ಕುಡಿದು ಬೆತ್ತಲೆಯಾಗಿ ರಸ್ತೆಯಲ್ಲಿ ಅಲೆದಾಟ... ಜೆಡಿಯು ಮುಖಂಡನ ಬಂಧನ : ವಿಡಿಯೋ ವೈರಲ್

Suvarna News   | Asianet News
Published : Feb 24, 2022, 11:05 AM ISTUpdated : Feb 24, 2022, 11:08 AM IST
ಕುಡಿದು ಬೆತ್ತಲೆಯಾಗಿ ರಸ್ತೆಯಲ್ಲಿ ಅಲೆದಾಟ... ಜೆಡಿಯು ಮುಖಂಡನ ಬಂಧನ : ವಿಡಿಯೋ ವೈರಲ್

ಸಾರಾಂಶ

  ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಜೆಡಿಯು ಮುಖಂಡನ ಅಲೆದಾಟ ಮದ್ಯ ನಿಷೇಧ ಮಾಡಿದ ಬಿಹಾರ ನಿತೀಶ್‌ ಸರ್ಕಾರಕ್ಕೆ ಮುಜುಗರ ಕುಡಿದು ಬೆತ್ತಲೆ ತಿರುಗಾಡುತ್ತಿರುವ ವಿಡಿಯೋ ವೈರಲ್

ಬಿಹಾರ(ಫೆ.24): ಬಿಹಾರ ಸಿಎಂ ನಿತೀಶ್‌ಕುಮಾರ್‌ (Nitish Kumar) ಸಮಾಜ ಸುಧಾರಣೆಯಂತಹ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಾ ಜಾಗೃತಿ ಅಭಿಯಾನದಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಅವರದೇ ಪಕ್ಷದ ನಾಯಕನೋರ್ವ ಎಣ್ಣೆ ಹೊಡೆದು ಬೆತ್ತಲಾಗಿ ರಸ್ತೆಯಲ್ಲಿ ತಿರುಗಾಡುವ ಮೂಲಕ ತನ್ನದೇ ಪಕ್ಷದ ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾನೆ. ಬಿಹಾರದ ನಳಂದಾ (Nalanda) ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಜೆಡಿಯು ನಾಯಕ ಜಯಪ್ರಸಾದ್‌ ಆಲಿಯಾಸ್‌ ಕಾಲು (Jay Prakash Prasad alias Kalu) ಎಂಬಾತ ಕಂಠಪೂರ್ತಿ ಕುಡಿದು ತನ್ನ ಬಟ್ಟೆಗಳನ್ನು ಕಿತ್ತೆಸೆದು ರಸ್ತೆಗಳಲ್ಲಿ ತಿರುಗಾಡುವ ಮೂಲಕ ರಂಪಾಟವೆಸಗಿದ್ದಾನೆ. ಈತನ ದುರ್ವರ್ತನೆ ಸ್ಥಳೀಯರ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಯಪ್ರಸಾದ್‌ ಆಲಿಯಾಸ್‌ ಕಾಲು ಇಸ್ಲಾಂಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಯುನ ಯುವ ಘಟಕದ ಉಸ್ತುವಾರಿ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಜಯಪ್ರಸಾದ್‌ ಜೆಡಿಯುನೊಂದಿಗೆ ಬಹಳ ಹಿಂದಿನಿಂದಲೂ ಒಡನಾಟ ಹೊಂದಿದ್ದಾರೆ ಎಂದು ಇಸ್ಲಾಂಪುರ (Islampur) ಜೆಡಿಯುನ ಬ್ಲಾಕ್‌ ಅಧ್ಯಕ್ಷ ನಾಯಕ ತನ್ವಿರ್ ಅಲಂ (Tanvir Alam) ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಮುಖಂಡ ಕುಡಿದು ತೂರಾಡುತ್ತಿರುವ ವಿಡಿಯೋ ವೈರಲ್‌ ಆದ ಬಳಿಕ ನಾವು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಅಲಂ ಹೇಳಿದರು.

Hubballi: ಕುಡುಕ ಚಾಲಕನ ಅವಾಂತರ, ಫ್ಲೈಓವರ್‌ನಿಂದ ಕೆಳಗೆ ಬಿದ್ದ ಆ್ಯಂಬುಲೆನ್ಸ್‌..!

ವಿಡಿಯೋದಲ್ಲಿ ಕಾಣಿಸುವಂತೆ ಜಯಪ್ರಸಾದ್‌ ತನ್ನೆಲ್ಲಾ ಉಡುಪುಗಳನ್ನು ಕಳಚಿ ರಸ್ತೆಯಲ್ಲಿ ಅಲೆದಾಡಿದ್ದಾರೆ. ಈ ವೇಳೆ ಜಯಪ್ರಸಾದ್‌ ಸಹೋದರ ಮನೆಯೊಳಗೆ ಇರುವಂತೆ ಜಯಪ್ರಸಾದ್‌ಗೆ ಹೇಳಿದ್ದಾರೆ. ಆದರೆ ಇದನ್ನು ಕೇಳದ ಆತ, ಸಹೋದರನ ಮೇಲೆಯೂ ದೌರ್ಜನ್ಯವೆಸಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪ್ರತ್ಯಕ್ಷದರ್ಶಿಗಳು ಘಟನೆಯ ವಿಡಿಯೋ ಮಾಡಿ ಇಸ್ಲಾಂಪುರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ.

ಬಿಹಾರದಲ್ಲಿ ಶಿಕ್ಷಕರಿಗೆ ಕುಡುಕರ ಹಿಡಿಯುವ ಕೆಲಸ: ರಾಜ್ಯ ಶಿಕ್ಷಣ ಇಲಾಖೆ ಆದೇಶ!

ಜಗದೀಶ್‌ ಪುರ ( agdishpur) ಗ್ರಾಮದಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದಾನೆ ಎಂಬ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ನಂತರ ನಾವು ಸ್ಥಳಕ್ಕೆ ಹೋದಾಗ ಆತ ಸಂಪೂರ್ಣ ಬೆತ್ತಲೆಯಾಗಿದ್ದ ಹಾಗೂ ಕುಡಿತದ ನಶೆಯಲ್ಲಿ ಇದ್ದ. ತಪಾಸಣೆ ನಡೆಸಿದಾಗ ಆತ ಕುಡಿದಿರುವುದು ಧೃಡಪಟ್ಟಿದ್ದು, ಈತನ ವಿರುದ್ಧ ಮದ್ಯಪಾನ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದಿ ಇಸ್ಲಾಂಪುರ ಪೊಲೀಸ್‌ ಠಾಣೆಯ ಅಧಿಕಾರಿ ಚಂದ್ರಶೇಖರ್ ಸಿಂಗ್(Chandrashekher Singh) ಹೇಳಿದರು.

ಗಣತಿ, ಚುನಾವಣೆ, ಬಿಸಿಯೂಟ ಹೀಗೆ ಮೊದಲೇ ನಾನಾ ಕಾರ್ಯಗಳಲ್ಲಿ ವ್ಯಸ್ತರಾಗಿರುವ ಶಾಲಾ ಶಿಕ್ಷಕರಿಗೆ ಬಿಹಾರದಲ್ಲಿ (Bihar School Teachers) ಹೊಸತೊಂದು ಜವಾಬ್ದಾರಿ ಹೆಗಲಿಗೆ ಬಿದ್ದಿದೆ. ಅದು - ಕುಡುಕರನ್ನು ಹಿಡಿಯುವುದು! ಬಿಹಾರದಲ್ಲಿ 2016ರಿಂದ ಸಂಪೂರ್ಣ ಪಾನನಿಷೇಧ ಜಾರಿಯಲ್ಲಿದೆ. ರಾಜ್ಯದಲ್ಲಿ ಎಲ್ಲೂ ಅಕ್ರಮ ಅಥವಾ ಸಕ್ರಮ ಮದ್ಯ ಸಿಗುವಂತಿಲ್ಲ. ಆದರೂ ಶಾಲೆಗಳ ಕಾಂಪೌಂಡ್‌ ಸೇರಿದಂತೆ ಅನೇಕ ಕಡೆ ಕುಡಿದು ಎಸೆದ ಸಾರಾಯಿ ಬಾಟಲಿಗಳು ಸಿಗುತ್ತಿವೆ. ಜನರು ಕುಡಿದು ತೂರಾಡುವುದು ಅಲ್ಲಲ್ಲಿ ಕಂಡುಬರುತ್ತಿದೆ. 

ಹೀಗಾಗಿ ಯಾರು ಕುಡಿಯುತ್ತಾರೆ ಮತ್ತು ಅವರಿಗೆ ಯಾರು ಮದ್ಯ ಮಾರಾಟ ಮಾಡುತ್ತಾರೆ ಎಂಬುದನ್ನು ಪತ್ತೆಹಚ್ಚುವಂತೆ ರಾಜ್ಯ ಶಿಕ್ಷಣ ಇಲಾಖೆಯು (education Department) ಜಿಲ್ಲಾ ಶಿಕ್ಷಣ ಅಧಿಕಾರಿಗಳು, ಪ್ರಿನ್ಸಿಪಾಲ್‌ಗಳು, ಶಿಕ್ಷಕರು ಮತ್ತು ಶೈಕ್ಷಣಿಕ ಕ್ಷೇತ್ರದ ಸ್ವಯಂಸೇವಕರಿಗೆ ಆದೇಶ ನೀಡಿದೆ. ಅದರಂತೆ ಅವರು ಇನ್ನುಮುಂದೆ ಕುಡುಕರನ್ನೂ, ಮದ್ಯದ ವ್ಯಾಪಾರಿಗಳನ್ನೂ ಪತ್ತೆಹಚ್ಚಿ ಸರ್ಕಾರದ ಪಾನನಿರೋಧ ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ