
ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದದ ಈ ಒಂದು ಆಘಾತಕಾರಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುವ ವ್ಯಕ್ತಿಯೊಬ್ಬ, ತನ್ನ ಹೆಂಡತಿಗೆ ಶಿಕ್ಷಣ ಕೊಡಿಸಿ ಅವಳನ್ನು ನೌಕರಳನ್ನಾಗಿ ಮಾಡಿದ ಬಳಿಕ ಪತ್ನಿಯಿಂದಲೇ ಮೋಸಕ್ಕೆ ಒಳಗಾದ ಘಟನೆ ಎಲ್ಲರನ್ನು ಬೆಚ್ಚಿಬಿಳಿಸಿದೆ.
ದಿನಗೂಲಿ ನೌಕರಾಗಿ ದುಡಿಯುತ್ತಿದ್ದ ಪತಿಯ ತ್ಯಾಗ, ಪರಿಶ್ರಮದಿಂದ ಪತ್ನಿಗೆ ಶಿಕ್ಷಣ ದೊರೆತು ಅಗ್ನಿಶಾಮಕ ದಳದಲ್ಲಿ ಉದ್ಯೋಗವೂ ಸಿಕ್ಕಿತು. ಆದರೆ, ಈ ಯಶಸ್ಸು ಪಡೆದ ಬಳಿಕ ಅದೇ ಪತ್ನಿ ಅಪರಿಚಿತ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವನ್ನು ಪ್ರಾರಂಭಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ವಿಷಯ ಇಷ್ಟಕ್ಕೇ ನಿಲ್ಲದೆ, ಗಂಡ ಇಬ್ಬರನ್ನೂ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾನೆ!
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ, ಗಂಡ ಇಲ್ಲದ ಸಮಯದಲ್ಲಿ ಪತ್ನಿ ಪರಪುರುಷನೊಂದಿಗೆ ಮಂಚದ ಮೇಲೆ ಇದ್ದಾಳೆ. ಗಂಡ ಮನೆಗೆ ಬಂದ ತಕ್ಷಣ ಪತ್ನಿ ತಡವರಿಸುತ್ತಾ ತನ್ನ ಸಮವಸ್ತ್ರವನ್ನು ಧರಿಸಿದ್ದಾಳೆ. ಹಾಗೆ ತನ್ನ ಪ್ರಿಯಕರನನ್ನು ಮಂಚದ ಕೆಳಗೆ ಮಲಗಿಸಿ ಗಂಡನಿಗೆ ಮೋಸ ಮಾಡಲು ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಜನರಲ್ಲಿ ಆಕ್ರೋಶವನ್ನೂ ಹುಟ್ಟಿಸಿದೆ.
ನಿಮಗೆ ಯಾರಾದರೂ ಇಷ್ಟವಾದರೆ ಅಥವಾ ಯಾವುದೇ ಸಂಬಂಧದಲ್ಲಿ ಸಮಸ್ಯೆ ಇದ್ದರೆ, ಮೊದಲು ಮದುವೆಯನ್ನು ಕಾನೂನುಬದ್ಧವಾಗಿ ಕೊನೆಗೊಳಿಸಿ. ನಂತರ ನೀವು ಬಯಸಿದ ರೀತಿಯಲ್ಲಿ ನಿಮ್ಮ ಜೀವನವನ್ನು ಮುಂದುವರಿಸಿ. ಯಾರೂ ನಿಮ್ಮನ್ನು ತಡೆಯುವುದಿಲ್ಲ, ಆದರೆ ನಂಬಿದವರಿಗೆ ಮೋಸ ಮಾಡುವುದು ಸರಿಯಲ್ಲ ಎಂದು ನೆಟ್ಟಿಗರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ನೀವು ಈ ವಿಡಿಯೋ ಕುರಿತು ಏನು ಯೋಚಿಸುತ್ತೀರಿ? ಕಾಮೆಂಟ್‌ನಲ್ಲಿ ತಿಳಿಸಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ