
ಪಟನಾ: ಇತ್ತೀಚೆಗೆ ಮಧ್ಯಪ್ರದೇಶದಲ್ಲಿ 90 ಡಿಗ್ರಿ ತಿರುವಿನ ಫ್ಲೈಓವರ್ ನಿರ್ಮಾಣ ಮಾಡಿದ್ದಕ್ಕೆ ಜನಾಕ್ರೋಶವಾಗಿತ್ತು. ಈಗ ಇಂಥದ್ದೇ ಜನಾಕ್ರೋಶಕ್ಕೆ ತುತ್ತಾಗುವ ಸರದಿ ಬಿಹಾರ ಸರ್ಕಾರದ್ದು. ಏಕೆಂದರೆ ಮರಗಳನ್ನು ಕಡಿಯದೇ 100 ಕೋಟಿ ರು. ವೆಚ್ಚದಲ್ಲಿ ಮರಗಳ ಮಧ್ಯದಲ್ಲೇ 7.48 ಕಿ.ಮೀ. ಹೆದ್ದಾರಿ ನಿರ್ಮಿಸಲಾಗಿದೆ!
ಹೌದು.. ಬಿಹಾರದ ಜೆಹಾನಬಾದ್ ಜಿಲ್ಲೆಯ ಪಟನಾ- ಗಯಾ ಮುಖ್ಯ ರಸ್ತೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ವಾಹನ ಸವಾರರ ಸಾವಿಗೆ ಆಹ್ವಾನ ನೀಡುತ್ತಿದೆ. ರಸ್ತೆ ಅಗಲೀಕರಣ ವೇಳೆ ಮರ ಕಡಿತಕ್ಕೆ ಅರಣ್ಯ ಇಲಾಖೆ ಒಪ್ಪದ ಕಾರಣ ಮರಗಳ ಸಾಲಿನಲ್ಲಿಯೇ ಜಿಲ್ಲಾಡಳಿತ ರಸ್ತೆ ನಿರ್ಮಿಸಿ ಎಡವಟ್ಟು ಮಾಡಿದೆ.
ಪಟನಾ- ಗಯಾ ಮಾರ್ಗದ ಸುಮಾರು 7.48 ಕಿ.ಮೀ ಉದ್ದದ ರಸ್ತೆಯನ್ನು 100 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಗಲೀಕರ ಣಕ್ಕೆ ಜಿಲ್ಲಾಡಳಿತ ಮುಂದಾಗಿತ್ತು. ಹೀಗಾಗಿ ಅಕ್ಕಪಕ್ಕದಲ್ಲಿರುವ ಮರಗಳನ್ನು ಕಡಿತಕ್ಕೆ ಅನುಮತಿಸುವಂತೆ ಜಿಲ್ಲಾಡಳಿತ ಅರಣ್ಯ ಇಲಾಖೆಗೆ ಮನವಿ ಮಾಡಿತ್ತು. ಆದರೆ ಇಲಾಖೆ ಅದಕ್ಕೆ ಅನುಮತಿ ನೀಡಿರಲಿಲ್ಲ. ಮರ ಕಡಿಯಬೇ ಕಾದರೆ 14 ಹೆಕ್ಟೇರ್ ಜಾಗ ಕೊಡಿ. ಅಲ್ಲಿ ಮರ ನಿರ್ಮಿಸುತ್ತೇವೆ ಎಂದು ಬೇಡಿಕೆಯಿಟ್ಟಿತ್ತು. ಆದರೆ ಇದಕ್ಕೆ ಜಿಲ್ಲಾಡಳಿತ ಒಪ್ಪಲಿಲ್ಲ. ಹೀಗಾಗಿ ಜಿಲ್ಲಾಡಳಿತ ವಿಚಿತ್ರ ಕ್ರಮ ಕೈಗೊಂಡು ಮರಗಳ ಸುತ್ತವೇ ರಸ್ತೆ ನಿರ್ಮಿಸಿದೆ.
ಇನ್ನು ಮರಗಳು ನೇರ ಸಾಲಿನಲ್ಲಿಯೂ. ಹೀಗಾಗಿ ಪ್ರಯಾಣಿಕರು ಅಡ್ಡಾದಿಡ್ಡಿ ವಾಹನ ಚಲಾಯಿಸಬೇಕಾದ ಸಂದರ್ಭ ಸೃಷ್ಟಿಯಾಗಿದೆ. ಇಲ್ಲಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ್ದು, ಇದು ಒಂದು ರೀತಿಯಲ್ಲಿ 100 ಕೋಟಿ. ರು. ಸಾವಿಗೆ ಆಹ್ವಾನ ಕೊಟ್ಟಂತೆ ಎಂದು ಸಾರ್ವಜನಿಕರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ