ಬದಲಾವಣೆಗೆ ಸಾಕ್ಷಿಯಾದ ಕಾಶ್ಮೀರ, ಲಾಲ್‌ಚೌಕ್‌ನಲ್ಲಿ ಹಿಂದೆಂದೂ ಕಂಡಿರದ ಹೊಸ ವರ್ಷದ ಸಂಭ್ರಮ!

By Santosh Naik  |  First Published Jan 2, 2024, 5:44 PM IST

ಹಿಂಸೆ, ರಕ್ತಪಾತದಿಂದಲೇ ಕುಖ್ಯಾತಿ ಪಡೆದಿದ್ದ ಶ್ರೀನಗರದ ಐತಿಹಾಸಿಕ ಲಾಲ್ ಚೌಕ್‌ನಲ್ಲಿ  2024  ನೇ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿತು. ಹೊಸವರ್ಷದ ಸ್ವಾಗತಕ್ಕೆ ನೂರಾರು ಜನರು ಭಾಗಿಯಾಗಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
 


ಸಿಂಧು ಕೆ ಟಿ, ಕುವೆಂಪು ವಿಶ್ವವಿದ್ಯಾಲಯ

ಶ್ರೀನಗರ (ಜ.2): ಕಾಶ್ಮೀರದ ರಾಜಧಾನಿ ಸಾಂಪ್ರದಾಯಿಕವಾಗಿ ರಾಜಕೀಯ ಚರ್ಚೆಗಳಿಗೆ  ಯಾವಾಗಲೂ ಮುಂದಿರುವ  ನಗರ. ಜೊತೆಗೆ ರಕ್ತಪಾತ ಮತ್ತು ಹಿಂಸಾಚಾರಕ್ಕೆ ಕುಖ್ಯಾತಿ ಪಡೆದಿರುವ ವಾಣಿಜ್ಯ ಕೇಂದ್ರ ಶ್ರೀನಗರದ ಐಕಾನಿಕ್ ಲಾಲ್ ಚೌಕ್ ನಲ್ಲಿ (Lal Chowk) ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಜನರು ಹೊಸವರ್ಷವನ್ನು (New Year) ಹೆಚ್ಚು ಉತ್ಸಾಹದಿಂದ  ಸ್ವಾಗತಿಸಿದರು. ಲಾಲ್ ಚೌಕ್‌ನಲ್ಲಿ ಬಾಲಿವುಡ್ ಹಾಡುಗಳನ್ನು (bollywood song) ಹಾಡುತ್ತಾ ಮತ್ತು ನೃತ್ಯ ಮಾಡುತ್ತ, ತಮ್ಮ ಮೊಬೈಲ್ ಫೋನ್‌ಗಳಲ್ಲಿ  ಕಾರ್ಯಕ್ರಮವನ್ನು ಸೆರೆಹಿಡಿದರು. 2023ರ  ಡಿಸೆಂಬರ್ 31ರಂದು ಲಾಲ್ ಚೌಕ್‌ನಲ್ಲಿ ನಡೆದ ಆಚರಣೆಯು ಹೊಸ ವರ್ಷದ ಆಚರಣೆಯು ಮಾತ್ರವಾಗಿರದೆ, ಏಕತೆ, ಸಾಮರಸ್ಯ, ವೈವಿಧ್ಯತೆ ಮತ್ತು ಪ್ರದೇಶದಲ್ಲಿ ಶಾಂತಿಯುತ ಸಹಬಾಳ್ವೆ ಮತ್ತು ಸಾಮೂಹಿಕ ಬದ್ಧತೆಯನ್ನು ಸಂಕೇತಿಸುತ್ತದೆ. ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರು (Tourist) ಮತ್ತು ಸ್ಥಳೀಯರು  ಅತ್ಯಂತ ಪ್ರಸಿದ್ಧವಾದ ಕ್ಲಾಕ್‌ ಟವರ್‌ನಲ್ಲಿ ಹೊಸವರ್ಷ ಸಮಾರಂಭದಲ್ಲಿ ಪಾಲ್ಗೊಂಡರು.  ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಮೊದಲ ಬಾರಿಗೆ,  ಯಾವುದೇ ದ್ವೇಷ ವೈಷಮ್ಯವಿಲ್ಲದೆ, ಶ್ರೀನಗರದ ಲಾಲ್ ಚೌಕ್ ನಲ್ಲಿ ಹೊಸ ವರ್ಷ ಆಚರಿಸಲಾಯಿತು. 

Tap to resize

Latest Videos

ಬೇಸಿಗೆಯ ರಾಜಧಾನಿ (capital of summer) ಎಂದೇ ಕರೆಸಿಕೊಳ್ಳುವ ಶ್ರೀನಗರದ ಐಕಾನಿಕ್ ಲಾಲ್ ಚೌಕ್  ಸೇರಿದಂತೆ  ಗುಲ್ಮಾರ್ಗ್ (Gulmarg), ಪಹಲ್ಗಾಮ್ (Pahalgam) ಮತ್ತು ಸೋನ್‌ಮಾರ್ಗ್‌ನ (Sonamarg) ಪ್ರವಾಸಿ ರೆಸಾರ್ಟ್‌ಗಳು ಹೊಸವರ್ಷಕ್ಕೆ ಸಿಂಗಾರಗೊಂಡಿದ್ದು, ಮಾತ್ರವಲ್ಲದೆ ಜನರನ್ನು ಸಂಗೀತದ ಕಡಲಲ್ಲಿ ತೇಲಿಸಿದವು. ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯೂ ಶ್ರೀನಗರದ ಘಂಟಾ ಘರ್‌ (Ghanta Ghar)ನಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿತ್ತು ಮತ್ತು ಲಾಲ್ ಚೌಕ್ ಅನ್ನು  ದೀಪಗಳಿಂದ ಅಲಂಕರಿಸಲ್ಪಟ್ಟಿತು.

ಏಕತೆ ಮತ್ತು ಭರವಸೆಯನ್ನು ಸೂಚಿಸುವ ಬಣ್ಣಗಳಿಂದ ಸ್ಥಳೀಯ ಕಲಾವಿದರು ಚೌಕವನ್ನು ಅಲಂಕರಿಸಿದರು. ಗಡಿಯಾರದಲ್ಲಿ 00:00 ಗಂಟೆ ತೋರಿಸುತ್ತಿದ್ದಂತೆ, ಜನರ ಸಂಭ್ರಮಕ್ಕೆ ಕೊನೆಯೆ ಇರಲಿಲ್ಲ.  

ಲಾಲ್ ಚೌಕ್‌ನಲ್ಲಿನ ಹೊಸ ವರ್ಷ ಆಚರಣೆ ಯಾಕಿಷ್ಟು ವಿಶೇಷ ?:  ಕ್ಲಾಕ್‌ ಟವರ್‌ 1947 ರಿಂದ ಜಮ್ಮು ಮತ್ತು ಕಾಶ್ಮೀರದ ಹೀನಾಯ ರಾಜಕೀಯ ಇತಿಹಾಸಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿರುವ ಗೋಪುರ. 1990 ರಿಂದ ಸಾಕಷ್ಟು ರಕ್ತಪಾತ ಮತ್ತು ಹಿಂಸಾಚಾರದಿಂದಲೇ ಕುಖ್ಯಾತಿ ಪಡೆದಿತ್ತು. ನಂತರ ಅನೇಕ ರಾಜಕಾರಣಿಗಳು ಕ್ಲಾಕ್ ಟವರ್‌ನಲ್ಲಿ ಹಿಂಸಾತ್ಮಕ ಮತ್ತು ಭಾವೋದ್ರಿಕ್ತ ಭಾಷಣಗಳನ್ನು ಮಾಡಿದರು, ಇದೇ ಸ್ಥಳದಲ್ಲಿ ನಿಂತಿ ಹೆಚ್ಚಿನವರು ಪಾಕಿಸ್ತಾನದ ಹಾಗೂ ಪ್ರತ್ಯೇಕತಾವಾದಿಗಳ ಧ್ವಜಗಳನ್ನು ಹಾರಿಸಿದ್ದರು.

ಕಾಶ್ಮೀರ ಶಾಂತಿ ಕದಡಲಿದೆ ಎಂದವರೇ ಲಾಲ್‌ಚೌಕ್‌ನಲ್ಲಿ ತಿರಂಗ ಹಾರಿಸಿದ್ದಾರೆ, ಮೋದಿ ಮಾತಿಗೆ ಕಾಂಗ್ರೆಸ್ ಸೈಲೆಂಟ್!

1990 ರಲ್ಲಿ ಬಂಡಾಯ ಭುಗಿಲೆದ್ದ ನಂತರ, ಲಾಲ್ ಚೌಕ್ ಪ್ರತ್ಯೇಕತಾವಾದಿಗಳು ಮತ್ತು ಸರ್ಕಾರದ ನಡುವಿನ ಮಾನಸಿಕ ಯುದ್ಧಭೂಮಿಯಾಗಿದೆ. 2008 ಮತ್ತು 2010ರಲ್ಲಿ ಪ್ರತ್ಯೇಕತಾವಾದಿಗಳು ಆಗಾಗ್ಗೆ ಲಾಲ್ ಚೌಕ್ ಕಡೆಗೆ ಮೆರವಣಿಗೆಗೆ ಕರೆ ನೀಡುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಪ್ರತ್ಯೇಕತಾವಾದಿಗಳು ಗಡಿಯಾರ ಗೋಪುರದ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸುವ ಮೂಲಕ ಭಾರತದ ಸಾರ್ವಭೌಮನತ್ವವನ್ನೇ ಪ್ರಶ್ನೆ ಮಾಡಿದ್ದರು. ಲಾಲ್ ಚೌಕ್ ಕಡೆಗೆ ಜನರು ಮೆರವಣಿಗೆ ನಡೆಸುವುದನ್ನು ತಡೆಯಲು ಪೊಲೀಸರು ಮತ್ತು ಭದ್ರತಾ ಪಡೆಗಳು ಪ್ರದೇಶವನ್ನು ಬ್ಯಾರಿಕೇಡ್ ಮಾಡಬೇಕಾದ ಸಂದರ್ಭ ಸೃಷ್ಟಿಯಾಗುತ್ತಿತ್ತು. ಆದರೆ 370ನೇ ವಿಧಿ ರದ್ದುಗೊಂಡ ಬಳಿಕ ಲಾಲ್‌ಚೌಕ್‌ನ ಐತಿಹಾಸಿಕ ಕ್ಲಾಕ್‌ ಟವರ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಮಾತ್ರವೇ ಸ್ಥಾನ ಪಡೆದಿದೆ.

ಹೊಸ ವರ್ಷ ಸಂಭ್ರಮಾಚರಣೆಗೂ ಮುನ್ನ ಭಾರತಕ್ಕೆ ಆಘಾತ, ಕಾಶ್ಮೀರದ ಕುಪ್ವಾರದಲ್ಲಿ ಭೂಕಂಪ!

ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್ (SMC) ಕಮಿಷನರ್ ಮತ್ತು ಶ್ರೀನಗರ ಸ್ಮಾರ್ಟ್ ಸಿಟಿಯ ಸಿಇಒ ಅಥರ್ ಅಮೀರ್ ಖಾನ್ ಅವರು ಈ ಸಂದರ್ಭವನ್ನು ನಗರವು ಹಿಂದೆಂದೂ ನೋಡಿಲ್ಲ ಎಂದು ಬಣ್ಣಿಸಿದರು. “ಇದೀಗ ಶ್ರೀನಗರ ಚೌಕ, ಲಾಲ್ ಚೌಕ್! ಹಿಂದೆಂದೂ ಕಂಡರಿಯದ ನಗರ ಜೀವನ. ಆಚರಣೆ, ಹಿಂದೆಂದಿಗಿಂತಲೂ ಉತ್ಸಾಹ!" ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಅಥರ್ ಅಮೀರ್ ಖಾನ್ ಹೇಳಿದ್ದಾರೆ. 

click me!