
ತೆಲಂಗಾಣ(ಜ.02) ಶಾಸಕರು, ರಾಜಕೀಯ ನಾಯಕರು ಸಾರ್ವಜನಿಕ ಕಾರ್ಯಕ್ರಮ, ಖಾಸಗಿ ಕಾರ್ಯಕ್ರಮಗಳಲ್ಲಿ ಅತೀವ ಎಚ್ಚರಿಕೆಯಿಂದ ಇರುತ್ತಾರೆ. ಕಾರಣ ಇದು ವೈರಲ್ ಜಮಾನ. ಆಡುವ ಮಾತು, ನಡೆಯಲ್ಲಿ ಒಂದಿಷ್ಟು ವ್ಯತ್ಯಾಸವಾದರೂ ರಾಜಕೀಯ ಜೀವನಕ್ಕೆ ಕಪ್ಪುಚುಕ್ಕೆಯಾಗಲಿದೆ. ಆದರೆ ಕಾಂಗ್ರೆಸ್ ಶಾಸಕ ಮಾತ್ರ ಇದ್ಯಾವುದಕ್ಕೂ ಕ್ಯಾರೇ ಎನ್ನದೇ ತನ್ನ ಸುಪ್ತ ಪ್ರತಿಭ ಹೊರಹಾಕಿ ವಿವಾದಕ್ಕೆ ಕಾರಣವಾಗಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತೆಲಂಗಾಣದ ಮನಕೊಂಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕವ್ವಂಪಲ್ಲಿ ಸತ್ಯನಾರಾಯಣ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ತನ್ನ ಎದುರು ಕ್ಯಾಮೆರಾ ಇದೇ ಅನ್ನೋ ಜ್ಞಾನವಿದ್ದರೂ ಅನುಚಿತವಾಗಿ ವರ್ತಿಸಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಕಾಂಗ್ರೆಸ್ ಸಚಿವ, ಶಾಸಕ ಸೇರಿದಂತೆ ಹಲವು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹೊಸ ವರ್ಷದ ಪ್ರಯುಕ್ತ ಆಯೋಜಿಸಿದ ಕಾರ್ಯ್ರಮ ಅನ್ನೋ ಮಾಹಿತಿ ಲಭ್ಯವಾಗಿದೆ. ಆದರೆ ಶಾಸಕ ಸತ್ಯನಾರಾಯಣ ನಡೆ ಮಾತ್ರ ಭಾರಿ ವಿವಾದಕ್ಕೆ ಗುರಿಯಾಗಿದೆ. ತೆಲಂಗಾಣ ಕಾಂಗ್ರೆಸ್ ಸರ್ಕಾರದ ಸಚಿವ ಪೊನ್ನಮ್ ಪ್ರಭಾಕರ್ ಸಮ್ಮುಖದಲ್ಲೇ ಈ ಘಟನೆ ನಡೆದಿದೆ.
ಉಚಿತ ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರ ಫೈಟಿಂಗ್: ಕಾಂಗ್ರೆಸ್ ಸರ್ಕಾರವೇ ಕಾರಣವೆಂದ ಪ್ರಯಾಣಿಕರು!
ಕಾಂಗ್ರೆಸ್ ಕಾರ್ಯಕರ್ತರು, ಶಾಸಕರು ಹಾಗೂ ಸಚಿವರ ಅಪಾರ ಬೆಂಬಲಿಗರ ನಡುವೆ ಕೇಕ್ ಕತ್ತರಿಸಲಾಗಿತ್ತು. ಈ ವೇಳೆ ಮಹಿಳೆಯೊಬ್ಬರು ಕೇಕ್ ಕತ್ತರಿಸಿ ಹಂಚಿದ್ದಾರೆ. ಈ ವೇಳೆ ಕೊಂಚ ದೂರದಲ್ಲಿದ್ದ ಶಾಸಕ ಸತ್ಯನಾರಾಯಣ ಎಲ್ಲರನ್ನೂ ತಳ್ಳಿಕೊಂಡು ಕೇಕ್ ಬಳಿ ಬಂದಿದ್ದಾರೆ. ಬಳಿಕ ಕೇಕ್ ಕತ್ತರಿಸಿ ಹಂಚುತ್ತಿದ್ದ ಮಹಿಳೆಯ ಮುಖಕ್ಕೆ ಕೇಕ್ ಹಚ್ಚಿದ್ದಾರೆ. ಶಾಸಕರಿಂದ ದೂರ ಸರಿಯುವ ಹಾಗೂ ಕೇಕ್ ಹಚ್ಚುವುದನ್ನು ತಡೆಯುವ ಪ್ರಯತ್ನ ಮಾಡಿದರೂ ಶಾಸಕರು ಮಾತ್ರ ಮಹಿಳೆಯ ಮುಖಕ್ಕೆ ಕೇಕ್ ಹಚ್ಚಿದ್ದಾರೆ. ಒಂದು ಬಾರಿ ಮಾತ್ರವಲ್ಲ ಮೂರು ಬಾರಿ ಈ ರೀತಿ ಮಾಡಿದ್ದಾರೆ. ಆರಂಭದಲ್ಲೇ ಕೆನ್ನೆಗೆ ಕೇಕ್ ಹಚ್ಚಿದ ಶಾಸಕ, ಬಳಿಕ ತುಟಿಗೆ ಹಚ್ಚಿದ್ದಾರೆ.
ಶಾಸಕರ ನಡೆಯನ್ನು ಮಹಿಳೆ ಪ್ರತಿಭಟಿಸಿದರೂ ಕ್ಯಾರೇ ಅನ್ನೋದ ಕೇಕ್ ಕ್ರೀಮ್ ಹಚ್ಚಿ ಶಾಸಕರು ಸಂಭ್ರಮಿಸಿದ್ದಾರೆ. ಕೇಕ್ ಕತ್ತರಿಸಿದ ಬಳಿಕ ಪಾರ್ಟಿ ಜೋರಾಗಿದೆ. ಡಿಜೆ ಮ್ಯೂಸಿಕ್‌ಗೆ ಎಲ್ಲರೂ ಹೆಜ್ಜೆ ಹಾಕಿದ್ದಾರೆ. ಇದೇ ವೇಳೆ ಶಾಸಕರು ಇಬ್ಬರು ಮಹಿಳೆಯರ ಕೈಹಿಡಿದು ಡ್ಯಾನ್ಸ್ ಮಾಡುವ ಪ್ರಯತ್ನ ಮಾಡಿದ್ದಾರೆ. ಮಹಿಳೆಯರು ಡ್ಯಾನ್ಸ್‌ಗೆ ಹಿಂದೇಟು ಹಾಕಿದ್ದರೂ ಶಾಸಕರು ಮಾತ್ರ ಮಹಿಳೆಯರ ಕೈಹಿಡಿದು ಡ್ಯಾನ್ಸ್ ಮಾಡಲು ಒತ್ತಾಯಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣಾಗಿದೆ.
ಸಚಿವ ಮಧು ಭ್ರಷ್ಟಾಚಾರ ಶೀಘ್ರವೇ ತೆರೆದಿಡುವೆ: ಪ್ರಣವಾನಂದ ಸ್ವಾಮೀಜಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ