ಶ್ರೀರಾಮ ಮಂದಿರ ಉದ್ಘಾಟನೆಗೆ ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಆಹ್ವಾನ!

By Suvarna News  |  First Published Jan 2, 2024, 7:52 PM IST

ಯುಪಿ ಸಿಎಂ ಹೊರತುಪಡಿಸಿ ಇತರ ರಾಜ್ಯದ ಮುಖ್ಯಮಂತ್ರಿ ಹಾಗೂ  ರಾಜ್ಯಪಾಲರಿಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಿದಿರಲು ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ಇದರ ನಡುವೆ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕ ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಆಹ್ವಾನ ನೀಡಲಾಗಿದೆ.
 


ಪಾಟ್ನಾ(ಜ.02) ರಾಮ ಮಂದಿರ ಉದ್ಘಾಟನೆಗೆ ಕೆಲವು ದಿನಗಳು ಮಾತ್ರ ಬಾಕಿ. ಐತಿಹಾಸಿಕ ಕ್ಷಣಕ್ಕೆ ಆಯೋಧ್ಯೆ ಸಜ್ಜಾಗಿದೆ.  ಇದೀಗ ಗಣ್ಯರನ್ನು ಪ್ರಾಣಪ್ರತಿಷ್ಠೆಗೆ ಆಹ್ವಾನ ನೀಡುವ ಕಾರ್ಯವೂ ಭರದಿಂದ ಸಾಗಿದೆ. ಈಗಾಗಲೇ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಇದರ ನಡುವೆ ಬಿಹಾರ ಮುಖ್ಯಮಂತ್ರಿ, ಇಂಡಿಯಾ ಒಕ್ಕೂಟದ ಪ್ರಮುಖ ನಾಯಕ ನಿತೀಶ್ ಕುಮಾರ್‌ಗೆ ಆಹ್ವಾನ ನೀಡಲಾಗಿದೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಕಾಮೇಶ್ವರ ಚೌಪಾಲ್ ಇಂದು ನಿತೀಶ್ ಕುಮಾರ್ ಭೇಟಿಯಾಗಿ ಆತ್ಮೀಯವಾಗಿ ಪ್ರಾಣಪ್ರತಿಷ್ಠೆಗೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ.

ಭದ್ರತಾ ಕಾರಣಗಳಿಂದ ರಾಮ ಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರನ್ನು ಆಹ್ವಾನಿಸದಿರಲು ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ರಾಜ್ಯಪಾಲೆ ಅನಂದಿ ಬೆನ್ ಪಟೇಲ್ ಹೊರತುಪಡಿಸಿದರೆ ಇತರ ರಾಜ್ಯದ ಮುಖ್ಯಮಂತ್ರಿಗಳನ್ನು ಪ್ರಾಣಪ್ರತಿಷ್ಠೆಗೆ ಆಹ್ವಾನಿಸಿದೇ, ವಿಶೇಷ ದರ್ಶನಕ್ಕೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ. ಇದೀಗ ತೀರ್ಥ ಕ್ಷೇತ್ರ ಟ್ರಸ್ಟ್ ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಆಹ್ವಾನ ನೀಡಿದೆ.

Tap to resize

Latest Videos

ರಾಮ ಮಂದಿರ ಪ್ರಾಣಪತಿಷ್ಠೆಗೆ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಆಹ್ವಾನ!

ಜನವರಿ 1 ರಂದು ನಿತೀಶ್ ಕುಮಾರ್‌ಗೆ ಆಹ್ವಾನ ನೀಡಲು ನಿರ್ಧರಿಸಲಾಗಿತ್ತು. ಆದರೆ ಪೂರ್ವ ಅನಮತಿ ಪಡೆಯದ ಕಾರಣ ನಿತೀಶ್ ಕುಮಾರ್ ಭೇಟಿಯಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂದು ಪೂರ್ವ ಅನುಮತಿ ಪಡೆದು ನಿತೀಶ್ ಕುಮಾರ್ ಭೇಟಿಯಾಗಿದ್ದೇವೆ. ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ಆಹ್ವಾನ ನೀಡಿದ್ದೇವೆ ಎಂದು ಚೌಪಾಲ್ ಹೇಳಿದ್ದಾರೆ. 

ನಿತೀಶ್ ಕುಮಾರ್‌ ಬಿಹಾರ ಮುಖ್ಯಮಂತ್ರಿ ಅನ್ನೋ ಕಾರಣಕ್ಕೆ ಆಹ್ವಾನ ನೀಡಿಲ್ಲ. ದೇಶದ ಪ್ರಮುಖ ಪಕ್ಷವಾಗಿರುವ ಜೆಡಿಯು ನಾಯಕ ಅನ್ನೋ ಕಾರಣಕ್ಕೆ ಆಹ್ವಾನ ನೀಡಲಾಗಿದೆ. ನಿತೀಶ್ ಕುಮಾರ್ ರೀತಿಯಲ್ಲೇ ದೇಶದ ಪ್ರಮುಖ ಪಕ್ಷಗಳ ನಾಯಕರನ್ನು ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ಆಹ್ವಾನಿಸಲಾಗಿದೆ. ಇದೀಗ ನಿತೀಶ್ ಕುಮಾರ್ ಪ್ರಾಣ ಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುತ್ತಾರಾ ಅನ್ನೋ ಕುತೂಹಲ ಮನೆ ಮಾಡಿದೆ. ಕಾರಣ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರನ್ನು ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಈ ಪೈಕಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಾಲ್ಗೊಳ್ಳುವ ಕುರಿತು ಯಾವುದೇ ಅಧಿಕೃತ ನಿರ್ಧಾರ ಘೋಷಿಸಿಲ್ಲ. ಇತ್ತ ಕಮ್ಯೂನಿಸ್ಟ್ ಪಾರ್ಟಿ ನಾಯಕರು ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ.  

ರಾಮ ಮಂದಿರ ಉದ್ಘಾಟನೆ ಬೆನ್ನಲ್ಲೇ ಮುಸ್ಲಿಂ ಸಮುದಾಯಕ್ಕೆ ಒವೈಸಿ ಮಹತ್ವದ ಕರೆ!

click me!