ ರದ್ದು!

Published : Jun 13, 2023, 04:00 PM IST
ಪ್ರಯಾಣಿಕರೇ ಗಮನಿಸಿ, ಬಿಪೊರ್‌ಜಾಯ್ ಸೈಕ್ಲೋನ್‌ನಿಂದ ಜು.14, 15ರ 20ಕ್ಕೂ ಹೆಚ್ಚು ರೈಲು ಸಂಚಾರ ರದ್ದು!

ಸಾರಾಂಶ

ಬಿಪೊರ್‌ಜಾಯ್ ಚಂಡಮಾರುತ ಆತಂಕ ಹೆಚ್ಚಾಗುತ್ತಿದೆ. ಇದರ ಪರಿಣಾಮ ಕರಾವಳಿ ತೀರ ಪ್ರದೇಶದಿಂದ ಸಂಚರಿಸುವ ಹಲವು ರೈಲು ಸಂಚಾರ ರದ್ದಾಗಿದೆ. ಜೂನ್ 14 ಹಾಗೂ 15 ರಂದು ಸಂಚರಿಸಬೇಕಿದ್ದ 20ಕ್ಕೂ ಹೆಚ್ಚು ರೈಲು ಪ್ರಯಾಣವನ್ನು ರದ್ದು ಮಾಡಲಾಗಿದೆ.   

ಮುಂಬೈ(ಜೂ.13): ಪ್ರಯಾಣಿಕರೇ ದಯವಿಟ್ಟು ಗಮನಿಸಿ, ಬಿಪೊರ್‌ಜಾಯ್ ಚಂಡಮಾರುತದ ಪರಿಣಾಮ ಜೂನ್ 14 ಹಾಗೂ 15 ರಂದುು ಪಶ್ಚಿಮ ರೈಲ್ವೇ 20ಕ್ಕೂ ಹೆಚ್ಚು ರೈಲು ಸಂಚಾರ ರದ್ದಾಗಿದೆ. ಪ್ರಯಾಣಿಕರು ಸಹಕರಿಸಬೇಕಾಗಿ ವಿನಂತಿ. ಹೌದು, ಜೂನ್ 14 ರಿಂದ ಬಿಪೊರ್‌ಜಾಯ್ ಚಂಡಮಾರುತ ಭಾರತದ ತೀರ ಪ್ರದೇಶಕ್ಕೆ ಅಪ್ಪಳಿಸಲಿದೆ. ಜೂನ್ 14 ರಿಂದ 16ರ ವರೆಗೆ ಭಾರತದಲ್ಲಿ ಬಿಪೊರ್‌ಜಾಯ್ ಚಂಡಮಾರುತ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಜೂನ್ 14 ಹಾಗೂ 15ರಂದು ಸಂಚರಿಸಬೇಕಿದ್ದ 20ಕ್ಕೂ ಹೆಚ್ಚು ರೈಲು ರದ್ದಾಗಿದೆ. ಗುಜರಾತ್ ಹಾಗೂ ಮುಂಬೈನಿಂದ ಸಂಚರಿಸಬೇಕಿದ್ದ ರೈಲುಗಳನ್ನು ಮುಂಜಾಗ್ರತಾ ಕ್ರಮವಾಗಿ ಪಶ್ಚಿಮ ರೈಲ್ವೇ ರದ್ದು ಮಾಡಿದೆ.

ದಾದರ್-ಸೂರತ್ ಎಕ್ಸ್‌ಪ್ರೆಸ್, ಮುಂಬೈ-ಅಹಮ್ಮಾದಾಬಾದ್ ಎಕ್ಸ್‌ಪ್ರೆಸ್, ಮುಂಬೈ-ಗಾಂಧಿ ಧಾಮ ಎಕ್ಸ್‌ಪ್ರೆಸ್ ಸೇರಿದಂತೆ 20ಕ್ಕೂ ಹೆಚ್ಚು ರೈಲು ಸಂಚಾರವನ್ನು ರದ್ದು ಮಾಡಲಾಗಿದೆ. ಸಂಚಾರ ರದ್ದು ಮಾಡಿರುವ ರೈಲುಗಳಲ್ಲಿ ಟಿಕೆಟ್ ಬುಕಿಂಗ್ ಮಾಡಿರುವ ಪ್ರಯಾಣಿಕರು ರೈಲ್ವೇ ಕೇಂದ್ರ ಸಂಪರ್ಕಿಸಲು ಕೋರಲಾಗಿದೆ. ಟಿಕೆಟ್ ಮರುಪಾವತಿ ಸೇರಿದಂತೆ, ಬೇರೆ ದಿನಾಂಕದಲ್ಲಿ ಟಿಕೆಟ್ ರಿಸರ್ವೇಶನ್ ಸೇರಿದಂತೆ ಇತರ ಪ್ರಕ್ರಿಯೆಗೆ ರೈಲ್ವೇ ಕೇಂದ್ರ ಸಂಪರ್ಕಿಸಲು ಸೂಚಿಸಲಾಗಿದೆ.

Biporjoy Cyclone:ಗುಜರಾತ್‌ನಲ್ಲಿ ಬಿಪರ್‌ಜಾಯ್‌ ಅಬ್ಬರ: ಹೈ ಅಲರ್ಟ್‌ ಘೋಷಣೆ..ಮೂವರು ಬಲಿ

ವರಾವಲ್-ಪೋರಬಂದರ್ ಸೆಕ್ಷನ್, ಒಖಾ-ದ್ವಾರಾಕ ಸೆಕ್ಷನ್ ಹಾಗೂ ಗಾಂಧಿ ಧಾಮ್-ಭುಜ್ ಸೆಕ್ಷನ್ ನಡುವಿನ ರೈಲುಗಳನ್ನು ರದ್ದುಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈ ರೈಲು ಸೆಕ್ಷನ್‌ ರೈಲುಗಳನ್ನು ರದ್ದು ಪಡಿಸಲಾಗಿದೆ. ಗುಜರಾತ್ ತೀರ ಪ್ರದೇಶಕ್ಕೆ ಜೂನ್ 14 ಅಥವಾ 15 ಕ್ಕೆ ಅಪ್ಪಳಿಸಲಿದೆ. ಭಾರಿ ಮಳೆ ಹಾಗೂ ಗಾಳಿ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಅತಿ ತೀವ್ರ ಸ್ವರೂ​ಪದ ಚಂಡಮಾ​ರು​ತ’​ವಾಗಿ ಪರಿವರ್ತ​ನೆಗೊಂಡಿ​ರುವ ‘ಬಿ​ಪೊ​ರ್‌ಜೊಯ್‌’ ಚಂಡ​ಮಾ​ರುತ, ಗುಜ​ರಾತ್‌ನ ಕಛ್‌ ಜಿಲ್ಲೆಯ ಜಖಾವು ಬಂದ​ರಿಗೆ ಜೂ.14ರಂದು ಅಪ್ಪ​ಳಿ​ಸುವ ಸಾಧ್ಯತೆ ಇದೆ. ಚಂಡ​ಮಾ​ರು​ತವು ಗಂಟೆಗೆ 150 ಕಿ.ಮೀ. ವೇಗದ ಬಿರು​ಗಾ​ಳಿ​ಯೊಂದಿಗೆ ಬೀಸುವ ಸಾಧ್ಯತೆ ಇದ್ದು, ಭಾರಿ ವಿನಾಶ ಸೃಷ್ಟಿ​ಸುವ ಭೀತಿ ಎದು​ರಾ​ಗಿದೆ.

150 ಕಿ.ಮೀ ವೇಗದಲ್ಲಿ ಬಿ​ಪೊ​ರ್‌​ಜೊಯ್‌ ದಾಳಿ : ತೈಲ ಬಾವಿಯಲ್ಲಿ ಕೆಲಸ ಮಾಡುತ್ತಿದ್ದ 11 ಜನರ ಏರ್‌ಲಿಫ್ಟ್‌

ಸಂಭಾವ್ಯ ಅನಾ​ಹುತ ತಪ್ಪಿ​ಸುವ ಉದ್ದೇ​ಶ​ದಿಂದ ಕಛ್‌, ಪೋರ​ಬಂದರ್‌, ದೇವ​ಭೂಮಿ ದ್ವಾರಕಾ, ಜುನಾ​ಗಢ ಹಾಗೂ ಮೋರ್ಬಿ​ ಕರಾ​ವ​ಳಿಯಲ್ಲಿ ಅಪಾ​ಯದ ವಲ​ಯ​ದ​ಲ್ಲಿ​ರುವ ಜನರ ತೆರವು ಕಾರ್ಯಾ​ಚ​ರಣೆ ಆರಂಭ​ವಾ​ಗಿದೆ. ಸೋಮ​ವಾರ ಸುಮಾರು 7500 ಜನ​ರನ್ನು ಸುರ​ಕ್ಷಿತ ಸ್ಥಳಕ್ಕೆ ಸ್ಥಳಾಂತ​ರಿ​ಸ​ಲಾ​ಗಿದೆ. ಇನ್ನು ಸಮು​ದ್ರ​ದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಅಪಾ​ಯದ ವಲ​ಯ​ವನ್ನು ಗುರುತಿಸ​ಲಾ​ಗಿದ್ದು, ಶೀಘ್ರ ಇನ್ನೂ 23 ಸಾವಿರ ಮಂದಿ​ಯನ್ನು ಸ್ಥಳಾಂತ​ರಿ​ಸ​ಲಾ​ಗು​ತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಪಿಪಾ​ವಾವ್‌ ಬಂದ​ರಿನ ಕೆಲ​ಸ​ವನ್ನು ಸ್ಥಗಿ​ತ​ಗೊ​ಳಿ​ಸ​ಲಾ​ಗಿ​ದೆ. ಇನ್ನು ದೇಶದ 2 ಮುಖ್ಯ ಬಂದ​ರು​ಗ​ಳಾದ ಕಾಂಡ್ಲಾ ಹಾಗೂ ಮುಂದ್ರಾ ಬಂದ​ರು​ಗಳ ಗುಜ​ರಾತ್‌ ಕರಾ​ವ​ಳಿ​ಯಲ್ಲೇ ಇದ್ದು, ಅಲ್ಲೂ ಮುಂಜಾ​ಗ್ರತೆ ವಹಿ​ಸ​ಲಾ​ಗಿ​ದೆ. ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವ​ಹಣಾ ಪಡೆಗಳ 19 ತಂಡ​ಗಳು (7 ಎ​ನ್‌​ಡಿ​ಆ​ರ್‌​ಎ​ಫ್‌ ಹಾಗೂ 12 ಎಸ್‌ಡಿಆರ್‌​ಎ​ಫ್‌ ತಂಡ​ಗ​ಳು) ಸನ್ನದ್ಧ ಸ್ಥಿತಿ​ಯ​ಲ್ಲಿವೆ. ಸೇನೆ, ನೌಕಾ​ಪಡೆ ಹಾಗೂ ಕರಾ​ವಳಿ ಪಡೆ​ಗಳ ಜತೆಗೂ ಗುಜ​ರಾತ್‌ ಸರ್ಕಾರ ಸಂಪ​ರ್ಕ​ದ​ಲ್ಲಿದ್ದು, ತೀರಾ ಆಪಾ​ಯದ ಸ್ಥಿತಿ ಸೃಷ್ಟಿಯಾ​ದರೆ ನೆರ​ವಿಗೆ ಬರು​ವಂತೆ ಕೋರ​ಲಾ​ಗಿ​ದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಜೆಪಿ ಸಂಘಟನಾ ಶಕ್ತಿ ಮೆಚ್ಚಿ ದಿಗ್ವಿಜಯ್ ಸಿಂಗ್ ಪೋಸ್ಟ್; ವಿವಾದ ತಾರಕಕ್ಕೇರುತ್ತಿದ್ದಂತೆ ಹಿರಿಯ ನಾಯಕನ ಸ್ಪಷ್ಟನೆ!
RSS ಶತಮಾನೋತ್ಸವದ ಸಂಚಲನ: ಸಂಘಟನಾ ರಚನೆಯಲ್ಲಿ ಅಮೂಲಾಗ್ರ ಬದಲಾವಣೆ? ಇತಿಹಾಸ ಸೇರಲಿದ್ದಾರೆ ಪ್ರಾಂತೀಯ ಪ್ರಚಾರಕರು?