
ಪಾಟ್ನ (ಆ.20) ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಶನ್ ಇದೀಗ ಜಾಗತಿಕ ಮಟ್ಟದಲ್ಲೂ ಪ್ರಬಲ ಮಾಧ್ಯಮವಾಗಿದೆ. ಭಾರತದಲ್ಲಿ ಕಂಟೆಂಟ್ ಕ್ರಿಯೇಶನ್ ಮೊದಲ ಹಾಗೂ ಪ್ರಮುಖ ಮಾಧ್ಯಮವಾಗಿ ಗುರುತಿಸಿಕೊಂಡಿದೆ. ಇದೀಗ ಸರ್ಕಾರಗಳು ಸೋಶಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾವನ್ನು ಗುರುತಿಸುತ್ತಿದೆ. ಇದೀಗ ಬಿಹಾರ ಮುಖ್ಯಮಂತ್ರಿ ಸಮ್ರಾಟ ಚೌಧರಿ ಮಹತ್ವದ ಘೋಷಣೆ ಮಾಡಿದ್ದಾರೆ. ಸರ್ಕಾರದ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುವ ಕೆಂಟೆಂಟ್ ಕ್ರಿಯೇಟರ್ಸ್‌ಗೆ ಸರ್ಕಾರದಿಂದ 10 ಸಾವಿರ ರೂಪಾಯಿ ಪ್ರೋತ್ಸಾಹಧನ ಘೋಷಿಸಲಾಗಿದೆ. ಒಂದು ವಿಡಿಯೋಗೆ ಗರಿಷ್ಠ 1 ಲಕ್ಷ ರೂಪಾಯಿ ವರೆಗೆ ಗಳಿಕೆ ಮಾಡಲು ಸಾಧ್ಯವಿದೆ.
ಬಿಹಾರ ಸರ್ಕಾರದ ಯೋಜನೆಗಳು, ಫಲಾನುಭವಿಗಳಿಗೆ ಆದ ಪ್ರಯೋಜನ, ರಾಜ್ಯದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ವಿಡಿಯೋ ಮಾಡಿ ಪೋಸ್ಟ್ ಮಾಡುವ ಕೆಂಟೆಂಟ್ ಕ್ರಿಯೇಟರ್ಸ್‌ಗೆ ಈ ಪ್ರೋತ್ಸಾಹ ದನ ಸಿಗಲಿದೆ. ಸರ್ಕಾರದ ಪರವಾಗಿರುವ ವಿಡಿಯೋಗಳು ಕನಿಷ್ಠ 1 ಲಕ್ಷ ವೀವ್ಸ್ ಪಡೆಯಬೇಕು. ಈ ಮೂಲಕ ಸರ್ಕಾರದಿಂದ 10 ಸಾವಿರ ರೂಪಾಯಿ ಪ್ರೋತ್ಸಾಹ ಧನ ಪಡೆಯಲು ಅರ್ಹರಾಗುತ್ತಾರೆ. ಒಂದು ವಿಡಿಯೋ 10 ಲಕ್ಷ ವೀವ್ಸ್ ಪಡೆದರೆ 1 ಲಕ್ಷ ರೂಪಾಯಿ ವರೆಗೆ ಪ್ರೋತ್ಸಾಹ ಧನ ಸಿಗಲಿದೆ
ಸೋಶಿಯಲ್ ಮೀಡಿಯಾ ನೀತಿಯಲ್ಲಿ ಬಿಹಾರ ಸರ್ಕಾರ ಮಹತ್ವದ ತಿದ್ದುಪಡಿ ತಂದಿದೆ. ಕಂಟೆಂಟ್ ಕ್ರಿಯೇಟರ್ಸ್ ನಿಯಮ ಅನುಸಾರ ನೋಂದಣಿ ಮಾಡಬೇಕು. ಹೀಗೆ ನೋಂದಣಿ ಮಾಡುವ ಕ್ರಿಯೇಟರ್ಸಗಳನ್ನು ಸರ್ಕಾರ ಕೆಲ ಮಾನದಂಡಗಳ ಆಧಾರದ ಮೇಲೆ ಪಟ್ಟಿ ಮಾಡಲಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಕ್ರಿಯೇಟರ್ಸ್ ಸರ್ಕಾರದ ಸೋಶಿಯಲ್ ಮೀಡಿಯಾ ಹೊಸ ನೀತಿಗೆ ಅನುಗುಣವಾಗಿ ಸರ್ಕಾರದ ಸಾಧನೆ, ಜನ ಕಲ್ಯಾಣ ಯೋಜನೆ, ಸಾರ್ವಜನಿಕ ಕಾರ್ಯಕ್ರಮಗಳನ್ನು ಪಾಸಿಟೀವ್ ಆಗಿ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದರೆ ಭರ್ಜರಿ ಪ್ರೋತ್ಸಾಹ ಧನ ಸಿಗಲಿದೆ.
ವಿಡಿಯೋ ಪೋಸ್ಟ್ ಮಾಡಿದ 30 ದಿನಗಳಲ್ಲಿ ಪ್ರತಿ ಲಕ್ಷ ವೀಕ್ಷಣೆಗೆ 10 ರೂಪಾಯಿಯಂತೆ ಸಿಗಲಿದೆ. ಗರಿಷ್ಠ 1 ಲಕ್ಷ ರೂಪಾಯಿ ಅಂದರೆ 10 ಲಕ್ಷ ವೀಕ್ಷಣೆವರೆಗೆ ಪ್ರೋತ್ಸಾಹಧನ ಸಿಗಲಿದೆ. ಈ ಕುರಿತು ಬಿಹಾರ ಸಾರ್ವಜನಿಕ ಹಾಗೂ ಸಂಪರ್ಕ ಇಲಾಖೆ ಮಾರ್ಗಸೂಚಿ ಪ್ರಕಟಿಸಲಿದೆ. ಅರ್ಹತಾ ಮಾರ್ಗಸೂಚಿ, ಪ್ರೋತ್ಸಾಹಧನ ಅರ್ಹತೆ ಸೇರಿದಂತೆ ಸಂಪೂರ್ಣ ವಿವರಗಳು ಈ ಮಾರ್ಗಸೂಚಿಯಲ್ಲಿ ಇರಲಿದೆ. ಡಿಜಿಟಲ್ ಪ್ಲಾಟ್ ಫ್ಲಾಟ್‌ಫಾರ್ಮ್ ಮೂಲಕ ಸರ್ಕಾರದ ಯೋಜನೆ, ಮಾಹಿತಿಗಳನ್ನು ಜನರಿಗೆ ತಲುಪಿಸುವ ಯೋಜನೆಯಡಿಯಲ್ಲಿ ಈ ಪ್ರೋತ್ಸಾಹಧನ ನೀಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ