
ನವದೆಹಲಿ (ನ.11) ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ತೀವ್ರ ಕತೂಹಲ ಕೆರಳಿಸಿದೆ. ಎರಡು ಹಂತದಲ್ಲಿ ನಡೆದ ಮತದಾನ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ಬಿಹಾರದ ಎಕ್ಸಿಟ್ ಪೋಲ್ ಬಹಿರಂಗವಾಗಿದೆ. ಹಲವು ಸಂಸ್ಥೆಗಳು ಬಿಹಾರ ಮತಗಟ್ಟೆ ಸಮೀಕ್ಷೆ ಬಹಿರಂಗ ಮಾಡಿದೆ. ಈ ಪೈಕಿ ದೈನಿಕ್ ಬಾಸ್ಕರ್ ಪ್ರಕಟಿಸಿದ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸರಳ ಬಹುಮತ ಎಂದಿದೆ. ಇತ್ತ ಮಹಾಘಟನಬಂಧನ್ ಕೂಡ ತೀವ್ರ ಪೈಪೋಟಿ ನೀಡಲಿದೆ ಎಂದಿದೆ.
ಎನ್‌ಡಿಎ 131 ಸ್ಥಾನಗಳ ಪೈಕಿ ಬಿಜೆಪಿ 80 ಸ್ಥಾನ ಪಡೆಯಲಿದೆ ಎಂದಿದೆ. ಇತ್ತ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 45 ಸ್ಥಾನ ಪಡೆಯಲಿದೆ ಎಂದಿದೆ.
ಕಾಂಗ್ರೆಸ್, ಆರ್‌ಜೆಡಿ ನೇತೃತ್ವದ ಮಹಾಘಟನಬಂದನ ಈ ಬಾರಿ ಬಿಹಾರ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಲಿದೆ ಎಂದು ಸಮೀಕ್ಷಾ ಫಲಿತಾಂಶ ಹೇಳುತ್ತಿದೆ. 112 ಸ್ಥಾನ ಗೆಲ್ಲಲಿದೆ ಎಂದಿದೆ. ಸದ್ಯ ದೈನಿಕ್ ಭಾಸ್ಕರ್ ಎನ್‌ಡಿಎ ಸರಳ ಬಹುಮತ ನೀಡಿದೆ. ಆದರೆ ಪೈಪೋಟಿ ತೀವ್ರಗೊಂಡಿರುವ ಕಾರಣ ಅಸಲಿ ಫಲಿತಾಂಶ ಅಚ್ಚರಿ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಬಿಹಾಹದಲ್ಲಿ 243 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ಎರಡು ಹಂತದಲ್ಲಿ ನಡೆದಿತ್ತು. ಮ್ಯಾಜಿಕ್ ನಂಬರ್ 122. ಈ ಮ್ಯಾಜಿಕ್ ಸ್ಥಾನ ಪಡೆದ ಪಕ್ಷ ಸರ್ಕಾರ ರಚನೆ ಮಾಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ